ನವದೆಹಲಿ: ಅಧಿಕಾರಕ್ಕೆ ಬಂದ ವೇಳೆ ಕಲುಷಿತಗೊಂಡಿರುವ ಯಮುನಾ ನದಿಯನ್ನು ಶುಚಿಗೊಳಿಸುವ ಭರವಸೆ ನೀಡಿ ಇದುವರೆಗೂ ಯಮುನಾ ನದಿಯನ್ನು ಶುಚಿಗೊಳಿಸದ ಆಪ್ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಇದೀಗ ಅನಾರೋಗ್ಯಕ್ಕೆ ಒಳಗಾಗಿ ಶುಕ್ರವಾರ(ಅ.25) ಆಸ್ಪತ್ರೆಗೆ ದಾಖಲಾಗಿದ್ದಾರೆ.
ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 2025 ರ ವೇಳೆಗೆ ಯಮುನಾ ನದಿಯನ್ನು ಸ್ವಚ್ಛಗೊಳಿಸುವ ಭರವಸೆಯನ್ನು ನೀಡಿದ್ದರು, ಆದರೆ ಅಧಿಕಾರಕ್ಕೆ ಬಂದಾಗಿನಿಂದ ಇದುವರೆಗೂ ಯಮುನಾ ನದಿಯನ್ನು ಸ್ವಚ್ಛಗೊಳಿಸುವಲ್ಲಿ ಆಪ್ ಸರಕಾರ ವಿಫಲಗೊಂಡಿದೆ. ಈ ನಡುವೆ ನದಿಯ ಪರಿಸ್ಥಿತಿ ಪರಿಶೀಲಿಸುವಂತೆ ಮುಖ್ಯಮಂತ್ರಿ ಅತಿಶಿ ಹಾಗೂ ಅರವಿಂದ್ ಕೇಜ್ರಿವಾಲ್ ಅವರಿಗೆ ಅಕ್ಟೋಬರ್ 24 ರಂದು ಸವಾಲು ಹಾಕಿದ್ದರು. ಆದರೆ ಸಚ್‌ದೇವ ಅವರ ಮಾತಿಗೆ ಬೆಲೆ ಕೊಡದ ಆಪ್ ನಾಯಕರು ಯಮುನಾ ನದಿ ತೀರಕ್ಕೆ ಬಂದಿಲ್ಲ.
ಈ ಹಿನ್ನೆಲೆಯಲ್ಲಿ ಆಡಳಿತ ಪಕ್ಷದ ವಿರುದ್ಧ ಕಿಡಿಕಾರಿದ ದೆಹಲಿ ಬಿಜೆಪಿ ರಾಜ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಕೇಜ್ರಿವಾಲ್ ಅವರ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ತಾನು ಯಮುನಾ ನದಿಯಲ್ಲಿ ಸ್ನಾನ ಮಾಡುತಿದ್ದೇನೆ ಇದರ ಜೊತೆಗೆ ಕೇಂದ್ರ ಸರಕಾರ ಯಮುನಾ ನದಿ ಶುಚಿಗೊಳಿಸಲು ನೀಡಿದ್ದ ಕೋಟ್ಯಂತರ ರೂಗಳನ್ನು ದುರುಪಯೋಗಪಡಿಸಿಕೊಂದಿರುವುದಕ್ಕೆ ತಾಯಿ ಯಮುನಾ ಅವರನ್ನು ಕ್ಷಮಿಸಲಿ ಎಂದು ಹೇಳಿಕೊಂಡು ಕಲುಷಿತಗೊಂಡಿರುವ ಯಮುನಾ ನದಿಯಲ್ಲಿ ಮುಳುಗೇಳಿದ್ದಾರೆ.
ಇದಾದ ಬಳಿಕ ಕೆಲ ಸಮಯದಲ್ಲಿ ಮೈಯಲ್ಲಿ ತುರಿಕೆ, ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ, ಕೂಡಲೇ ಅವರನ್ನು ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ: Belekeri scam: ಶಾಸಕ ಸತೀಶ್ ಸೈಲ್ ಗೆ ಭಾರಿ ಜೈಲು ಶಿಕ್ಷೆ ಪ್ರಕಟ; ಶಾಸಕ ಸ್ಥಾನ ರದ್ದು?