ಲಂಡನ್: ಇಂಗ್ಲೆಂಡ್‌ನ ವೇಗದ ಬೌಲರ್ ಒಲ್ಲಿ ರಾಬಿನ್ಸನ್ ಅವರು ಸ್ಲೆಡ್ಜಿಂಗ್ ಮಾಡಿ ಟೀಕೆ ಎದುರಿಸುತ್ತಿದ್ದಾರೆ. ವಿಶೇಷವಾಗಿ ಎಡ್ಜ್ ಬಾಸ್ಟನ್ ನಲ್ಲಿ ನಡೆದ ಮೊದಲ ಆ್ಯಶಸ್ ಟೆಸ್ಟ್ ನಲ್ಲಿ ಉಸ್ಮಾನ್ ಖವಾಜಾ ಅವರ ವಿರುದ್ಧ ಅಶ್ಲೀಲವಾಗಿ ಸ್ಲೆಡ್ಜ್ ಮಾಡಿದ್ದಕ್ಕಾಗಿ ಹಲವಾರು ಮಾಜಿ ಆಸ್ಟ್ರೇಲಿಯಾದ ಆಟಗಾರರಿಂದ ತೀವ್ರ ಟೀಕೆಗಳನ್ನು ಎದುರಿಸಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್, ರಾಬಿನ್ಸನ್ ಅವರ ನಡವಳಿಕೆಯನ್ನು ಖಂಡಿಸಿದರು. ಅಲ್ಲದೆ ಮ್ಯಾಥ್ಯೂ ಹೇಡನ್ ಅವರು ರಾಬಿನ್ಸನ್ ಅವರನ್ನು ‘ಮರೆಯಬಹುದಾದ ಕ್ರಿಕೆಟಿಗ’ ಎಂದು ಕರೆದರು.
ಇದನ್ನೂ ಓದಿ:ಹಿರಿಯರು ‘ಹೊಂದಾಣಿಕೆ’ ಮಾಡಿಕೊಂಡಿರುವುದು ನಿಜ..: ಸಿ.ಪಿ. ಯೋಗೀಶ್ವರ್
ಮಾಜಿ ಆಟಗಾರರ ಟೀಕೆಗಳಿಗೆ ರಾಬಿನ್ಸನ್ ಅವರು ಉತ್ತರಿಸಿದ್ದಾರೆ. ಇಂತಹ ಟೀಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಅಲ್ಲದೆ ಆ್ಯಶಸ್ ಸರಣಿಯ ಸಂದರ್ಭದಲ್ಲಿ ಇಂತಹ ಮುಖಾಮುಖಿಗಳು ಅನಿವಾರ್ಯ ಎಂದು ಅವರು ಹೇಳಿದರು.
ರಾಬಿನ್ಸನ್ ಅವರು ತಮ್ಮ ಕ್ರಿಯೆಯನ್ನು ಹೇಗೆ ಗ್ರಹಿಸಿದರು ಎಂಬುದರ ಬಗ್ಗೆ ಚಿಂತಿಸುವುದಿಲ್ಲ ಎಂದರು. ನನ್ನ ದೃಷ್ಟಿಯಲ್ಲಿ, ಆ್ಯಶಸ್ ಉನ್ನತ ಮಟ್ಟದ ವೃತ್ತಿಪರ ಕ್ರೀಡೆಯನ್ನು ಪ್ರತಿನಿಧಿಸುತ್ತದೆ. ಜನರು ಅದರ ತೀವ್ರತೆಯನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ, ಅವರು ಎಲ್ಲವನ್ನೂ ನಿಭಾಯಿಸುವ ಸಾಮರ್ಥ್ಯವನ್ನು ಅವರು ಪ್ರಶ್ನಿಸಿದರು.