Advertisement

ರಾಜ್ಯದ ಅಭಿವೃದ್ಧಿಗೆ ಮೈತ್ರಿ: ಕುಮಾರಸ್ವಾಮಿ

04:46 PM Feb 08, 2021 | Team Udayavani |

ಚನ್ನಪಟ್ಟಣ: ಕೇವಲ ಸಭಾಪತಿ ಸ್ಥಾನಕ್ಕಾಗಿ ಬಿಜೆಪಿ-ಜೆಡಿಎಸ್‌ ಮೈತ್ರಿಯಾಗಿದ್ದು ಬಿಟ್ಟರೆ, ಬೇರೆ ರೀತಿ ಹೊಂದಾಣಿಕೆ ಇಲ್ಲ. ವಿಷಯಾಧಾರಿತ ಹಾಗೂ ರಾಜ್ಯದ ಅಭಿವೃದ್ಧಿಗೆ ಮೈತ್ರಿಯಾಗುತ್ತೇವೆ ವಿನಾ ಜನವಿರೋಧಿ ನೀತಿಗಳ ವಿರುದ್ಧ ಎಂದಿಗೂ ರಾಜಿ ಇಲ್ಲ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ಚನ್ನಪಟ್ಟಣ ತಾಲೂಕಿನ ಬೇವೂರಿನಲ್ಲಿ ನೂತನ ಉದ್ಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ರಾಜಕೀಯದ ಬಗ್ಗೆ ಪ್ರತಿಕ್ರಿಯಿಸಿದ ಎಚ್‌ಡಿಕೆ, ನಾನು ಸೂಕ್ಷ್ಮವಾಗಿ ಎಲ್ಲವನ್ನು ಗಮನಿಸುತ್ತಿದ್ದೇನೆ. ಧಾರ್ಮಿಕ ಗುರುಗಳೇ ಸಮಾಜದ ಪರವಾಗಿ ಹೋರಾಟಕ್ಕಿಳಿದಿದ್ದಾರೆ. ಇದು ದಾರಿತಪ್ಪುವ ಮುನ್ನ ಸರ್ಕಾರ ಎಚ್ಚರಿಕೆ ವಹಿಸಬೇಕು. ಧಾರ್ಮಿಕ ಗುರುಗಳ ಭಾವನೆಗೂ ಸರ್ಕಾರ ಗೌರವ ಕೊಡಬೇಕು ಎಂದರು.

ಇದನ್ನು ಓದಿ:ಉಪಚುನಾವಣೆ ಹೊತ್ತಲ್ಲೇ ಮಸ್ಕಿಗೆ ಮತ್ತೂಂದು ಬಂಪರ್‌!

ಪ್ರಧಾನಿ ಮೋದಿಗೆ ರೈತರ ಬಗ್ಗೆ ಗೌರವ ಇದ್ದರೆ ರೈತರ ಸಭೆ ಕರೆಯಬೇಕಿತ್ತು. ಕೃಷಿ ಮಂತ್ರಿಯನ್ನು ಬಿಟ್ಟು ಸಭೆ ಮಾಡಿಸುವ ಬದಲು ಸ್ವತಃ ಪ್ರಧಾನಿಗಳೇ ಸಭೆ ಮಾಡಲಿ. ಕೇಂದ್ರದ ಕಾಯ್ದೆಗಳಿಂದ ರೈತರಿಗೆ ಅನುಕೂಲ ಏನೆಂದು ತಿಳಿಸಿ, ಗೊಂದಲ ಪರಿಹರಿಸಬೇಕು. ರೈತರು ಅಕ್ಟೋಬರ್‌ ವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದಿದ್ದಾರೆ. ಕಳೆದ 70 ದಿನಗಳಿಂದ ದೆಹಲಿಯಲ್ಲಿ ಹೋರಾಟ ಮಾಡುತ್ತಿದ್ದು, ದೇಶದಲ್ಲಿ ಶಾಂತಿ ಕಾಪಾಡಲು ಪ್ರಧಾನಿ ಮೋದಿ ಕ್ರಮವಹಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next