Advertisement

HD Kumaraswamy: ಮೊದಲ ಬಾರಿ ಕೇಂದ್ರದಲ್ಲಿ ಸಚಿವ

01:30 AM Jun 10, 2024 | Team Udayavani |

ಬೆಂಗಳೂರು: ಜಾತ್ಯಾತೀತ ಜನತಾದಳ ಪಕ್ಷದ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ-ಚೆನ್ನಮ್ಮ ದಂಪತಿಯ ಪುತ್ರರಾಗಿ 1959ರ ಡಿ. 16ರಂದು ಜನಿಸಿದ ಎಚ್‌.ಡಿ. ಕುಮಾರಸ್ವಾಮಿ, ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದವರು.

Advertisement

ಮೊದಲು ಚಲನಚಿತ್ರ ನಿರ್ಮಾಪಕ ರಾಗಿ, ಉದ್ಯಮಿ ಯಾಗಿ ಗುರುತಿಸಿ ಕೊಂಡಿ ದ್ದರು. ಮೊದಲ ಬಾರಿಗೆ 1996ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರದಿಂದ ಗೆದ್ದು ಲೋಕ ಸಭೆಗೆ ಆಯ್ಕೆ ಯಾಗುವ ಮೂಲಕ ರಾಜಕೀಯಕ್ಕೆ ಕಾಲಿಟ್ಟ ಅವರು, 2004ರಲ್ಲಿ ರಾಮನಗರ ಕ್ಷೇತ್ರದ ವಿಧಾನ ಸಭೆ ಚುನಾವಣೆಯಲ್ಲಿ ಗೆದ್ದು, 2006ರಲ್ಲಿ ಮುಖ್ಯಮಂತ್ರಿಯೂ ಆದರು. ಕರ್ನಾಟಕದ ಮಟ್ಟಿಗೆ ಅತ್ಯಂತ ಕಿರಿಯ ವಯಸ್ಸಿಗೆ ಮುಖ್ಯಮಂತ್ರಿ ಹುದ್ದಗೇರಿ ದಾಖಲೆಯನ್ನೂ ಕುಮಾರಸ್ವಾಮಿ ಬರೆದರು.

2008ರಲ್ಲಿ ಮತ್ತೆ ರಾಮನಗರದಿಂದಲೇ ವಿಧಾನಸಭೆಗೆ ಆಯ್ಕೆಯಾದ ಅವರು ರಾಜೀನಾಮೆ ಸಲ್ಲಿಸಿ, 2009ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಪುನಃ ಲೋಕಸಭೆಗೆ ಆಯ್ಕೆಯಾ ದರು.2013 ರಲ್ಲಿ ರಾಮನಗರದಿಂದ ಗೆದ್ದಿದ್ದ ಅವರು 2018ರಲ್ಲಿ ರಾಮನಗರ ಮತ್ತು ಚನ್ನಪಟ್ಟಣದಿಂದ ಸ್ಪರ್ಧಿಸಿ ಗೆದ್ದಿದ್ದರು. 2018-19 ರಲ್ಲಿ ಮತ್ತೂಮ್ಮೆ ಮುಖ್ಯ ಮಂತ್ರಿಯಾ ಗಿಯೂ ಸೇವೆ ಸಲ್ಲಿಸಿದರು.

2023ರಲ್ಲಿ ಚನ್ನಪಟ್ಟಣದಿಂದ ಶಾಸಕ ರಾಗಿ ಆಯ್ಕೆಯಾಗಿದ್ದು, ಪ್ರಸ್ತುತ ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿದ್ದಾರೆ. ಮಂಡ್ಯ ಕ್ಷೇತ್ರದ ಮೂಲಕ 3ನೇ ಬಾರಿಗೆ ಸಂಸತ್‌ ಪ್ರವೇಶಿಸಿದ್ದು ಮೊದಲ ಬಾರಿಗೆ ಕೇಂದ್ರ ಸಚಿವರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next