Advertisement

Modi Cabinet: ಮೋದಿ ಸಂಪುಟಕ್ಕೆ ಸೇರಲಿದ್ದಾರೆ ಮಿತ್ರಪಕ್ಷಗಳ ಈ ನಾಯಕರು

11:29 AM Jun 09, 2024 | Team Udayavani |

ಹೊಸದಿಲ್ಲಿ: ಬಿಜೆಪಿ ಅಗ್ರಗಣ್ಯ ನಾಯಕ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಸಂಜೆ 7.15ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ.

Advertisement

ಇದು ಮೋದಿ ಅವರೊಂದಿಗೆ ಸುಮಾರು 30 ಮಂದಿ ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ. ಪೂರ್ಣ ಪ್ರಮಾಣದ ಮಂತ್ರಿಮಂಡಲದ ಬಲವು 78 ಮತ್ತು 81 ರ ನಡುವೆ ಇರಬಹುದೆಂದು ನಿರೀಕ್ಷಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸತತ ಮೂರನೇ ಅವಧಿಗೆ ಸಜ್ಜಾಗುತ್ತಿರುವಂತೆಯೇ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಹಲವು ಪ್ರಮುಖ ಮಿತ್ರಪಕ್ಷಗಳು ಇಂದು ಪ್ರಮಾಣವಚನ ಸ್ವೀಕರಿಸುವ ನಿರೀಕ್ಷೆಯಿದೆ. ಸಂಭಾವ್ಯ ಮಂತ್ರಿಗಳ ಸಂಕ್ಷಿಪ್ತ ನೋಟ ಇಲ್ಲಿದೆ:

ತೆಲುಗು ದೇಶಂ ಪಕ್ಷ (ಟಿಡಿಪಿ)

1 ರಾಮ್ ಮೋಹನ್ ನಾಯ್ಡು: 36 ವರ್ಷದ ರಾಮ್ ಮೋಹನ್ ನಾಯ್ಡು ಮೂರು ಬಾರಿಯ ಸಂಸದ. ಎಂಬಿಎ ಪದವೀಧರ ನಾಯ್ಡು ಅವರಿಗೆ ಕ್ಯಾಬಿನೆಟ್ ದರ್ಜೆ ಸಿಗುವುದು ಬಹುತೇಕ ಖಚಿತ.

Advertisement

2 ಚಂದ್ರಶೇಖರ್ ಪೆಮ್ಮಸಾನಿ: ಗುಂಟೂರು ಸಂಸದ ಪೆಮ್ಮಸಾನಿ ಟಿಡಿಪಿಯ ಪ್ರಮುಖ ನಾಯಕ. 48 ವರ್ಷದ ವೈದ್ಯ ಪೆಮ್ಮಸಾನಿ 5785 ಕೋಟಿ ರೂ ಆಸ್ತಿ ಹೊಂದಿದ್ದಾರೆ.

ಜನತಾ ದಳ (ಯುನೈಟೆಡ್)

1 ಲಲನ್ ಸಿಂಗ್: 69 ವರ್ಷದ ರಾಜೀವ್ ರಂಜನ್ ಸಿಂಗ್ ಅವರು ಲಲನ್ ಸಿಂಗ್ ಎಂದೇ ಪ್ರಸಿದ್ದರಾದವರು. ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಆಪ್ತ ವಲಯದಲ್ಲಿ ಕಾಣಿಸಿಕೊಂಡವರು.

2 ರಾಮನಾಥ್ ಠಾಕೂರ್: ಬಿಹಾರ ಮಾಜಿ ಸಿಎಂ ಕರ್ಪೂರಿ ಠಾಕೂರ್ ಅವರ ಪುತ್ರ ರಾಮನಾಥ್ ಠಾಕೂರ್ ರಾಜ್ಯಸಭಾ ಸಂಸದರಾಗಿದ್ದಾರೆ.

ಜಾತ್ಯಾತೀತಾ ಜನತಾ ದಳ

ಎಚ್ ಡಿ ಕುಮಾರಸ್ವಾಮಿ: ಕರ್ನಾಟಕದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಈ ಬಾರಿ ಮೋದಿ ಸಂಪುಟ ಸೇರುವ ಸಾಧ್ಯತೆಯಿದೆ. ಮಂಡ್ಯದಿಂದ ಅವರು ಗೆದ್ದು ಲೋಕಸಭೆ ಪ್ರವೇಶಿಸಿದ್ದಾರೆ.

ಲೋಕ ಜನಶಕ್ತಿ ಪಾರ್ಟಿ

ಚಿರಾಗ್ ಪಾಸ್ವಾನ್: ಬಿಹಾರದ ಹಾಜಿಪುರ ಸಂಸದ ಚಿರಾಗ್ ಪಾಸ್ವಾನ್ ಅವರು ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ.

ಅಪ್ನಾ ದಳ

ಅನುಪ್ರಿಯಾ ಪಟೇಲ್: ಅಪ್ನಾ ದಳ (ಸೋನೆಲಾಲ್) ಪಕ್ಷದ ಮುಖ್ಯಸ್ಥೆಯಾಗಿರುವ ಅನುಪ್ರಿಯಾ ಪಟೇಲ್ ಅವರು 2021ರವರೆಗೆ ಕೇಂದ್ರ ಸಚಿವೆಯಾಗಿದ್ದರು.

ರಾಷ್ಟ್ರೀಯ ಲೋಕ ದಳ

ಜಯಂತ್ ಚೌಧರಿ: ರಾಜ್ಯ ಸಭಾ ಸಂಸದ, ಆರ್ ಎಲ್ ಡಿ ನಾಯಕ ಜಯಂತ್ ಚೌಧರಿ ಅವರು ಮೋದಿ ಸಂಪುಟ ಸೇರಬಹುದು.

Advertisement

Udayavani is now on Telegram. Click here to join our channel and stay updated with the latest news.

Next