Advertisement

ಅನರ್ಹತೆ: ಸ್ಪೀಕರ್‌ ಆದೇಶ ಎತ್ತಿಹಿಡಿದ ಹೈಕೋರ್ಟ್‌

01:15 AM Feb 25, 2022 | Team Udayavani |

ಪಣಜಿ: ಪಕ್ಷಾಂತರಗೊಂಡಿರುವ 12 ಮಂದಿ ಶಾಸಕರನ್ನು ಅಮಾನತು ಮಾಡುವಂತೆ ಕೋರಿ ಸಲ್ಲಿಕೆಯಾಗಿದ್ದ 2 ಅರ್ಜಿ ಗಳನ್ನು ವಜಾಗೊಳಿಸಿ ಗೋವಾ ಅಸೆಂಬ್ಲಿ ಸ್ಪೀಕರ್‌ ನೀಡಿದ್ದ ಆದೇಶವನ್ನು ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ಗುರುವಾರ ಎತ್ತಿಹಿಡಿದಿದೆ. ಈ ಬೆಳವಣಿಗೆಯಿಂದ ಕಾಂಗ್ರೆಸ್‌ಗೆ ತೀವ್ರ ಮುಖ ಭಂಗವಾಗಿದ್ದರೆ, ಬಿಜೆಪಿ ತೀರ್ಪನ್ನು ಸ್ವಾಗತಿಸಿದೆ.

Advertisement

2019ರಲ್ಲಿ 12 ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡಿದ್ದರು. ಈ ಪೈಕಿ 10 ಮಂದಿ ಕಾಂಗ್ರೆಸ್‌ ಶಾಸಕರಾಗಿದ್ದರು. ಈ ಹಿನ್ನೆಲೆ ಯಲ್ಲಿ ಅವರನ್ನು ಅನರ್ಹಗೊಳಿಸುವಂತೆ ಕೋರಿ ಗೋವಾ ಪ್ರದೇಶ  ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಗಿರೀಶ್‌ ಚೋಡಂಕರ್‌ ಅರ್ಜಿ ಸಲ್ಲಿಸಿದ್ದರು. ಸಂವಿಧಾನದ 10ನೇ ಪರಿಚ್ಛೇದದ ಅನ್ವಯ ಇವರೆ ಲ್ಲರನ್ನೂ ಅನರ್ಹಗೊಳಿಸಬೇಕು ಎಂದೂ ಮನವಿ ಮಾಡಿದ್ದರು. ಕಳೆದ ವರ್ಷದ ಎ.20ರಂದು ಅಸೆಂಬ್ಲಿ ಸ್ಪೀಕರ್‌ ರಾಜೇಶ್‌ ಪಕ್ಲೃಕರ್‌ ಅವರು ಈ ಅನರ್ಹತಾ ಅರ್ಜಿಯನ್ನು ವಜಾಗೊಳಿಸಿ ದ್ದರು. ಈ ಹಿನ್ನೆಲೆಯಲ್ಲಿ ಚೋಡಂಕರ್‌ ಕೋರ್ಟ್‌ ಮೆಟ್ಟಿಲೇ ರಿದ್ದರು. ಆದರೆ ಈಗ ಹೈಕೋರ್ಟ್‌ ಕೂಡ ಸ್ಪೀಕರ್‌ ಆದೇಶವನ್ನೇ ಎತ್ತಿಹಿಡಿದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌,

“ಕೋರ್ಟ್‌ನಿಂದ ಇಂಥ ಆದೇಶವನ್ನು ನಾವು ನಿರೀಕ್ಷಿಸಿರಲಿಲ್ಲ. ಹಣ ವನ್ನು ಬಳಸಿಕೊಂಡು ಜನರ ತೀರ್ಪನ್ನೇ ಬದಲಾಯಿಸು ವಂಥ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಕೀಳು ರಾಜ ಕೀಯಕ್ಕೆ ಇದು ಉತ್ತೇಜನ ನೀಡುತ್ತದೆ’ ಎಂದು ಹೇಳಿದೆ.

ಇನ್ನೊಂದೆಡೆ, ನ್ಯಾಯಾಲಯದ ಆದೇಶವನ್ನು ಸ್ವಾಗತಿಸಿರುವ ಬಿಜೆಪಿ, “ಕಳಂಕ ತರುವ ಅಭಿಯಾನಕ್ಕೆ ಸೋಲಾಗಿದೆ. ಪ್ರಜಾಪ್ರ ಭುತ್ವ, ಸಾಂವಿಧಾನಿಕ ಆಶಯಕ್ಕೆ ಮಾನ್ಯತೆ ಸಿಕ್ಕಿದೆ’ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next