Advertisement

Shirva: ಮರಗಳ ಅಪಾಯಕಾರಿ ರೆಂಬೆ ತೆರವು

03:49 PM Aug 07, 2024 | Team Udayavani |

ಶಿರ್ವ: ಕಟಪಾಡಿ- ಶಿರ್ವ-ಬೆಳ್ಮಣ್‌ ಮುಖ್ಯರಸ್ತೆಯ ಹನುಮಾನ್‌ ಟಯರ್ ಬಳಿ ರಸ್ತೆಗೆ ಚಾಚಿಕೊಂಡು ಅಪಾಯಕಾರಿಯಾಗಿ ಪರಿಣಮಿಸಿದ್ದ 2 ಬೃಹತ್‌ ಮಾವಿನ ಮರಗಳ ರೆಂಬೆ ಮತ್ತು ರಸ್ತೆ ಬದಿಯಲ್ಲಿದ್ದ ಇತರೆ ಅಪಾಯಕಾರಿ ಮರಗಳ ರೆಂಬೆಗಳನ್ನು ಮಂಗಳವಾರ ಅರಣ್ಯ ಇಲಾಖೆ ಕಡಿದು ತೆರವುಗೊಳಿಸಿದೆ.

Advertisement

ಪಡುಬಿದ್ರಿ ಉಪ ವಲಯ ಅರಣ್ಯಾಧಿಕಾರಿ ಜೀವನ್‌ದಾಸ್‌ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಅರಣ್ಯ ರಕ್ಷಕ ಚರಣ್‌ಜೋಗಿ ಅವರ ನೇತೃತ್ವದಲ್ಲಿ ಮಹಮ್ಮದ್‌ ಅಶ್ರಫ್‌ ಅವರ ಸಿಬಂದಿಯ ನೆರವಿನೊಂದಿಗೆ ಮರದ ರೆಂಬೆಗಳನ್ನು ಕಡಿದು ತೆರವುಗೊಳಿಸಲಾಯಿತು.

ಶಿರ್ವ ಮೆಸ್ಕಾಂ ಸೆಕ್ಷನ್‌ ಆಫೀಸರ್‌ ಮಂಜಪ್ಪ ಮತ್ತು ಸಿಬಂದಿ ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸಿ ತಂತಿಗಳನ್ನು ಇಳಿಸಿ ಕೊಂಬೆ ಕಡಿಯಲು ಸಹಕರಿಸಿದರು.

ಮರಗಳು ಮುಖ್ಯ ರಸ್ತೆಬದಿಯಲ್ಲಿದ್ದ ಕಾರಣ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಉದಯವಾಣಿ ಸುದಿನ ವರದಿ

Advertisement

ವಾಹನ ನಿಬಿಡತೆಯಿಂದ ಕೂಡಿದ ಮುಖ್ಯರಸ್ತೆಬದಿಯಲ್ಲಿ ಮಾವಿನ ಮರಗಳು ಅಪಾಯಕಾರಿಯಾಗಿದ್ದು, ಗಾಳಿ ಮಳೆಗೆ ರಸ್ತೆಗೆ ಬೀಳುವ ಸಂಭವ ಇತ್ತು. ಅಪಾಯಕಾರಿ ಮರಗಳ ಬಗ್ಗೆ ಜು. 29ರಂದು ಉದಯವಾಣಿ ಸುದಿನ ವರದಿ ನೀಡಿತ್ತು. ವರದಿಗೆ ಕೂಡಲೇ ಸ್ಪಂದಿಸಿದ ಇಲಾಖೆ ಮರಗಳ ರೆಂಬೆಗಳನ್ನು ತೆರವುಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next