Advertisement

ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಮಾತ್ರಕ್ಕೆ ಉತ್ತಮ ಕೋಚ್ ಆಗಲು ಸಾಧ್ಯವಿಲ್ಲ: ಗಂಭೀರ್

09:17 AM May 21, 2020 | keerthan |

ಹೊಸದಿಲ್ಲಿ: ಒಬ್ಬಾತ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಮಾತ್ರಕ್ಕೆ ಆತ ಅತ್ಯುತ್ತಮ ಕೋಚ್ ಆಗಲು ಸಾಧ್ಯವಿಲ್ಲ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.

Advertisement

ಕ್ರೀಡಾ ವಾಹಿನಿಯೊಂದಕ್ಕೆ ಮಾತನಾಡಿದ ಗಂಭೀರ್, ಬಹಳಷ್ಟು ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವುದು ಕೋಚ್ ಸ್ಥಾನಕ್ಕೆ ಮಾನದಂಡವಲ್ಲ. ಬಹುಶಃ ಆಯ್ಕೆ ಸಮಿತಿಗೆ ಆಯ್ಕೆಯಾಗಲು ಇದು ಮಾನದಂಡವಲ್ಲ. ಕೋಚ್ ಆಗುವವನು ಮೊದಲ ಆಟಗಾರರನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

ಆಟಗಾರರಿಗೆ ಅವರ ಸಹಜ ಆಟಕ್ಕೆ ಅನುವು ಮಾಡಿಕೊಡದೆ, ಕೇವಲ ಕೆಲವೇ ಹೊಡೆತಗಳ್ನು ಆಡಲು ಕಲಿಸುವವ ಉತ್ತಮ ತರಬೇತುಗಾರನಾಗಲು ಸಾಧ್ಯವಿಲ್ಲ ಎಂದಿದ್ದಾರೆ. ಈಗಿನ ಟಿ20 ಮಾದರಿ ಆಟದಲ್ಲಿ ಕೋಚ್ ಆದವ ಆಟಗಾರನ ಮನಸ್ಸನ್ನು ಮುಕ್ತಗೊಳಿಸಿ, ಉತ್ತಮ ಆಟವಾಡಲು ಪ್ರೇರಿಪಿಸುತ್ತಾನೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ಟೀಂ ಇಂಡಿಯಾ ಪರ 58 ಟೆಸ್ಟ್. 147 ಏಕದಿನ ಮತ್ತು 37 ಟಿ20 ಪಂದ್ಯಗಳನ್ನು ಗೌತಮ್ ಗಂಭೀರ್ ಆಡಿದ್ದಾರೆ. ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕನಾಗಿದ್ದ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಸಫಲರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next