ಹಾವೇರಿ: ಪ್ರಸ್ತುತ ವಿಕೃತ ಮನಸ್ಸುಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಚಿತ್ತ ಚಂಚಲ ತಡೆಯಲು ಧಾರ್ಮಿಕ, ಅಧ್ಯಾತ್ಮ, ಶೈಕ್ಷಣಿಕ ಮತ್ತು ವೈಚಾರಿಕ ಸಂಗತಿಗಳನ್ನು ಪ್ರತಿನಿಧಿಸಿರುವ “ಮನವಾಣಿಗಳು ಕೃತಿ’ ಪ್ರತಿ ಮನುಷ್ಯನ ಜೀವವಾಣಿಯಾಗಿವೆ ಎಂದು ಬಸವಕಲ್ಯಾಣದ ಗುಣತೀರ್ಥ ವಾಡಿಯ ಮಹಾಮನೆ ಮಹಾಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.
Advertisement
ನಗರದ ಗೆಳೆಯರ ಬಳಗದ ಶ್ರೀಮತಿ ಮಣಿಬಾಯಿ ಲೋಡಾಯಾ ಸಭಾಂಗಣದಲ್ಲಿ ರವಿವಾರ ಚಿನ್ಮಯ ಪ್ರಕಾಶನ ಉಳೇನೂರು ಹಾಗೂ ಸಾಹಿತಿ ಕಲಾವಿದರ ಬಳಗದ ಆಶ್ರಯದಲ್ಲಿ ಜರುಗಿದ ಮನವಾಣಿಗಳು ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮಾರ್ಗದರ್ಶಿಯಾಗಿಸುವ ಮನವಾಣಿಗಳು ಕೃತಿ ವಾಸ್ತವಿಕ ಸ್ಥಿತಿಗತಿಗಳನ್ನು ಪರಿಚಯಿಸುತ್ತದೆ. ತಮ್ಮ ಮನಸ್ಸಿನ ಭಾವನೆಗಳ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಅವರ ಆಶಯಗಳು ಸಮಕಾಲೀನ ಸಮಾಜಕ್ಕೆ ಅತ್ಯಗತ್ಯವಾಗಿವೆ ಎಂದರು.
Related Articles
Advertisement
ಶಿಕ್ಷಕಿ ಜಯಲಕ್ಷ್ಮೀ ಆರ್. ಕೃತಿ ಪರಿಚಯ ಮಾಡಿದರು. ಕವಿ ಎ.ಎನ್. ರಮೇಶ ಗುಬ್ಬಿ, ಸಾಹಿತಿ ಡಾ| ಸವಿತಾ ಸಿರಗೋಜಿ, ತಹಶೀಲ್ದಾರ್ ಮಹೇಶ ಗಸ್ತೆ, ಅಲ್ಪಸಂಖ್ಯಾತರ ಜಿಲ್ಲಾ ಅಧಿಕಾರಿ ಅಶೋಕ ಗಡ್ಡಿಗೌಡರ ಮಾತನಾಡಿದರು. ಸಾಹಿತಿ ಕಲಾವಿದರ ಬಳಗದ ವಿ.ಪಿ. ದ್ಯಾಮಣ್ಣವರ, ಶೇಖಣ್ಣ ಕಳ್ಳಿಮನಿ, ಲೀಲಾವತಿ ಪಾಟೀಲ, ಸವಿತಾ ಹಿರೇಮಠ, ಮಧುಮತಿ ಚಿಕ್ಕೇಗೌಡ್ರ, ಈರಣ್ಣ ಬೆಳವಡಿ, ರೇಣುಕಾ ಗುಡಿಮನಿ, ಶಶಿಕಲಾ ಅಕ್ಕಿ, ಭಾಗ್ಯ ಎಂ.ಕೆ., ನೇತ್ರಾವತಿ ಅಂಗಡಿ, ಹನುಮಂತಸಿಂಗ್ ರಜಪೂತ್, ರಾಜಾಭಕ್ಷು ಹಾಗೂ ಚಿನ್ಮಯ ಪ್ರಕಾಶನದ ಯಮನಪ್ಪ , ಅಂಜನಪ್ಪ ಉಳೇನೂರು, ವಚನಶ್ರೀ ಉಳೇನೂರು, ಕಾಮ್ರೇಡ್ ರಾಮಾಂಜನೆಪ್ಪ ಇದ್ದರು. ಸಾಹಿತಿ ಸತೀಶ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಂ. ಬಡಿಗೇರ ಹಾಗೂ ಪೃಥ್ವಿರಾಜ್ ಬೆಟಗೇರಿ ನಿರೂಪಿಸಿದರು. ನಾಗರಾಜ ಹುಡೇದ ಸ್ವಾಗತಿಸಿದರು. ಚಂದ್ರಶೇಖರ ಮಾಳಗಿ ವಂದಿಸಿದರು.
ಸಾಹಿತ್ಯಕ ವಲಯದಲ್ಲಿ ಗಮನ ಸೆಳೆದಿರುವ ಮನವಾಣಿಗಳು ಕೃತಿ ಜನವಾಣಿಗಳಾಗಿವೆ. ತಮ್ಮ ಮನಸ್ಸಿನ ಭಾವನೆಗಳಿಗೆ ಅಕ್ಷರ ರೂಪ ನೀಡಿರುವ ಕವಿ ಸೋಮನಾಥ ಡಿ ತಮ್ಮ ಸಾಹಿತ್ಯ ಪ್ರೇಮ ಮುಂದುವರಿಸಲಿ. ಹಾವೇರಿ ನೆಲದಲ್ಲಿ ಚೊಚ್ಚಲ ಕೃತಿ ಬಿಡುಗಡೆ ಆಗುತ್ತಿರುವುದು ಖುಷಿ ವಿಚಾರ.
*ಸತೀಶ ಕುಲಕರ್ಣಿ, ಸಾಹಿತಿ