Advertisement

Haveri: ಕರ್ನಾಟಕ ಜಾನಪದ ವಿವಿ ವಿಶೇಷ-ವಿಭಿನ್ನ

05:38 PM Sep 07, 2023 | Team Udayavani |

ಶಿಗ್ಗಾವಿ: ಅಪಾರ ಜ್ಞಾನ ಸಂಪತ್ತು ಹಾಗೂ ಇಲ್ಲಿನ ಕಲಾ ಪ್ರತಿಭೆಗಳಿಂದ ಹೊರ ಹೊಮ್ಮುವ ಜನಪದ ಗೀತೆಗಳನ್ನು ಆಲಿಸಿ ಸಂತೋಷವಾಯಿತು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ವಿಶೇಷ ಹಾಗೂ ವಿಭಿನ್ನವಾಗಿದೆ ಎಂದು ಶಿಗ್ಗಾವಿ ಜೆಎಂಎಫ್‌ಸಿ
ನ್ಯಾಯಾಲಯದ ಹಿರಿಯ ದಿವಾಣಿ ನ್ಯಾಯಾ ಧೀಶ ರಾದ ಫೈರೋಜಾ ಎಚ್‌. ಉಕ್ಕಲಿ ಹೇಳಿದರು.

Advertisement

ತಾಲೂಕಿನ ಗೊಟಗೋಡಿ ವಿಶ್ವವಿದ್ಯಾಲಯ ವೀಕ್ಷಣೆಗೆ ಆಗಮಿಸಿದ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಇಲ್ಲಿರುವ ಅಧ್ಯಾಪಕರಲ್ಲಿ ಜಾನಪದ ವಿಷಯದ ಕುರಿತಾಗಿ ಅಪಾರ ಜ್ಞಾನವಿದೆ. ಅವರು ಹಾಡುವ ಜನಪದ ಗೀತೆಗಳನ್ನು ಕೇಳಿ ಆಹ್ಲಾದವಾಯಿತು. ಜಾನಪದ ವಿಶ್ವವಿದ್ಯಾಲಯ ವಿಭಿನ್ನವಾದ ಪರಿಕಲ್ಪನೆಯಿಂದ ಕೂಡಿದೆ. ಇಲ್ಲಿನ ಹೊರ ವಾತಾವರಣ ಗಮನ ಸೆಳೆಯಿತು. ಒಳ ಆವರಣ ಇನ್ನೂ ವಿಭಿನ್ನ. ಬಹುಮುಖೀ ಜ್ಞಾನಗಳನ್ನು ಬಿತ್ತುವ ಅಧ್ಯಯನ ಮಾಡುವುದು ವಿಶೇಷವಾಗಿದೆ ಎಂದರು.

ಕುಲಪತಿ ಪ್ರೊ.ಟಿ.ಎಂ.ಭಾಸ್ಕರ್‌ ಮಾತನಾಡಿ, ಸಾಂಸ್ಕೃತಿಕ ಲೋಕವನ್ನು ಹಸಿರಾಗಿಡಬೇಕು ಎನ್ನುವುದೇ ಸಂವಿಧಾನದ ಆಶಾಯವಾಗಿದೆ. ಆ ಹಿನ್ನೆಲೆಯಲ್ಲಿ ನ್ಯಾಯಾಧೀಶರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಕಲಾ ಸಂಸ್ಕೃತಿಗೆ ನ್ಯಾಯವಿದೆ ಎನ್ನುವ ನ್ಯಾಯಯುತ ಮಾತುಗಳನ್ನಾಡಿದ್ದಾರೆ.

ಅವರಿಗೆ ಸಾಂಸ್ಕೃತಿಕ ಲೋಕದ ಶ್ರೀಮಂತಿಕೆಯನ್ನು ಅರ್ಥ ಮಾಡಿಕೊಳ್ಳುವ ಮನಸ್ಸಿದೆ ಅನ್ನುವುದು ಸಂತೋಷದ ಸಂಗತಿ ಎಂದರು. ಕುಲಸಚಿವ ಪ್ರೊ.ಸಿ.ಟಿ.ಗುರುಪ್ರಸಾದ್‌ ಮಾತನಾಡಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಶಿಸ್ತಿನ ವಿಶ್ವವಿದ್ಯಾಲಯ. ಇದು ಪ್ರಪಂಚದಲ್ಲೇ ಏಕೈಕ ಹಾಗೂ ಬೇರೆ ವಿಶ್ವವಿದ್ಯಾಲಯಗಳಿಗಿಂತ ವಿಭಿನ್ನವಾಗಿದೆ. ಅದೇ ರೀತಿ, ವರ್ಷದಿಂದ ವರ್ಷಕ್ಕೆ ಶೈಕ್ಷಣಿಕ ಪ್ರಗತಿ ಕಾಣುತ್ತಿದೆ ಎಂದರು.

ಸಹಾಯಕ ಕುಲಸಚಿವ ಶಹಜಹಾನ್‌ ಮುದಕವಿ ಮಾತನಾಡಿ, ವಿಶ್ವವಿದ್ಯಾಲಯ ನಡೆದು ಬಂದ ದಾರಿ ಹಾಗೂ ಅದರ ರೂಪುರೇಷೆಗಳನ್ನು ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಆನಂದಪ್ಪ ಜೋಗಿ, ಡಾ.ವಿಜಯಲಕ್ಷ್ಮೀ ಗೇಟಿಯವರ, ಗೋವಿಂದಪ್ಪ ತಳವಾರ, ಕಿರಿಯ ಸಹಾಯಕ ಶರೀಫ್‌ ಮಾಕಪ್ಪನವರ, ವಿದ್ಯಾರ್ಥಿ ಬಾಬಾಸಾಹೇಬ್‌ ಕಾಂಬ್ಳೆ ಜನಪದ ಗೀತೆಗಳನ್ನು ಹಾಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next