ಬ್ರಹ್ಮಾವರ: ಶ್ರದ್ಧೆ, ಭಕ್ತಿ ಯಿಂದ ಪೂಜಿಸಿದರೆ ದೇವರು ತೃಪ್ತ ನಾಗುತ್ತಾನೆ. ಪ್ರಾಮಾಣಿಕ ಸಂಪಾ ದನೆಯ ಸ್ವಲ್ಪವಾದರೂ ದಾನ, ಧರ್ಮಕ್ಕೆ ವಿನಿಯೋಗಿಸಬೇಕು. ಮಹತ್ವ ಅರಿತು ಆಚರಿಸಬೇಕು. ಸಂಘಟಿತರಾಗಿ ಮುನ್ನಡೆಯಿರಿ ಎಂದು ಶ್ರೀ ಮಠ ಬಾಳ್ಕುದ್ರುವಿನ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಹೇಳಿದರು.
ಅವರು ಗುರುವಾರ ಹಾವಂಜೆ ಬಾಣಬೆಟ್ಟು ನಡುಮನೆ ಕುಟುಂಬಸ್ಥರು, ಕಾಪು ಕೊಪ್ಪಲಮನೆ ಕುಟುಂಬಸ್ಥರು ಆರಾಧಿಸಿಕೊಂಡು ಬಂದಿರುವ ಶ್ರೀ ವೀರಭದ್ರ ಅಬ್ಬಗ ದಾರಗ ಸಪರಿವಾರ ನಾಗಬ್ರಹ್ಮಸ್ಥಾನದ ಜೀರ್ಣೋದ್ಧಾರ ಅಂಗವಾಗಿ ಪುನಃಪ್ರತಿಷ್ಠೆ, ಬ್ರಹ್ಮಕಲಶದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸದಾಶಿವ ಹೆಗ್ಡೆ ಬಾಣಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ವೇ|ಮೂ| ವಿದ್ವಾನ್ ಹೆರ್ಗ ಜಯರಾಮ ತಂತ್ರಿ, ವಾಸ್ತುತಜ್ಞ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಶುಭಾಶಂಸನೆಗೈದರು.
ಗಣ್ಯರಾದ ಡಾ| ಎಂ.ಪಿ. ರಾಘವೇಂದ್ರ ರಾವ್, ರಾಘವೇಂದ್ರ ಭಟ್ ಮಂಗಳೂರು, ಸುಬ್ಬಯ್ಯ ಶೆಟ್ಟಿ ಮುಂಬಯಿ, ಪಟ್ಟಾಭಿರಾಮ ಮಧ್ಯಸ್ಥ ಬೆಂಗಳೂರು, ರಘುರಾಮ ಶೆಟ್ಟಿ ಮುಂಬಯಿ, ದಯಾನಂದ ಶೆಟ್ಟಿ ಮುಂಬಯಿ, ಶಿವರಾಮ ಬಿ. ಶೆಟ್ಟಿ ಸೂರತ್, ಗಣೇಶ್ ಎಸ್. ಹೆಗ್ಡೆ ಪುಣೆ, ರಾಧಾಕೃಷ್ಣ ಶೆಟ್ಟಿ ನರ್ನಾಡು, ಉದಯ ಶೆಟ್ಟಿ ಯಳಗೊಳಿ, ಅಜಿತ್ ಕುಮಾರ್ ಶೆಟ್ಟಿ ಅಂಕಲೇಶ್ವರ, ವಸಂತಿ ಶೆಟ್ಟಿ, ಸುರೇಶ್ ಬಿ. ಶೆಟ್ಟಿ, ಕ್ಷೇತ್ರದ ಆಡಳಿತ ಮೊಕ್ತೇಸರ ಸಂಜೀವ ಹೆಗ್ಡೆ ಬಾಣಬೆಟ್ಟು, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕಾಪು ಕೊಪ್ಪಲಮನೆ ಕೃಷ್ಣ ಎಸ್. ಶೆಟ್ಟಿ ಅತಿಥಿಗಳಾಗಿದ್ದರು.
ಪ್ರಶಾಂತ್ ಶೆಟ್ಟಿ ಹಾವಂಜೆ ಸ್ವಾಗತಿಸಿ, ಸೂರಜ್ ನಿರ್ವಹಿಸಿದರು. ಬ್ರಹ್ಮಕಲಶಾಭಿಷೇಕ, ನಾಗ ಸಂದರ್ಶನ, ಪಲ್ಲ ಪೂಜೆ, ಅನ್ನ ಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.