Advertisement

Hattigani: ಹಟ್ಟಿಗಣಿಯಲ್ಲಿದೆ “ಕಲ್ಲಿನ ಗ್ರಂಥಾಲಯ’

06:18 PM Sep 08, 2023 | Team Udayavani |

ಹಟ್ಟಿಚಿನ್ನದಗಣಿ: ಹಟ್ಟಿಚಿನ್ನದಗಣಿ ಕಂಪನಿಯಲ್ಲಿ ಸ್ಥಾಪಿತವಾದ ಕಲ್ಲಿನ ಗ್ರಂಥಾಲಯ (ಹಟ್ಟಿಗೋಲ್ಡ್‌ ಮೈನ್ಸ್‌ ಕೋರ್‌ ಲೈಬ್ರರಿ)ಕಲ್ಲಿನಲ್ಲಿ ಅಡಕವಾದ ಪ್ರತಿ ಖನಿಜಾಂಶಗಳ ಅಧ್ಯಯನ ಸಂಶೋಧನೆಗೆ ದೀವಿಗೆಯಾಗಿದೆ.

Advertisement

2011ರಲ್ಲಿ ಕಂಪನಿ ಆಡಳಿತ ಕಚೇರಿ ಹಿಂಭಾಗದ ಅರ್ಧ ಎಕರೆಯಷ್ಟು ಪ್ರದೇಶದಲ್ಲಿ ಈ ಗ್ರಂಥಾಲಯ ನಿರ್ಮಾಣಗೊಂಡಿದೆ.
ಹಟ್ಟಿಚಿನ್ನದಗಣಿ ಕಂಪನಿಯ ಮಲ್ಲಪ್ಪ, ಸೆಂಟ್ರಲ್‌ ಹಾಗೂ ವಿಲೆಜ್‌ ಶಾಫ್ಟ್‌ ಗಣಿ ಕಂಪನಿ ವ್ಯಾಪ್ತಿಯ ದೇವದುರ್ಗ ತಾಲೂಕಿನ
ಊಟಿ ಸಿರವಾರ ತಾಲೂಕಿನ ಹೀರಾ-ಬುದ್ಧಿನ್ನಿ, ಲಿಂಗಸುಗೂರು ತಾಲೂಕಿನ ವಂದಲಿ ಹೊಸುರು, ಚಿತ್ರದುರ್ಗ ಜಿಲ್ಲೆಯ ಇಂಗಳದಾಳ, ಅಜ್ಜನಹಳ್ಳಿ, ಕೆ.ಜಿಎಫ್‌ ಸೇರಿ ಎಲ್ಲೆಲ್ಲಿ ಅದಿರು ಸಂಶೋಧನೆ ನಡೆದಿದೆಯೋ ಪ್ರತಿ ಸ್ಥಳದಿಂದ ಡ್ರಿಲ್ಲಿಂಗ್‌ ಮಾಡಿದ ಕಲ್ಲಿನ ಮಾದರಿಗಳನ್ನು ಸ್ಥಳ-ವರ್ಷಾನುಸಾರ ಸಂಗ್ರಹಿಸಿಡಲಾಗಿದೆ.

ಏನೇನು ಲಭ್ಯ:ಗಣಿಗಾರಿಕೆ ಕುರಿತು ಸಂಶೋಧನೆ ಹಾಗೂ ಡ್ರಿಲ್ಲಿಂಗ್‌ ನಡೆಸುವ ಕೇಂದ್ರ ಸರ್ಕಾರದ ಎಂಇಸಿಎಲ್‌, ಜಿಎಸ್‌ಐ ಸೇರಿ ಹಲವು ಇಲಾಖೆಗಳಿಗೆ ಗಣಿಗಾರಿಕೆ ವಿಸ್ತರಣೆ, ಚಿನ್ನ ಸೇರಿ ಹಲವು ಅದಿರುಗಳ ಪತ್ತೆ ಮಾಡಲು ನಡೆಸುವ ಅಧ್ಯಯನಕ್ಕೆ ಈ ಕಲ್ಲಿನ ಗ್ರಂಥಾಲಯ ಸಹಕಾರಿಯಾಗಲಿದೆ. ಯಾವ ವರ್ಷ, ಯಾವ ಸ್ಥಳದಲ್ಲಿ, ಎಷ್ಟು ಆಳದಲ್ಲಿ ಸಂಶೋಧನೆ, ಅದಿರು ಉತ್ಪಾದನೆ ನಡೆಸಲಾಯಿತು, ವರ್ಷಾನುಸಾರ ಅದಿರು ಉತ್ಪಾದನೆ, ಉತ್ಪಾದನೆ ವೆಚ್ಚ ಹಾಗೂ ಅದಿರಿನ ಬೆಲೆ ಕುರಿತು ಸವಿಸ್ತಾರ ಮಾಹಿತಿಗೆ ಕಂಪನಿಯ ಅನ್ವೇಷಣಾ ವಿಭಾಗದಿಂದ ಸ್ಥಾಪಿತವಾದ ಕಲ್ಲಿನ ಗ್ರಂಥಾಲಯ ದಾರಿದೀಪವಾಗಲಿದೆ.

1900ಕ್ಕೂ ಮುಂಚೆ ಸಮೀಪದ ವಂದಲಿ ಹೊಸುರು ಗಣಿಗಾರಿಕೆ ಅದಿರು ಸೇರಿ ತೆರೆದ ಗಣಿಗಾರಿಕೆಯಿಂದ ಮೂರು ಸಾವಿರ ಅಡಿ ಆಳದವರೆಗೆ ನಡೆಸುತ್ತಿರುವ ಕಂಪನಿ ಗಣಿಗಾರಿಕೆಯ ಕಲ್ಲಿನ ಮಾದರಿಯ ದಾಸ್ತಾನು ಇರುವುದರಿಂದ ಖನಿಜ ನಿಕ್ಷೇಪಗಳ ವ್ಯವಸ್ಥಿತ
ಪರಿಶೋಧನೆ, ಖನಿಜಗಳ ಅಭಿವೃದ್ಧಿ ಮತ್ತು ಸಂರಕ್ಷಣೆ, ಕಲ್ಲು ಆಧಾರಿತ ಯುರೇನಿಯಂ, ಟಂಗಸ್ಟನ್‌, ಚಿನ್ನ, ತಾಮ್ರ ಸೇರಿ ಖನಿಜ ಆಧಾರಿತ ಚಟುವಟಿಕೆಗಳ ಮತ್ತು ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನಕ್ಕೆ ಸಹಾಯಕಾರಿಯಾಗಲಿದೆ.

ಇಲಾಖಾವಾರು ಸಂಶೋಧನೆ-ಉತ್ಪಾದನೆಗೆ ಮಾತ್ರವಲ್ಲ ಪ್ರವಾಸಿಗರಿಗೆ, ಗಣಿಗಾರಿಕೆ ಕುರಿತು ಗ್ರಂಥ ರಚನಾಕಾರರಿಗೆ ಉಪಯುಕ್ತವಾಗಿದೆ. ಕಂಪನಿ ತನ್ನ ಉತ್ಪಾದನೆ ಜತೆಗೆ ಮುಂದಿನ ಪೀಳಿಗೆಗೂ ಸೇತುವೆಯಾಗುವ ಗ್ರಂಥಾಲಯ ಸೇರಿ ಗಣಿ ವೃತ್ತಿ ತರಬೇತಿ ಕೇಂದ್ರ, ರಾಜ್ಯದ ಏಕೈಕ ಪಾರುಗಣಿಕಾ ಘಟಕ ಕುರಿತು ತಿಳಿದು ಸದುಪಯೋಗ ಪಡಿಸಿಕೊಳ್ಳಬೇಕೆಂಬುದು ಕಂಪನಿ ಇರಾದೆಯಾಗಿದೆ.

Advertisement

ಗಣಿ ಆರಂಭದಿಂದಲೂ ಡ್ರಿಲ್ಲಿಂಗ್‌ ಮಾಡಿದ ಕಲ್ಲುಗಳನ್ನು ಸಂಗ್ರಹಿಸಿಡಲಾಗಿದೆ. 2011ರಲ್ಲಿ ಕಲ್ಲಿನ ಗ್ರಂಥಾಲಯ ಸ್ಥಾಪಿಸಲಾಗಿದೆ. ವಿವಿಧ ಪ್ರದೇಶಗಳಲ್ಲಿ ಮಾಡಿದ ಕಲ್ಲಿನ ಗಣಿಗಾರಿಕೆ ಮಾದರಿಯನ್ನು ಅಧ್ಯಯನ ಮಾಡಿ ಮುಂದಿನ ಪೀಳಿಗೆಗೆ ಗಣಿಗಾರಿಕೆ ವಿಸ್ತರಣೆ, ಸ್ಥಾಪನೆ, ಮರುಉತ್ಪಾದನೆ ಸೇರಿದಂತೆ ವಿವಿಧ ಬಗೆಯ ಸಂಶೋಧನೆಗೆ ಸಹಕಾರಿಯಾಗಲಿದೆ. ಸಂಶೋಧಕರು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.
ಪ್ರಕಾಶ್‌, ಹಟ್ಟಿ ಚಿನ್ನದ ಗಣಿ ಕಂಪನಿ
ಕಾರ್ಯ ನಿರ್ವಾಹಕ ನಿರ್ದೇಶಕ

*ವಿನೋದ್‌ ಕಮಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next