Advertisement
ಹಟ್ಟಿಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಲನಿಗಳಲ್ಲಿ ಜನರು ಪಡುತ್ತಿರುವ ಪಡಿಪಾಟೀಲು.
Related Articles
ಹಟ್ಟಿಯಂಗಡಿ ಪಂಚಾಯತ್‌ಗೆ ಈ ಸಾಲಿನಲ್ಲಿ ಗ್ರಾ.ಪಂ.ನ 14 ನೇ ಹಣಕಾಸಿನ ಹಾಗೂ ಜಿ.ಪಂ. ಅನುದಾನದಡಿ 2 ಬೋರ್‌ವೆಲ್ ಮಂಜೂರಾಗಿತ್ತು. ಅದರಲ್ಲಿ ಒಂದನ್ನು ಕನ್ಯಾನ ಬಾಡಬೆಟ್ಟುವಿನಲ್ಲಿ ತೆಗೆಸುವ ಯೋಜನೆ ರೂಪಿಸಲಾಗಿತ್ತು. ಆದರೆ ಮಾ.23 ರಿಂದ ಲಾಕ್‌ಡೌನ್ ಜಾರಿಯಲ್ಲಿರುವುರಿಂದ ಬೋರ್‌ವೆಲ್ ಕೊರೆಯಿಸಲು ಕೂಡ ತೊಡಕಾಗಿದೆ.
Advertisement
ಪ್ರತೀ ವರ್ಷ ಈ ಸಮಯದಲ್ಲಿ ಪಂಚಾಯತ್‌ನಿಂದ ಟ್ಯಾಂಕರ್ ನೀರು ಕೊಡಲಾಗುತ್ತಿತ್ತು. ಇಲ್ಲಿನ ಬಾವಿಗಳು ಕೂಡ ಬತ್ತಿ ಹೋಗಿದೆ. ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿ ಜಾಸ್ತಿ ಜನರಿರುವುದರಿಂದ ನೀರಿನ ಬಳಕೆ ಜಾಸ್ತಿಯಾಗಿದೆ. ನೀರಿಲ್ಲದೆ ಭಾರೀ ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ಇಲ್ಲಿನ ಮಹಿಳೆಯರು.
ಅನುದಾನದ ಕೊರತೆಇಂತಹ ತುರ್ತು ಪರಿಸ್ಥಿತಿಯಲ್ಲೂ ಕೂಡ ತಾತ್ಕಾಲಿಕವಾಗಿ ನೀರು ಸರಬರಾಜು ಮಾಡಲು ನಮ್ಮಲ್ಲಿ ಅನುದಾನವಿಲ್ಲವಾಗಿದೆ. ತಾಲೂಕು ಆಡಳಿತ ಈ ವರ್ಷ ಟ್ಯಾಂಕರ್ ನೀರಿನ ಸರಬರಾಜು ವಹಿಸಿಕೊಂಡಿರುವುದರಿಂದ ವಿಳಂಬವಾಗುತ್ತಿದೆ. ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 300 ಕ್ಕೂ ಅಧಿಕ ಕುಟುಂಬಗಳು ಪ್ರತೀ ವರ್ಷ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತವೆ.
-ಕೆ. ರಾಜೀವ ಶೆಟ್ಟಿ, ಅಧ್ಯಕ್ಷರು, ಹಟ್ಟಿಯಂಗಡಿ ಗಾ.ಪಂ. ಟೆಂಡರ್ : ಎ.28 ವರೆಗೆ ವಿಸ್ತರಣೆ
ನೀರಿನ ಸರಬರಾಜು ನಿರ್ವಹಣೆಗೆ ಈಗಾಗಲೇ ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಟೆಂಡರ್ ಕರೆಯಲಾಗಿದ್ದು, ಎ.19 ರವರೆಗೆ ಅವಕಾಶ ನೀಡಲಾಗಿತ್ತು. ಆದರೆ ಈವರೆಗೆ ಯಾರೂ ಕೂಡ ಅರ್ಜಿ ಸಲ್ಲಿಸದ ಕಾರಣ, ಮತ್ತೆ ಎ.28 ವರೆಗೆ ವಿಸ್ತರಣೆ ಮಾಡಲಾಗಿದೆ.
-ತಿಪ್ಪೇಸ್ವಾಮಿ,ಕುಂದಾಪುರ ತಹಶೀಲ್ದಾರ್