Advertisement

ಮೊಹಮ್ಮದ್‌ ಶಮಿ ವಿರುದ್ಧ ಪತ್ನಿಯಿಂದ ಫಿಕ್ಸಿಂಗ್‌ ಆರೋಪ

06:35 AM Mar 09, 2018 | Team Udayavani |

ಕೋಲ್ಕತಾ: ಭಾರತ ಕ್ರಿಕೆಟ್‌ ತಂಡದ ಖ್ಯಾತ ವೇಗದ ಬೌಲರ್‌ ಮೊಹಮ್ಮದ್‌ ಶಮಿ ವಿರುದ್ಧ ಬುಧವಾರವಷ್ಟೇ ಗೃಹಹಿಂಸೆ ಆರೋಪ ಮಾಡಿದ್ದ ಪತ್ನಿ ಹಸಿನ್‌ ಜಹಾನ್‌ ಗುರುವಾರ ಮತ್ತೂಂದು ಬಾಂಬ್‌ ಸಿಡಿಸಿದ್ದಾರೆ. 

Advertisement

ಶಮಿ ಮ್ಯಾಚ್‌ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಅವರು ಇಂಗ್ಲೆಂಡ್‌ ಮೂಲದ ಉದ್ಯಮಿಯಿಂದ ಹಣ ಸ್ವೀಕರಿಸಿದ್ದಾರೆ. ಇದಕ್ಕೆ ನನ್ನ ಬಳಿ ದಾಖಲೆಯಿದೆ ಎಂದು ಹೇಳಿದ್ದಾರೆ. ಶಮಿ ವಿರುದ್ಧ ಗುರುವಾರ ಕೋಲ್ಕತಾದ ಲಾಲ್‌ ಬಜಾರ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ ಜಹಾನ್‌ ತಮ್ಮ ಆರೋಪಗಳನ್ನು ಮುಂದುವರಿಸಿದ್ದಾರೆ. 

ಶಮಿಗೆ ಪಾಕಿಸ್ತಾನ ಮೂಲದ ಮಹಿಳೆಯೊಂದಿಗೆ ಸಂಬಂಧವಿದೆ. ಪಾಕ್‌ನ ಅಲಿಶ್‌ಬಾ ಹೆಸರಿನ ಮಹಿಳೆಯಿಂದ ಮ್ಯಾಚ್‌ ಫಿಕ್ಸ್‌ ಮಾಡಲು ಹಣ ಪಡೆದಿದ್ದಾರೆ. ಇದನ್ನು ನೀಡಿದ್ದು ಇಂಗ್ಲೆಂಡ್‌ ಉದ್ಯಮಿ ಮೊಹಮ್ಮದ್‌ ಭಾಯ್‌. ಇದಕ್ಕೆ ನನ್ನ ಬಳಿ ಸಾಕ್ಷಿಯಿದೆ. ಅವರು ನನ್ನನ್ನು ವಂಚಿಸಬಲ್ಲರೆಂದರೆ ದೇಶವನ್ನೂ ವಂಚಿಸಬಲ್ಲರು ಎಂದು ಕಿಡಿಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next