Advertisement

ಮತ್ಸ್ಯಾಸಕ್ತರಿಗೆ ಇದೆ ಹಲವು ಅವಕಾಶ 

07:40 AM Jan 23, 2019 | |

ಮೀನು ಎಂದಾಕ್ಷಣ ಎಲ್ಲರ ಬಾಯಲ್ಲೂ ನೀರೂರುವುದು ಸಹಜ. ಅಂತಹ ಮೀನು ಪ್ರಿಯರು ಕೇವಲ ಅದನ್ನು ತಿಂದು ಆನಂದಿಸು ವುದು ಮಾತ್ರವಲ್ಲದೆ, ಅದನ್ನು ಸಾಕಣೆ ಮಾಡುವ ವಿದ್ಯೆಯನ್ನು ಕಲಿತರೆ ಬದುಕಿಗೊಂದು ಹೊಸ ದಾರಿ ತೆರೆದುಕೊಂಡಂತೆಯೇ ಸರಿ.

Advertisement

ಹೌದು, ಫಿಶರೀಸ್‌ ಕೋರ್ಸ್‌ಗಳನ್ನು ಕಲಿಯುವ ಮೂಲಕ ಮೀನುಗಾರಿಕಾ ಹವ್ಯಾಸವನ್ನು ವೃತ್ತಿಯನ್ನಾಗಿಸಬಹುದು. ಅದರಲ್ಲೂ ಕರಾವಳಿ ಪ್ರದೇಶದಲ್ಲಿ ಮೀನು ಪ್ರಿಯರ ಸಂಖ್ಯೆ ಅಧಿಕವಿದೆ. ಆದ್ದರಿಂದ ಆಸಕ್ತ ವಿದ್ಯಾರ್ಥಿಗಳು ಇತರ ಪದವಿಯೊಂದಿಗೆ ಇದನ್ನು ಕಲಿಯುವುದರಿಂದ ಬದುಕು ರೂಪಿಸಿಕೊಳ್ಳಬಹುದು.

ಫಿಶರೀಸ್‌ ಕೋರ್ಸ್‌ ಮಾಡುವ ಮೂಲಕ ಮತ್ಸೊ ್ಯೕದ್ಯಮವನ್ನು ನಡೆಸಬಹುದು. ಇದಕ್ಕೆ ಪಿಯು ಶಿಕ್ಷಣದಲ್ಲಿ ವಿಜ್ಞಾನವನ್ನು ಆಯ್ದುಕೊಂಡು ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಫಿಶರೀಸ್‌ ಮ್ಯಾನೇಜ್‌ಮೆಂಟ್, ಪ್ರಾಜೆಕ್ಟ್ ಡೆವೆಲಪ್‌ಮೆಂಟ್ ಆ್ಯಂಡ್‌ಮ್ಯಾನೇಜ್‌ಮೆಂಟ್, ಫಿಶರೀಸ್‌ ಎಂಟಪ್ರರ್ನ್ಯೂ ರ್ಷಿಸ್‌, ಫಿಶರೀಶ್‌ ಎಕ್ಸೆrನ್ಶನ್‌, ಅಕ್ವಾಕಲ್ಚರ್‌, ಅಕ್ವಾಟಿಕ್‌ ಎಕಾಲಜಿ, ಅಕ್ವಾಟಿಕ್‌ ಆರ್ಚರ್ಸ್‌, ಇಚಿ§ಯಾಲಜಿ, ಓಶಿಯೋಗ್ರಫಿ, ಪೋಸ್ಟ್‌ ಹಾರ್ವೆಸ್ಟ್‌ಗಳಂತಹ ವೃತ್ತಿಪರಶಿಕ್ಷಣವನ್ನು ನಾಲ್ಕು ವರ್ಷ ಮಾಡಿದರೆ ಉತ್ತಮ ಅವಕಾಶಗಳಿವೆ ಅಥವಾ ಶಾರ್ಟ್‌ ಟರ್ಮ್ ಕೋರ್ಸ್‌ಗಳನ್ನು ಮಾಡಬಹುದು.

ಇಲ್ಲಿ ಮೀನಿನ ಹುಟ್ಟು, ಬೆಳವಣಿಗೆ, ಸಾಕಾಣೆ, ಆರೈಕೆ, ಉದ್ಯಮ ಹೀಗೆ ಎಲ್ಲವನ್ನೂ ಪ್ರಾಯೋಗಿಕವಾಗಿ ಕಲಿಯುವ ವಿಶೇಷ ಕಲಿಕೆ ಇದಾಗಿದೆ.

ಇದನ್ನು ಕಲಿತು ಸ್ಪೆಶಲ್‌ ಡಿಗ್ರಿಯನ್ನೂ ಮಾಡಬಹುದು. ಅಂದರೆ ಒಂದು ವಿಷಯದ ಕುರಿತು ಸಂಪೂರ್ಣ ಪ್ರಾಯೋಗಿಕ ಹಾಗೂ ಪಠ್ಯ ಕ್ರಮವನ್ನು ಅಧ್ಯಯನ ಮಾಡಿ ಅವುಗಳ ಕುರಿತು ಮಾಸ್ಟರ್‌ ಆಗಬಹುದು. ಇದು ಮುಂದೆ ವೃತ್ತಿ ಜೀವನದಲ್ಲಿ ನಮ್ಮನ್ನು ಗುರುತಿಸಿಕೊಳ್ಳಲು ಅವಕಾಶವನ್ನು ಮಾಡಿಕೊಡುತ್ತದೆ. ಅಧಿಕ ಬೇಡಿಕೆಯ ಕಮರ್ಶಿಯಲ್‌ ಹಾರ್ವೆಸ್ಟಿಂಗ್‌ ಅನ್ನು ಮಾಡಬಹುದು. ಸಮುದ್ರ ಮೀನುಗಾರಿಕೆ, ಮತ್ಸ್ಯೋದ್ಯಮ ನಡೆಸಿ ದೇಶ-ವಿದೇಶಗಳಿಗೆ ಸೀ ಫ‌ುಡ್‌ಗಳನ್ನು ರಫ್ತು ಮಾಡಬಹುದು.

Advertisement

ಒಟ್ಟಿನಲ್ಲಿ ಮನಸ್ಸಿಗೆ ಮುದ ನೀಡುವ ಮೀನುಗಳ ಸಾಕಾಣಿಕೆ ಹಲವು ಅವಕಾಶಗಳ ಹೆಬ್ಟಾಗಿಲು ಎಂದರೆ ತಪ್ಪಾಗಲಾರದು.

ಅವಕಾಶಗಳು ಹಲವು
ಫಿಶರೀಸ್‌ ಕೋರ್ಸ್‌ ಮಾಡಿದವರಿಗೆ ದೇಶದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲೂ ಅವಕಾಶಗಳಿವೆ. ಎಕ್ಸ್‌ಪೋರ್ಟ್‌ ಕಂಪೆನಿ, ಫಿಶರೀಸ್‌ ಸರ್ವೆ, ಫಿಶ್‌ ಫಾರ್ಮಿಂಗ್‌, ಅಕ್ವಾ ಕಲ್ಚರ್‌, ಅಗ್ರಿಕಲ್ಚರ್‌ ಸೆಕ್ಟರ್‌ಗಳಲ್ಲಿ ಉದ್ಯೋಗಾವಕಾಶವನ್ನು ಪಡೆಯಬಹುದು ಹಾಗೂ ಅಧಿಕ ಸಂಭಾವನೆಯೂ ದೊರೆಯುತ್ತದೆ. ಇಲ್ಲವಾದರೆ ಸ್ವಂತ ಉದ್ದಿಮೆ ನಡೆಸಿ ಪಾರ್ಟ್‌ ಟೈಮ್‌ ಆಗಿಯೂ ಇದರಲ್ಲಿ ತೊಡಗಿಸಿಕೊಳ್ಳಬಹುದು.

ಭರತ್‌ರಾಜ್‌ ಕರ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next