ಹೊಸದಿಲ್ಲಿ : ಹರಿಯಾಣ ಸರಕಾರ ತನ್ನ ರಾಜ್ಯದ ಕ್ರೀಡಾಳುಗಳು ತಾವು ಗಳಿಸುವ ಆದಾಯದ ಮೂರನೇ ಒಂದಂಶವನ್ನು ರಾಜ್ಯದ ಕ್ರೀಡಾ ಮಂಡಳಿಗೆ ನೀಡಬೇಕೆಂದು 2018ರ ಎಪ್ರಿಲ್ 30ರ ತನ್ನ ಅಧಿಸೂಚನೆಯಲ್ಲಿ ಆದೇಶಿಸಿದ್ದು ಇದು ಎಲ್ಲೆಡೆಯಿಂದ ವ್ಯಾಪಕ ಟೀಕೆ, ಖಂಡನೆಗೆ ಗುರಿಯಾಗಿದೆ.
ಈ ಅಧಿಸೂಚನೆಗೆ ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿ ಡಾ. ಅಶೋಕ್ ಖೇಮ್‌ಕಾ ಸಹಿ ಮಾಡಿದ್ದಾರೆ.
ಕ್ರೀಡಾಳುಗಳು ರಾಜ್ಯ ಕ್ರೀಡಾ ಮಂಡಳಿಗೆ ನೀಡುವ ತಮ್ಮ ಆದಾಯದ ಮೂರನೇ ಒಂದಂಶವನ್ನು ಕ್ರೀಡಾ ಮಂಡಳಿಯು ರಾಜ್ಯದಲ್ಲಿ ಕ್ರೀಡಾಭಿವೃದ್ಧಿಗೆ ಬಳಸುವುದೆಂದು ಅಧಿಸೂಚನೆ ಹೇಳುತ್ತದೆ.
ಹರಿಯಾಣ ಸರಕಾರದ ಈ ಕ್ರಮವನ್ನು ಒಲಿಂಪಿಕ್ ಪದಕಗೆದ್ದಿರುವ ಸುಶೀಲ್ ಕುಮಾರ್, ಯೋಗೇಶ್ವರ್ ದತ್ ಖಂಡಿಸಿದ್ದಾರೆ.
ರಾಜ್ಯ ಕ್ರೀಡಾ ಮಂಡಳಿಯಿಂದ ಕ್ರೀಡೆಗೆ ಚಿಕ್ಕಾಸಿನ ಕೊಡುಗೆ ಇಲ್ಲವಾದರೂ ಈ ರೀತಿಯ ಒಂದು ಕ್ರಮದಿಂದ ರಾಜ್ಯದಲ್ಲಿ ಕ್ರೀಡೆ ಅವಸಾನವಾಗುವುದು ನಿಶ್ಚಿತ ಮತ್ತು ಇದರಿಂದಾಗಿ ರಾಜ್ಯದ ಕ್ರೀಡಾಳುಗಳು ಈಗಿನ್ನು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಾರೆ ಎಂದು ಹೇಳಿದ್ದಾರೆ.