Advertisement
ಭಾರತ ಅನುಭವಿಸುತ್ತಿರುವ ಆಲ್‌ರೌಂಡರ್‌ಗಳ ಕೊರತೆ ಇವತ್ತಿನ ಸಮಸ್ಯೆಯಲ್ಲ. ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮೊದಲಾದವರು ಬ್ಯಾಟ್ ಮಾಡಬಲ್ಲರು. ಆದರೆ ಬೌಲಿಂಗ್‌ನ ದೊಡ್ಡ ಜವಾಬ್ದಾರಿಯ ನಂತರ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವುದು ಇಂತವರಿಗೆ ಕಷ್ಟವೇ. ಬಹುಶಃ ಈ ಬ್ಯಾಟಿಂಗ್ ಆಲ್‌ರೌಂಡರ್ ಶೂನ್ಯವನ್ನು ತುಂಬುವ ಒಂದು “ಟ್ರಯಲ್‌ನ ಭಾಗವಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆ ಮಾಡಲಾಗಿತ್ತು. ಈಗ ಆಯ್ಕೆ ಸಮಿತಿಯೇ ಅಚ್ಚರಿಯಲ್ಲಿ ಬೀಳುವಂತೆ ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಂಡ್ಯ ದಾಖಲೆಗಳ ಅಬ್ಬರದ ಜೊತೆಗೆ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ್ದಾರೆ!
ನಿಜಕ್ಕಾದರೆ ಹಿಂದಿನ ಗರಿಷ್ಠ 76 ರನ್ ಬ್ಯಾಟಿಂಗ್ ಕೂಡ ಸಾಮರ್ಥ್ಯದ ಒಂದು ಮುನ್ಸೂಚನೆ. ಅವತ್ತು ಹಾರ್ದಿಕ್ ಗಳಿಸಿದ 76 ರನ್‌ಗಳ ಇನಿಂಗ್ಸ್ ಪಾಕಿಸ್ತಾನದ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಬಂದಿತ್ತು. ಕೇವಲ 43 ಎಸೆತಗಳಲ್ಲಿ ಆರು ಸಿಕ್ಸ್, ನಾಲ್ಕು ಬೌಂಡರಿಯುಕ್ತವಾಗಿ ಬಂದಿದ್ದ ಈ ಆಟ ಭಾರತಕ್ಕೆ ಗಗನ ಕುಸುಮವೆನಿಸಿದ್ದ ಗೆಲುವಿನ ವಾಸನೆಯನ್ನು ಆಘ್ರಾಣಿಸುವಂತೆ ಮಾಡಿತ್ತು. ದುರದೃಷ್ಟ, ಅವತ್ತು ಅವರ ರನ್‌ಔಟ್ ಭಾರತದ ಆಸೆಗಳನ್ನು ಕೊಂದು ಹಾಕಿತ್ತು. ಕಷ್ಟದ ಪಿಚ್‌ನಲ್ಲಿ ಅಬ್ಬರದ ಬ್ಯಾಟಿಂಗ್ ಮಾಡುವ ಹಾರ್ದಿಕ್ ಪಾಂಡ್ಯ ಎಳೆಯ ಕಪಿಲ್ ದೇವ್ ಎಂದು ನಿಧಾನವಾಗಿ ಕರೆಸಿಕೊಳ್ಳಲಾರಂಭಿಸಿದ್ದಾರೆ.
Related Articles
ಇವತ್ತಿಗೂ ಹಾರ್ದಿಕ್‌ರದ್ದು ಆರಕ್ಕೇರದ ಮೂರಕ್ಕಿಳಿ ಯದ ಸಾಧನೆ. ಬ್ಯಾಟಿಂಗ್ ಆಲ್‌ರೌಂಡರ್ ಎಂಬ ಹಣೆಪಟ್ಟಿಯಷ್ಟೇ ಅವರನ್ನು ಟೆಸ್ಟ್ ಕ್ರಿಕೆಟ್‌ಗೆ ಇಳಿಸಿತ್ತು. ಶ್ರೀಲಂಕಾ ಎದುರಿನ ಮೊದಲ ಪಂದ್ಯದಲ್ಲಿಯೇ ಶತಕಾರ್ಧದ ಸಾಧನೆ ಮಾಡಿದ್ದು ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್.ಕೆ.ಪ್ರಸಾದ್‌ರಿಗಂತೂ ಗರಿ ಮೂಡಿಸಿತ್ತು. ಮೂರನೇ ಟೆಸ್ಟ್‌ನ ಶತಕ ತಮ್ಮ ಪ್ರಥಮ ದರ್ಜೆ ಶತಕವನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಗಳಿಸಿದ ಅಪರೂಪದ ಸಾಧಕರಲ್ಲಿ ಹಾರ್ದಿಕ್ ಹಿಮಾಂಶು ಪಾಂಡ್ಯ ಅವರನ್ನು ಐದನೆಯ ಭಾರತೀಯನನ್ನಾಗಿಸಿತು. ವಿಜಯ್ ಮಾಂಜ್ರೆàಕರ್, ಅಜಯ್ ರಾತ್ರಾ, ಹರ್‌ಭಜನ್ ಸಿಂಗ್‌ರ ಈ ಸಾಲಿನಲ್ಲಿ ಕಪಿಲ್ ದೇವ್ ಕೂಡ ಇದ್ದಾರೆ!
Advertisement
ಲಂಚ್‌ಗೆ ಮುನ್ನವೇ ಒಂದೇ ಅವ ಯಲ್ಲಿ ಮೂರಂಕಿ ಸಂಪಾದಿಸಿದ್ದು, ಮಲಿಂದ ಪುಷ್ಪಕುಮಾರರ ಒಂದೇ ಓವರ್‌ನಲ್ಲಿ ಲಾರಾರ 28 ಮತ್ತು ಜಾರ್ಜ್ ಬೈಲಿ ಅವರ 27ರ ನಂತರ 6,6,6,4,4 ಸಹಿತ 26 ರನ್ ಬಾರಿಸಿದ್ದು, ಎಬಿ ಡಿವಿಲಿಯರ್, ಅಫ್ರಿದಿ, ಕಪಿಲ್ ಹೊಡೆದ ಸತತ ನಾಲ್ಕು ಸಿಕ್ಸರ್ ಬಿಟ್ಟರೆ ಸತತ ಮೂರು ಎಸೆತಗಳಲ್ಲಿ ಸಿಕ್ಸರ್ ಸಿಡಿಸಿದ್ದು, ಸೆಹ್ವಾಗ್ 78 ಚೆಂಡಿನ ಶತಕದ ಹೊರತಾಗಿ 86 ಎಸೆತಗಳಲ್ಲಿ ಮೂರಂಕಿ ದಾಟಿದ್ದು…. ಹಾರ್ದಿಕ್‌ರನ್ನು ಟೆಸ್ಟ್‌ನ ಪಂದ್ಯ ಪುರುಷೋತ್ತಮ ಪ್ರಶಸ್ತಿವರೆಗೆ ಕೊಂಡೊಯ್ದಿತು. ಇಷ್ಟಿದ್ದೂ ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಂಡ್ಯ ಬಾಳಬಲ್ಲರೇ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ.
ಸಿಡಿಲಬ್ಬರಕ್ಕೆ ಟೆಸ್ಟ್ ಅಂಕ ಕಡಿಮೆ!ಈವರೆಗಿನ ಪ್ರದರ್ಶನಗಳ ಅನುಸಾರ ಈ ಗುಜರಾತ್ ಪ್ರತಿಭೆ ಸಿಡಿಲಬ್ಬರದ ಬ್ಯಾಟಿಂಗ್ ಮಾಡಬಲ್ಲರು. ಅಲ್ಲಿ ನೀವು ಕಪಿಲ್‌ಗೆ ಹೋಲಿಸಿದರೆ ನಷ್ಟವಿಲ್ಲ. ಆದರೆ ಬೌಲಿಂಗ್‌ನಲ್ಲಿ ಹಾರ್ದಿಕ್ ಚೂರು ಪಾರು ಕ್ರಿಕೆಟಿಗರೇ. ಐಪಿಎಲ್‌ನ 37 ಪಂದ್ಯಗಳಲ್ಲಿ 10, ಟಿ20ಯ 19 ಪಂದ್ಯದ 15 ಹಾಗೂ ಏಕದಿನದ 17ರಲ್ಲಿನ 19 ವಿಕೆಟ್ ಆಕರ್ಷಕ ಸಾಧನೆಯೇನಲ್ಲ. ಭಾರತ ಸದೃಢ ಸ್ಥಿತಿಯಲ್ಲಿ ಎದುರಾಳಿ ಬೌಲರ್ ಬಸವಳಿದ ಸ್ಥಿತಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರೆ ಅದನ್ನು ಅದ್ಭುತ ಸಾಧನೆ ಅಂದುಕೊಳ್ಳಬೇಕಾಗಿಲ್ಲ. ಮೊದಲ ಟೆಸ್ಟ್‌ನಲ್ಲಿ 114 ಓವರ್ ನಂತರ ಬ್ಯಾಟಿಂಗ್‌ಗಿಳಿದ ಹಾರ್ದಿಕ್ ಹಿಂದೆ 491 ರನ್ ಕುಷನ್ ಇತ್ತು. 5 ಬೌಂಡರಿ, 3 ಸಿಕ್ಸರ್‌ನ 49 ಎಸೆತದ 50 ರನ್ ಒತ್ತಡರಹಿತ ಆಟ. ಎರಡನೇ ಟೆಸ್ಟ್‌ನಲ್ಲೂ ಬ್ಯಾಟಿಂಗ್‌ಗೆ ಇಳಿದಿದ್ದು 110 ಓವರ್ ನಂತರ. ಆವಾಗಲೂ 413 ರನ್ ಕುಷನ್. 20 ಎಸೆತದಲ್ಲಿ ಆಗ 20 ರನ್. ಮೂರನೇ ಟೆಸ್ಟ್‌ನಲ್ಲೂ 78 ಓವರ್ ಆಟಗಳ ತರುವಾಯವೇ ಹಾರ್ದಿಕ್‌ರ ಪ್ರವೇಶವಾಗಿದ್ದು. ಕೊನೆಯ ಟೆಸ್ಟ್‌ನಲ್ಲಿ ಪಿಚ್ ಸ್ಪಿನ್‌ಗೆ ಸಹಾಯಕವಾಗುತ್ತಿದ್ದ ಸಂದರ್ಭದಲ್ಲಿಯೇ ಪಾಂಡ್ಯ ಆಟವಾಡಲಿಳಿದಿದ್ದನ್ನು ಗಮನಿಸಬೇಕಾಗುತ್ತದೆ. ಅದರಲ್ಲೂ 8ನೇ ಕ್ರಮಾಂಕದಲ್ಲಿ ಆಡಲಿಳಿದು ಬಾಲಂಗೋಚಿಗಳನ್ನು ಸಂಭಾಳಿಸಿಕೊಂಡು ರನ್ ಗಳಿಸುವುದು ಬೇರೆಯದೇ ವಿಜಾnನ. ಅದನ್ನು ಹಾರ್ದಿಕ್ ತಮ್ಮ ಶತಕದ ಹಾದಿಯಲ್ಲಿ ತೋರ್ಪಡಿಸಿದ್ದಾರೆ. ಮೊದಲ 50ಕ್ಕೆ 61 ಎಸೆತ ಬೇಕಾದರೆ ಮುಂದಿನ 50 ಕೇವಲ 25 ಚೆಂಡುಗಳಲ್ಲಿ ಬರಲು ಕಾರಣ ಭಾರತ ಆಲೌಟ್ ಪರಿಸ್ಥಿತಿಯತ್ತ ಸಾಗಿದ್ದು. ಹೋಗಲಿ, ಅವತ್ತು ಪಾಕ್ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಿಚ್ ಕೂಡ ಕಷ್ಟದಾಯಕವಾದದ್ದೇ. ಈ ಲೆಕ್ಕದಲ್ಲಿ ಹಾರ್ದಿಕ್ ಕುರಿತ ಅನುಮಾನಗಳನ್ನು ತ್ಯಜಿಸುವುದು ಕ್ಷೇಮ!
ಹೀಗೆ ಯೋಚಿಸುವುದೊಳ್ಳೆ ಯದು. ಎಂ.ಎಸ್.ಧೋನಿ ಅವರ ಸಂಪೂರ್ಣ ನಿವೃತ್ತಿಯ ಕಾಲ ಸನ್ನಿಹಿತವಾಗಿದೆ. ಭಾರತ ಆಗ “ಫಿನಿಶರ್‌ನ ಕೊರತೆಯಿಂದ ಬಳಲುತ್ತದೆ. ಆ ಸ್ಥಾನವನ್ನು ಹಾರ್ದಿಕ್ ತುಂಬಬಲ್ಲರು. ಟೆಸ್ಟ್ ಕ್ರಿಕೆಟ್‌ನ ಐವರು ಬೌಲರ್‌ಗಳ ತಂತ್ರಗಾರಿಕೆಯಲ್ಲೂ ಪಾಂಡ್ಯ ತರಹದ ಮಧ್ಯಮ ವೇಗಿಗೆ ಅವಕಾಶವಿದೆ. ತಮ್ಮ ಬೌಲಿಂಗ್‌ನ್ನು ಅವರು ಇನ್ನಷ್ಟು ಮೊನಚುಗೊಳಿಸಿದರೆ ತಂಡಕ್ಕೆ ದೊಡ್ಡ ಪ್ಲಸ್! ಮಾ.ವೆಂ.ಸ.ಪ್ರಸಾದ್