ನವದೆಹಲಿ : ಹಿಮಾಚಲ ಪ್ರದೇಶದ ಕಾಂಗ್ರೆಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಹರ್ಷ್ ಮಹಾಜನ್ ಬುಧವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರ ಸಮ್ಮುಖದಲ್ಲಿ ಸೇರಿದ್ದಾರೆ.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮಹಾಜನ್, ”45 ವರ್ಷ ಕಾಂಗ್ರೆಸ್‌ನಲ್ಲಿದ್ದೆ.ಇಂದು ಕಾಂಗ್ರೆಸ್ ದಿಕ್ಕು ತೋಚದಂತಾಗಿದೆ, ನಾಯಕನಿಲ್ಲದಂತಾಗಿದೆ. ತಳಮಟ್ಟದಲ್ಲಿ ದೃಷ್ಟಿಯಾಗಲೀ ಕೆಲಸಗಾರರಾಗಲೀ ಇಲ್ಲ” ಎಂದಿದ್ದಾರೆ.
ಇದನ್ನೂ ಓದಿ: PFI ಜತೆಗೆ ಬ್ಯಾನ್ ಆದ ಇತರ ಸಂಘಟನೆಗಳು ಯಾವುದು? ಕಚೇರಿಯಲ್ಲಿ ದೊರೆತ ಪುರಾವೆ ಬಹಿರಂಗ
ಈ ಸಂದರ್ಭದಲ್ಲಿ ಮಾತನಾಡಿದ ಗೋಯಲ್, ”ಮಹಾಜನ್ ಅವರು 45 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ, ಅವರು ಈ ಕ್ಲೀನ್ ಇಮೇಜ್ ಹೊಂದಿದ್ದರು, ಯುವ ಕಾಂಗ್ರೆಸ್‌ನಲ್ಲಿದ್ದರು ಮತ್ತು ನಂತರ ವಿಧಾನಸಭೆಯಲ್ಲಿ ಮುಖ್ಯ ಸಚೇತಕರಾಗಿದ್ದರು. ಅವರು ಹಿಮಾಚಲ ಪ್ರದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ” ಎಂದರು.
“ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಅವರು ಸ್ಫೂರ್ತಿ ಪಡೆದಿದ್ದರಿಂದ ಅವರು ಕಾಂಗ್ರೆಸ್ ತೊರೆಯಲು ನಿರ್ಧರಿಸಿದ್ದಾರೆ. ಜನರಿಗಾಗಿ ಕೆಲಸ ಮಾಡಲು ಅವರು ಬಿಜೆಪಿಗೆ ಸೇರಲು ಬಯಸಿದ್ದಾರೆ. ಮತ್ತು ಹಿಮಾಚಲ ಇತಿಹಾಸವನ್ನು ನಿರ್ಮಿಸಲು ಸಜ್ಜಾಗಿದೆ, ಬಿಜೆಪಿ ಅಧಿಕಾರಕ್ಕೆ ಮರಳಲು ಸಿದ್ಧವಾಗಿದೆ”ಎಂದರು.
ಈ ವರ್ಷ ಹಿಮಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈಗಾಗಲೇ ಪಕ್ಷಾಂತರ ಪರ್ವ ಆರಂಭವಾಗಿದೆ.