Advertisement

ಡಿ. 12ರಂದು ಸಾಮರಸ್ಯ ನಡಿಗೆ: ಸಚಿವ ರೈ

10:59 AM Dec 10, 2017 | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಸಾಮರಸ್ಯ ಬಯಸುವ ಸಂಘಟನೆಗಳು ಸೇರಿಕೊಂಡು ಡಿ. 12 ರಂದು ಫರಂಗಿಪೇಟೆಯಿಂದ ಮಾಣಿ ವರೆಗೆ “ಸಾಮರಸ್ಯ ನಡಿಗೆ ಸೌಹಾರ್ದತೆಯೆಡೆಗೆ’ ಕಾಲ್ನಡಿಗೆ ಜಾಥಾ ನಡೆಯಲಿದೆ. ಕೊಲೆ ಪ್ರಕರಣ ಗಳಲ್ಲಿ ಭಾಗಿಯಾಗದ ವಿವಿಧ ಸಂಘಟ ನೆಗಳ ಪ್ರಮುಖರು ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಚಿವ ಬಿ. ರಮಾನಾಥ ರೈ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋಮು ಸಂಘರ್ಷದ ಹಿನ್ನೆಲೆಯಲ್ಲಿ ನಡೆದ ಶಾಂತಿಸಭೆಯ ಸಂದರ್ಭ ಕಾಲ್ನಡಿಗೆ ಜಾಥಾ ನಡೆಸುವಂತೆ ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಾಥಾ ಹಮ್ಮಿಕೊಳ್ಳಲಾಗಿದೆಯೇ ಹೊರತು ಯಾವುದೇ ರಾಜಕೀಯ ಲಾಭದ ಉದ್ದೇಶದಿಂದಲ್ಲ ಎಂದರು.

ಜಾತ್ಯತೀತ ಮನೋಭಾವದ ವಿವಿಧ ರಾಜಕೀಯ ಪಕ್ಷಗಳು ಪಾಲ್ಗೊಳ್ಳಲಿದ್ದು, ಸಾಮರಸ್ಯದ ಉದ್ದೇಶದಿಂದ ನಾವು ಜತೆಯಾಗಿದ್ದೇವೆ. ಜಿಲ್ಲೆಯಲ್ಲಿ ನಿರಂತರವಾಗಿ ಶಾಂತಿ ನೆಲೆಸಬೇಕು ಎಂಬುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು. 

ಡಿ. 12ರ ಬೆಳಗ್ಗೆ 9ಕ್ಕೆ ಜಾಥಾಕ್ಕೆ ಚಾಲನೆ ನೀಡಲಾಗುತ್ತದೆ. ಬಳಿಕ ಹೆದ್ದಾರಿಯ ಒಂದು ಬದಿಯಲ್ಲಿ ಜಾಥಾ ಮೌನವಾಗಿ ಸಾಗಲಿದೆ. ಸಂಜೆ 5ಕ್ಕೆ ಜಾಥಾವು ಮಾಣಿ ತಲುಪಿ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

ಜೆಡಿಎಸ್‌ಗೂ ಆಹ್ವಾನ
ಸಮಾರೋಪ ಸಮಾರಂಭದಲ್ಲಿ ವಿವಿಧ ಪಕ್ಷಗಳ ನಾಯಕರಾದ ಶ್ರೀರಾಮ ರೆಡ್ಡಿ, ಸಿದ್ಧನಗೌಡ ಪಾಟೀಲ್‌, ಡಾ| ಎಲ್‌. ಹನುಮಂತಯ್ಯ, ನಟ ಪ್ರಕಾಶ್‌ ರೈ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ಸಮಾರೋಪ ವೇದಿಕೆಗೆ ಬಂಟ್ವಾಳ ಸಮೀಪ ಹತ್ಯೆಯಾದ ಅಮಾಯಕ ನಾವೂರು ಹರೀಶ್‌ ಪೂಜಾರಿ ಅವರ ಹೆಸರನ್ನಿಡಲಾಗಿದೆ ಎಂದು ಸಚಿವ ರೈ ವಿವರಿಸಿದರು. ಜಾಥಾದಲ್ಲಿ ಜೆಡಿಎಸ್‌ ಪಾಲ್ಗೊಳ್ಳುತ್ತಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅವರಿಗೂ ಆಹ್ವಾನ ನೀಡಲಾಗಿದೆ ಎಂದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಸಚಿವ ಯು.ಟಿ. ಖಾದರ್‌, ಕಾಂಗ್ರೆಸ್‌ ಮುಂದಾಳುಗಳಾದ ಹರೀಶ್‌ ಕುಮಾರ್‌, ಪಿ.ವಿ. ಮೋಹನ್‌, ಶಶಿಧರ್‌ ಹೆಗ್ಡೆ, ನವೀನ್‌ ಡಿ’ಸೋಜಾ, ಮಮತಾ ಗಟ್ಟಿ, ಮಿಥುನ್‌ ರೈ, ಕಣಚೂರು ಮೋನು, ಸಿಪಿಐಎಂ ಮುಂದಾಳುಗಳಾದ ವಸಂತ ಆಚಾರಿ, ಯಾದವ ಶೆಟ್ಟಿ, ರೈತ ಸಂಘದ ರವಿಕಿರಣ್‌ ಪುಣಚ, ಮುನೀರ್‌ ಕಾಟಿಪಳ್ಳ, ಯೋಗೀಶ್‌ ಶೆಟ್ಟಿ, ಎಂ. ದೇವದಾಸ್‌, ಸೀತಾರಾಮ ಬೇರಿಂಜ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next