Advertisement

ಶ್ರೀಕೃಷ್ಣಮಠ: ಹರಿವಾಣ ನೃತ್ಯ ಸೇವೆ

02:40 AM Jul 25, 2018 | Karthik A |

ಉಡುಪಿ: ಈ ಹಾಡನ್ನು ಭಾಗವತರು ಹಾಡುತ್ತಿದ್ದಂತೆ ಶ್ರೀಕೃಷ್ಣಮಠದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಮತ್ತು ಶ್ರೀ ಅದಮಾರು ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿಯವರು ಭಕ್ತಿಯಿಂದ ಹೆಜ್ಜೆ ಹಾಕಿದರು. ಆಷಾಢ ಶುದ್ಧ ಏಕಾದಶಿ ನಿಮಿತ್ತ ಸೋಮವಾರ ರಾತ್ರಿ ಶ್ರೀಕೃಷ್ಣಮಠದಲ್ಲಿ ಈ ವಿಶಿಷ್ಟ ಹರಿವಾಣ ನೃತ್ಯ ಸೇವೆ ನಡೆಯಿತು.

Advertisement

ರಾತ್ರಿ ಪೂಜೆಯಾದ ಬಳಿಕ ಸ್ವಾಮೀಜಿಯವರು ಕೃಷ್ಣನ ಗರ್ಭಗುಡಿ ಹೊರಗಿನ ಚಂದ್ರಶಾಲೆಯಲ್ಲಿ ಕುಳಿತಿರುತ್ತಾರೆ. ಆಗ ನಾಲ್ಕು ಬಗೆಯ ವಾದ್ಯೋಪಕರಣಗಳನ್ನು ನುಡಿಸಲಾಗುತ್ತದೆ. ಅನಂತರ ಸಂಕೀರ್ತನೆ ನಡೆಯುತ್ತದೆ. ಭಾಗವತರು ನಾಲ್ಕು ಪದ್ಯಗಳನ್ನು ಹಾಡುತ್ತಾರೆ. ಸಾಂಕೇತಿಕ ಪುರಾಣ ಪ್ರವಚನ ನಡೆಯುತ್ತದೆ. ತೀರ್ಥಮಂಟಪದೆದುರು ಸ್ವಾಮೀಜಿ ಮಂಗಳಾರತಿ ಮಾಡುತ್ತಾರೆ. ಆಗ ಭಾಗವತರು  ಹಾಡು ಹಾಡುತ್ತಾರೆ. ದೇವರಿಗೆ ಸಮರ್ಪಿಸಿದ ತುಳಸಿ ಮತ್ತು ಹೂವುಗಳನ್ನು ಹರಿವಾಣದಲ್ಲಿರಿಸಿ, ತಲೆ ಮೇಲೆ ಹೊತ್ತು ಸ್ವಾಮೀಜಿ ನರ್ತಿಸುತ್ತಾರೆ. ಬಳಿಕ ತುಳಸಿ ಮತ್ತು ಹೂವನ್ನು ಭಕ್ತರಿಗೆ ವಿತರಿಸಲಾಗುತ್ತದೆ. ಏಕಾದಶಿ ದಿನ ನಿರ್ಜಲ ಉಪವಾಸದಲ್ಲಿದ್ದು ರಾತ್ರಿ ಪೂಜೆಯಾದ ಬಳಿಕ ನೃತ್ಯ ನಡೆಯುತ್ತದೆ. ಆಷಾಢಮಾಸದ ಶುಕ್ಲ ಏಕಾದಶಿಯಿಂದ ಕಾರ್ತೀಕ ಮಾಸದ ಶುಕ್ಲ ಏಕಾದಶಿವರೆಗೆ ನಾಲ್ಕೂ ತಿಂಗಳಲ್ಲಿ ಬರುವ 8 ಏಕಾದಶಿಗಳಂದು ಉಡುಪಿ ಸಂಪ್ರದಾಯದ ಎಲ್ಲಾ ಸ್ವಾಮೀಜಿಯವರು ಎಲ್ಲಿ ಮೊಕ್ಕಾಂ ಇರುತ್ತಾರೋ ಅಲ್ಲಿ ಈ ತೆರನಾದ ಆಚರಣೆ ನಡೆಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next