ನಾಟಿಂಗ್‌ಹ್ಯಾಂ: ಮೂರನೇ ಟೆಸ್ಟ್‌ನಲ್ಲಿ ಭಾರತ ತಿರುಗಿ ಬೀಳುವ ಸೂಚನೆ ನೀಡಿದೆ. ಹಾರ್ದಿಕ್ ಪಾಂಡ್ಯ (28ಕ್ಕೆ5) ವಿಕೆಟ್ ಮಾರಕ ಬೌಲಿಂಗ್ ದಾಳಿಗೆ ಸಿಲುಕಿದ ಆತಿಥೇಯ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ ಕೇವಲ 38.2 ಓವರ್‌ಗೆ 161 ರನ್‌ಗೆ ಆಲೌಟಾಗಿದೆ.
ಸದ್ಯ ಭಾರತ 2ನೇ ಇನಿಂಗ್ಸ್ ಆರಂಭಿಸಿದ್ದು ವಿಕೆಟ್ ನಷ್ಟವಿಲ್ಲದೆ 41 ರನ್‌ಗಳಿಸಿದೆ.ಶಿಖರ್ ಧವನ್ (ಅಜೇಯ 14 ರನ್) ಮತ್ತು ಕೆ.ಎಲ್.ರಾಹುಲ್ (ಅಜೇಯ 27 ರನ್)ಗಳಿಸಿ ಕ್ರೀಸ್‌ನಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಟೀಕೆಗಳಿಗೆ ಉತ್ತರಿಸಿದ ಪಾಂಡ್ಯ: ಹಾರ್ದಿಕ್ ಪಾಂಡ್ಯ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ವಿಫಲರಾಗಿದ್ದರು. ಆಲ್‌ರೌಂಡರ್ ಪಟ್ಟದಿಂದ ಇವರನ್ನು ಕಿತ್ತು ಹಾಕಿ ಎಂದು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಟೀಕೆ ಮಾಡಿದ್ದರು. ಇದೀಗ ಎಲ್ಲ ಟೀಕೆಗೆ ಹಾರ್ದಿಕ್ ಪಾಂಡ್ಯ ಉತ್ತರ ನೀಡಿದ್ದಾರೆ.
ಇಂಗ್ಲೆಂಡ್‌ಗೆ ತವರಿನಲ್ಲಿ ಮೊದಲ ಸಲ ಸರಿಯಾಗಿ ಬೆವರಿಳಿಸಿದ ಹಾರ್ದಿಕ್ ಅಪಾಯಕಾರಿ ವೇಗಿಯಾಗಿ ಕಾಣಿಸಿಕೊಂಡರು. ಭಾರತದ ಇನ್ನಿಬ್ಬರು ವೇಗಿಗಳಾದ ಜಸ್‌ಪ್ರೀತ್ ಬುಮ್ರಾ(37ಕ್ಕೆ2) ಹಾಗೂ ಇಶಾಂತ್ ಶರ್ಮ (32ಕ್ಕೆ2) ವಿಕೆಟ್ ಕಬಳಿಸಿ ಇಂಗ್ಲೆಂಡ್ ಸೊಕ್ಕಡಗಿಸಿದರು.ಇಂಗ್ಲೆಂಡ್ ಪರ ಜೋಸ್ ಬಟ್ಲರ್ (39 ರನ್) ವೈಯಕ್ತಿಕ ಅತ್ಯಧಿಕ ರನ್ ಸಾಧನೆಯಾಗಿದೆ.
ಸಂಕ್ಷಿಪ್ತ ಸ್ಕೋರ್: ಭಾರತ 1ನೇ ಇನಿಂಗ್ಸ್ 329ಆಲೌಟ್, ಇಂಗ್ಲೆಂಡ್ 1ನೇ ಇನಿಂಗ್ಸ್ 161 ಆಲೌಟ್ (ಅಲಸ್ಟೇರ್ ಕುಕ್ 29, ಜಾಸ್ ಬಟ್ಲರ್ 39, ಹಾರ್ದಿಕ್ ಪಾಂಡ್ಯ 28ಕ್ಕೆ5)