Advertisement

ಪಣಜಿ : ಹರವಳೆ ಜಲಪಾತದಲ್ಲಿ ಬಿದ್ದು ಪಂಜಾಬ್ ಮೂಲದ ವ್ಯಕ್ತಿ ಸಾವು

03:23 PM Aug 02, 2021 | Team Udayavani |

ಪಣಜಿ: ಗೋವಾದ ಸಾಖಳಿಯಲ್ಲಿರುವ ಹರವಳೆ ಜಲಪಾತದಲ್ಲಿ ಬಿದ್ದು ಪ್ರವಾಸಿಗನೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ.

Advertisement

ಪಂಜಾಬ್ ಅಮೃತ್‍ಸರ ಮೂಲದ ನವಜ್ಯೀತ್ (22) ಎಂಬ ಯುವಕ ಹರವಳೆ ಜಲಪಾತದಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.

ಈತನೊಂದಿಗೆ ಇನ್ನೂ ಇಬ್ಬರು ಮಿತ್ರರು ಆಗಮಿಸಿದ್ದರು, ಈ ಮೂವರೂ ಸೇರಿ ಜಲಪಾತದ ನೀರಿನಲ್ಲಿ ಈಜಲು ತೆರಳಿದ್ದರು ಎನ್ನಲಾಗಿದೆ.

ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಪೋಲಿಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂಧಿಗಳು ಮೃತ ವ್ಯಕ್ತಿಯ ಶವದ ಶೋಧ ಕಾರ್ಯ ಕೈಗೆತ್ತಿಕೊಂಡಿದ್ದಾರೆ.

ಇದನ್ನೂ ಓದಿ :ಮಾನ್ವಿತಾ ಕಣ್ಣಲ್ಲಿ ಹೊಸ ಕನಸು: ಹಳ್ಳಿ ಹುಡುಗಿ ಆದ ಟಗರು ಪುಟ್ಟಿ!

Advertisement
Advertisement

Udayavani is now on Telegram. Click here to join our channel and stay updated with the latest news.