Advertisement
ಜಿಲ್ಲಾ ಕೇಂದ್ರದ ಕನಸಿನಲ್ಲಿರುವ ನಗರದ ಈ ರಸ್ತೆಯ ಶೋಚನಿಯ ಸ್ಥಿತಿಗೆ ಹಲವು ದಶಕಗಳೇ ಸಂದಿವೆ. ರೈಲ್ವೇ ಮತ್ತು ಸ್ಥಳೀಯಾಡಳಿತ ನಡುವಿನ ತಿಕ್ಕಾಟದಲ್ಲಿ ಇಲ್ಲಿ ಸಂಚರಿಸುವ ಪ್ರಯಾಣಿಕರ ಪಾಡಂತು ಹೇಳತೀರದು.
Related Articles
Advertisement
ನಡೆದಾಡಲು ಕಷ್ಟ :
ಈ ಸಂಪರ್ಕ ರಸ್ತೆಯಲ್ಲಿ ವಾಹನ ಮಾತ್ರವಲ್ಲ, ಪಾದಚಾರಿಗಳಿಗೆ ನಡೆದಾಡಲು ಸಾಧ್ಯವಿಲ್ಲದ ಸ್ಥಿತಿ ಉಂಟಾಗಿದೆ. ಮೀಟರ್‌ಗೊಂದರಂತೆ ಹೊಂಡ ಸೃಷ್ಟಿಯಾಗಿದ್ದು ಮಳೆ ಬಂದರೆ ತೋಡಿನ ಸ್ಥಿತಿ ಉಂಟಾಗುತ್ತದೆ. ಇಷ್ಟಾದರೂ ಅನುದಾನ ಹಂಚಿಕೆ ವಿಚಾರದಲ್ಲಿ ರೈಲ್ವೇ ಮತ್ತು ಸ್ಥಳೀಯಾಡಳಿತ ಮಧ್ಯೆ ಜಟಾಪಟಿ ನಡೆಯುತ್ತಿದೆ. ಲಭ್ಯ ಮಾಹಿತಿ ಪ್ರಕಾರ 1990-95ರ ಅವಧಿಯಲ್ಲಿ ಆಗಿನ ಪುರಸಭೆಯೇ ಈ ರಸ್ತೆಯ ದುರಸ್ತಿ ಮಾಡಿತ್ತು. ಆಗಲೂ ರೈಲ್ವೇ ಕೇವಲ ದುರಸ್ತಿಗಾಗಿ ತಾತ್ಕಾಲಿಕ ನೆಲೆಯಲ್ಲಿ ಪುರಸಭೆಗೆ ಅನುಮತಿ ನೀಡಿತ್ತು. ಅನಂತರ ಅಭಿವೃದ್ಧಿ ಕಂಡೇ ಇಲ್ಲ.
ಹಾರಾಡಿ ಸಂಪರ್ಕ ರಸ್ತೆ ಅಭಿವೃದ್ಧಿಗಾಗಿ ನಗರಸಭೆಗೆ ನೀಡುವಂತೆ ರೈಲ್ವೇಗೆ ಮನವಿ ಮಾಡಿದ್ದರೂ ಅವರಿಂದ ಸ್ಪಂದನೆ ಸಿಕ್ಕಿಲ್ಲ. ರೈಲ್ವೇ ಅಧೀನದ ರಸ್ತೆ ಅಭಿವೃದ್ಧಿ ಮಾಡಲು ನಗರಸಭೆಗೆ ಅಧಿಕಾರ ಇಲ್ಲ. ಹೀಗಾಗಿ ನಾವು ಈ ರಸ್ತೆಗೆ ಬದಲಿಯಾಗಿ ಹಾರಾಡಿ-ಚಿಕ್ಕಪುತ್ತೂರು ರಸ್ತೆ ಅಭಿವೃದ್ಧಿಗೆ ಮುಂದಡಿ ಇಟ್ಟಿದ್ದೇವೆ. ಈಗಾಗಲೇ ದಾನಿಗಳ ಸಹಕಾರ ಪಡೆದು ಮಣ್ಣು ಹಾಕುವ ಕಾರ್ಯ ಆಗಿದೆ. ಒಂದು ಕಡೆ ಭೂ ಸ್ವಾಧೀನ ಬಾಕಿ ಇದೆ. ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಶಾಸಕರ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗವುದು. -ಜೀವಂಧರ್ ಜೈನ್, ಅಧ್ಯಕ್ಷ, ನಗರಸಭೆ ಪುತ್ತೂರು