Advertisement
ಅಪ್ಪಚ್ಚ ಕವಿ ಅವರನ್ನು 1945ರಲ್ಲಿ ನಡೆದ ಒಂದು ಸಭೆಯಲ್ಲಿ ಕೋಟೇರ ಮುತ್ತಣ್ಣ ಎಂಬವರು ಷೇಕ್ಸ್ ಪಿಯರ್‌ನಿಗೆ ಹೋಲಿಸುತ್ತಾರೆ. ಅದೇ ಸಂದರ್ಭ ಸಭೆಯಲ್ಲಿದ್ದ ವ್ಯಕ್ತಿಯೊಬ್ಬರು ಉನ್ನತ ಶಿಕ್ಷಣ ಪಡೆಯದ ಅಪ್ಪಚ್ಚ ಕವಿಯನ್ನು ಷೇಕ್ಸ್‌ಪಿಯರ್‌ನಿಗೆ ಹೋಲಿಸುವುದು ಸರಿಯಲ್ಲವೆಂದು ತಿಳಿಸಿದ್ದರು. ಆದರೆ, ಅದೇ ವ್ಯಕ್ತಿ 1967ರಲ್ಲಿ ನಡೆದ ಅಪ್ಪಚ್ಚ ಕವಿಯ ಜನ್ಮ ಶತಮಾನೋತ್ಸವ ಸಂದರ್ಭ ತಾವು ಹಿಂದೆ ಕವಿಯ ಬಗ್ಗೆ ಮಾಡಿದ್ದ ಹೇಳಿಕೆಯ ಬಗ್ಗೆ ಕ್ಷಮೆ ಯಾಚಿಸಿದ್ದರೆಂದು ತಿಳಿಸಿದ ಬಾಚರಣಿಯಂಡ ಅಪ್ಪಣ್ಣ, ಹೀಗೆ ಸಾಕಷ್ಟು ಮಂದಿ ಅಪ್ಪಚ್ಚ ಕವಿಯ ಬಗ್ಗೆ ಮಾಹಿತಿ ಇಲ್ಲದೆ ಹೇಳಿಕೆ ನೀಡಿದ್ದಾರಾದರೂ, ಬಳಿಕ ಅವರ ಸಾಹಿತ್ಯದಿಂದ ಪ್ರಭಾವಿತರಾದುದನ್ನು ಉಲ್ಲೇಖೀಸಿದರು.
ನಾಟಕ ಪ್ರದರ್ಶನ
ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಂದ, ಮಾದೇಟಿರ ಪ್ರಮೀಳಾ ಜೀವನ್ ಅವರ ನಿರ್ದೇಶನದಲ್ಲಿ ಹರದಾಸ ಅಪ್ಪಚ್ಚ ಕವಿ ಅವರ ನಾಟಕದ ಆಯ್ದ ಒಂದು ಭಾಗದ ನಾಟಕ ಪ್ರದರ್ಶನ ನಡೆಯಿತು. ಇದರೊಂದಿಗೆ ಜಿಲ್ಲೆಯ ಖ್ಯಾತ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಅವರಿಂದ ಕವಿ ಕಾವ್ಯ ನಿರೂಪಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕೊಡವ ಸಮಾಜದ ಉಪಾಧ್ಯಕ್ಷ ಮಣವಟ್ಟಿàರ ಚಿಣ್ಣಪ್ಪ, ಕಾರ್ಯದರ್ಶಿ ಅರೆಯಡ ರಮೇಶ್, ನಿರ್ದೇಶಕರುಗಳಾದ ಪುಟ್ಟಿಚಂಡ ಡಾಲಿ ದೇವಯ್ಯ, ಕಾಳೆಯಂಡ ಮುತ್ತಪ್ಪ, ಪೊನ್ನಚೆಟ್ಟಿàರ ಸುಬ್ಬಯ್ಯ, ಚೊಟ್ಟೆಯಂಡಮಾಡ ಅಪ್ಪಾಜಿ, ನಂದೇಟಿರ ರಾಜಾ ಮಾದಪ್ಪ, ಉಳ್ಳಿಯಡ ಗಂಗಮ್ಮ, ಐಮುಡಿಯಂಡ ರಾಣಿ ಮಾಚಯ್ಯ, ತಾತಂಡ ಸರೋಜ, ಅಖೀಲ ಕೊಡವ ಸಮಾಜದ ಉಪಾಧ್ಯಕ್ಷ ಅಜ್ಜಿಕುಟ್ಟಿàರ ಸುಬ್ರಮಣಿ ಮಾದಯ್ಯ, ಅಖೀಲ ಕೊಡವ ಸಮಾಜದ ಜಂಟಿ ಕಾರ್ಯದರ್ಶಿ ರಾಜಾ ಮಾದಪ್ಪ ಉಪಸ್ಥಿತರಿದ್ದರು. ಅಖಿಲ ಕೊಡವ ಸಮಾಜದ ಅಧ್ಯಕ್ಷರಾದ ಮಾತಂಡ ಮೊಣ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಕೊಡವ ಸಮಾಜದ ನಿರ್ದೇಶಕರಾದ ಮಾದೇಟಿರ ಬೆಳ್ಯಪ್ಪ ಕಾರ್ಯಕ್ರಮ ನಿರೂಪಿಸಿದರು.