Advertisement

Eshwarappa ವಿರುದ್ಧ ಕೇಸ್‌ ದಾಖಲು ಸಂತೋಷದ ಸಂಗತಿ: ಮಧು ಬಂಗಾರಪ್ಪ

06:33 PM Feb 10, 2024 | Team Udayavani |

ಶಿವಮೊಗ್ಗ: ಮಾಜಿ ಸಚಿವ ಈಶ್ವರಪ್ಪ ವಿರುದ್ಧ ಕೇಸ್‌ ದಾಖಲಾಗಿರುವುದು ಬಹಳ ಸಂತೋಷದ ವಿಚಾರ. ದೇಶದಲ್ಲಿ ಕಾನೂನಿದೆ ಎಂಬುದು ಸಾಬೀತಾಗಿದೆ. ಯಾರ್ಯಾರು ಈ ತರಹ ಮಾತನಾಡುತ್ತಾರೋ ಅವರ ಮೇಲೆಲ್ಲ ಮುಂದೆ ಇದೇ ರೀತಿ ಕೇಸ್‌ ದಾಖಲಾಗಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಇದೆ ಎಂದು ನಮ್ಮ ಸರ್ಕಾರ ತೋರಿಸಿದೆ. ಕಾನೂನಿಗೆ ವಿರುದ್ಧವಾಗಿ ಮಾತನಾಡಿದರೆ ಅಂತವರ ವಿರುದ್ಧ ಕೇಸ್‌ ದಾಖಲಾಗಬೇಕು. ಯಾರು ಕಾನೂನು ಪಾಲಿಸುವುದಿಲ್ಲವೋ ಅವರ ಮೇಲೆ ಕೇಸ್‌ ಆಗಬೇಕು. ಡಾ|ಅಂಬೇಡ್ಕರ್‌ ಅವರು ಸಂವಿಧಾನ ಕೊಟ್ಟಿರೋದು ಈ ತರಹ ಹೇಳಿಕೆ ನೀಡೋಕೆ ಅಲ್ಲ. ಸಮಾಜದಲ್ಲಿ ಅಸಹ್ಯ ರೀತಿಯಲ್ಲಿ ಮಾತನಾಡಿದ್ರೆ ಅದನ್ನು ನಾವು ಖಂಡಿಸುತ್ತೇವೆ. ಚಕ್ರವರ್ತಿ ಸೂಲಿಬೆಲೆ ಸಹ ಇದೇ ಕೆಲಸ ಮಾಡಿರೋದು ಎಂದರು.

ಡಿ.ಕೆ.ಸುರೇಶ್‌ ಹೇಳಿಕೆಯನ್ನು ಈಶ್ವರಪ್ಪನವರು ಸರಿಯಾಗಿ ಅರ್ಥ ಮಾಡಿಕೊಳ್ಳಲಿ. ಅವರು ದೇಶ ಒಡೆಯೋದಾಗಿ ಹೇಳಿಲ್ಲ. ಜನರ ಕೂಗನ್ನು ಡಿ.ಕೆ.ಸುರೇಶ್‌ ಹೇಳಿದ್ದಾರೆ. ದೇಶ ವಿಭಜನೆ ಮಾತನ್ನು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಸುರೇಶ್‌ ಅವರ ವಿರುದ್ಧ ಕೇಸ್‌ ಹಾಕಲಿ. ಕಾನೂನು ಇದೆ. ಕಾನೂನು ಅದನ್ನು ನೋಡಿಕೊಳ್ಳುತ್ತದೆ ಎಂದರು.

ಈಶ್ವರಪ್ಪನವರು ಕಾನೂನು ಹೋರಾಟ ಮಾಡುವ ಹೇಳಿಕೆ ಕೊಟ್ಟರೆ ಮುಗಿಯುವುದಿಲ್ಲ. ಕೋರ್ಟ್‌ ಮುಂದೆ ಹೇಳಬೇಕು, ತಾವು ಆಡಿದ ಮಾತಿಗೆ ಕೋರ್ಟ್‌ನಲ್ಲಿ ಉತ್ತರ ಕೊಡಲಿ. ಆಗ ಕೋರ್ಟ್‌ ತೀರ್ಮಾನ ಕೈಗೊಳ್ಳುತ್ತದೆ. ರಾಜ್ಯ-ದೇಶದಲ್ಲಿ ಕಾನೂನು ಉಳಿಯಬೇಕು. ನಾವು ಹುಟ್ಟುವ ಮೊದಲೇ ದೇಶ ಇತ್ತು. ಸ್ವಾತಂತ್ರ್ಯ ಬಂದಿತ್ತು, ಸಂವಿಧಾನ ಇತ್ತು. ಪ್ರಶ್ನೆ ಕೇಳುವ ಅ ಧಿಕಾರ ಕೊಟ್ಟಿದ್ದು ಅಂಬೇಡ್ಕರ್‌. ಉತ್ತರ ಕೊಡುವ ಅಧಿ ಕಾರ ಕೊಟ್ಟಿದ್ದು ಅಂಬೇಡ್ಕರ್‌ ಅವರ ಸಂವಿಧಾನ ಎಂದರು.

ಡಿ.ಕೆ. ಸುರೇಶ್‌ ಈಶ್ವರಪ್ಪ ಅವರ ಮನೆಗೆ ಬರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ಈಶ್ವರಪ್ಪನವರಿಗೆ ಧೈರ್ಯ ಇಲ್ಲ. ಅವರು ಹೇಳಿಕೆಗೆ ಮಾತ್ರ ಸೀಮಿತ. ಎದೆಗಾರಿಕೆ ತೋರಿಸುವಂತಹ ಸುರೇಶ್‌ ಅಂತಹವರು ಈ ದೇಶದಲ್ಲಿ, ನಮ್ಮ ರಾಜ್ಯದಲ್ಲಿದ್ದಾರೆ ಎಂಬುದು ಸಂತೋಷದ ಸಂಗತಿ ಎಂದರು.

Advertisement

ಕೇಂದ್ರದಿಂದ ಜನರ ತೆರಿಗೆ ಹಣ ಕೇಳಲಾಗುತ್ತಿದೆ. ಈ ರಾಜ್ಯದಿಂದ ಗೆದ್ದು ಅಧಿ ಕಾರ ನಡೆಸುತ್ತಿರುವವರು ನಿರ್ಮಲಾ ಸೀತಾರಾಮನ್‌. ರಾಜ್ಯಕ್ಕೆ ಸುಳ್ಳು ಹೇಳ್ತಾ ಇರೋರು ಹಣಕಾಸು ಸಚಿವರು. ಅವರು ಸರಿಯಾದ ಲೆಕ್ಕ ಕೊಡಲಿ ಎಂದರು.

ಶ್ವೇತಪತ್ರ ಹೊರಡಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮೊದಲು ಕೇಂದ್ರ ಸರಕಾರ ರಾಜ್ಯಕ್ಕೆ ಎಷ್ಟು ಕೊಟ್ಟಿದೆ ಎಂದು ಹೇಳಬೇಕು. ಆಮೇಲೆ ರಾಜ್ಯದಿಂದ ಶ್ವೇತಪತ್ರ ಹೊರಡಿಸಲಾಗುವುದು. ಅವರು ನಮಗೆ ಎಷ್ಟು ಕೊಟ್ಟಿದ್ದಾರೆ ಎಂದು ಹೇಳಿದರೆ ಐದು ನಿಮಿಷದಲ್ಲೇ ಶ್ವೇತಪತ್ರ ಹೊರಡಿಸುತ್ತೇವೆ ಎಂದು ಹೇಳಿದರು.

ಬಿಜೆಪಿಯ ಪುತ್ತಿಲ, ಕಟೀಲ್‌ ಅವರೆಲ್ಲ ಮಾಡಿದ್ದು ಬೆಂಕಿ ಹಚ್ಚುವ ಕೆಲಸ. ಸಾಮಾಜಿಕ ಜಾಲತಾಣ ದುರುಪಯೋಗ ಮಾಡಿಕೊಂಡು ಬಿಜೆಪಿ ಅ ಧಿಕಾರಕ್ಕೆ ಬಂದಿದೆ. ಬ್ಯುಸಿನೆಸ್‌ ಮಾಡಿ ಅ ಧಿಕಾರಕ್ಕೆ ಬಂದವರು ಬಿಜೆಪಿಯವರು. ಜೀವನದಲ್ಲಿ ಒಂದು ಬಾರಿಯೂ 113 ಸ್ಥಾನ ಗಳಿಸಿಲ್ಲ. ಇವರಿಂದ ಇನ್ನೇನು ಬಯಸಲು ಸಾಧ್ಯ ಎಂದು ಕುಟುಕಿದರು.

“ಸರ್ವಜನಾಂಗದ ಶಾಂತಿಯ ತೋಟ’ ಶಿವಮೊಗ್ಗದ ರಾಗಿಗುಡ್ಡದಲ್ಲಿದೆ. ಅಲ್ಲಿ ಬಿಜೆಪಿಯವರು ಶಾಂತಿ ಕದಡುವ ಕೆಲಸ ಮಾಡಿದ್ದರು. ದೇಶದಲ್ಲಿ ಕಾನೂನು ಗೆಲ್ಲಬೇಕು. ನಾವು ಅ ಧಿಕಾರದಲ್ಲಿ ಇಲ್ಲದಿದ್ದಾಗ ಈ ತರಹ ಹೇಳಿಕೆ ಕೊಡೋದು, ಶಾಂತಿ ಕದಡೋದು ಮಾಡಿದ್ದೇವಾ? ಮಾಡಿದ್ದರೆ ನಮ್ಮ ವಿರುದ್ಧ ಕೇಸ್‌ ಮಾಡಬೇಕಿತ್ತು. ಕೆಲವೊಮ್ಮೆ ಅ ಧಿಕಾರ ಇರುತ್ತದೆ, ಮತ್ತೂಮ್ಮೆ ಇರೋದಿಲ್ಲ. ಆದರೆ ಕಾನೂನು ಶಾಶ್ವತ. ಅದು ಯಾವಾಗಲೂ ಗೆಲ್ಲಬೇಕು. ಅದು ಈಗ ಗೆದ್ದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next