Advertisement
ಈ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ಪಿಟಿಐ ಸುದ್ದಿಸಂಸ್ಥೆ ಶುಕ್ರವಾರ ಕೆ.ಎಲ್. ರಾಹುಲ್ ಅವರನ್ನು ಸಂದರ್ಶಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕದ ಆರಂಭಕಾರ, ತನಗೆ ಯಾವ ಕ್ರಮಾಂಕವಾದರೂ ಅಡ್ಡಿಯಿಲ್ಲ ಎಂದಿದ್ದಾರೆ.
ಆಸ್ಟ್ರೇಲಿಯ ವಿರುದ್ಧದ 2 ಟಿ20 ಪಂದ್ಯಗಳಲ್ಲಿ ಕ್ರಮವಾಗಿ 50 ಮತ್ತು 47 ರನ್ ಬಾರಿಸಿದ ರಾಹುಲ್, ಇದೇ ಫಾರ್ಮನ್ನು ಐಪಿಎಲ್‌ಗೂ
ವಿಸ್ತರಿಸಿದರು. ಪಂಜಾಬ್ 53.90ರ ಸರಾಸರಿಯಲ್ಲಿ 593 ರನ್ ಪೇರಿಸಿ ಮೆರೆದರು. ಇದರಲ್ಲಿ ಒಂದು ಶತಕವೂ ಸೇರಿದೆ. ವಾರ್ನರ್ ಬಳಿಕ ಅತ್ಯಧಿಕ ರನ್ ಪೇರಿಸಿದ ಹೆಗ್ಗಳಿಕೆಯೂ ಇವರದಾಗಿದೆ. ಹೀಗಾಗಿ ವಿಶ್ವಕಪ್‌ನಲ್ಲೂ ರಾಹುಲ್ ಮಿಂಚಬಲ್ಲರೆಂಬ ಭರವಸೆ ಮೂಡಿದೆ.
“ಕಳೆದೆರಡು ತಿಂಗಳಿಂದ ನನ್ನ ಬ್ಯಾಟಿಂಗ್ ಉತ್ತಮ ಲಯದಲ್ಲಿದೆ. ಇಂಗ್ಲೆಂಡ್ ಲಯನ್ಸ್ ವಿರುದ್ಧ ಆಡುವಾಗ ಬ್ಯಾಟಿಂಗ್ ಕೌಶಲದತ್ತ ಹೆಚ್ಚಿನ ಗಮನ ನೀಡಲು ಸಾಧ್ಯವಾಯಿತು. ಹೀಗಾಗಿ ಆಸ್ಟ್ರೇಲಿಯ ವಿರುದ್ಧದ ಟಿ20, ಐಪಿಎಲ್‌ನಲ್ಲಿ ರನ್ ಉತ್ತಮ ರನ್ ಸಂಪಾದಿಸಿದೆ’ ಎಂದರು.
Related Articles
Advertisement
ಇಂಗ್ಲೆಂಡ್ ವಾತಾವರಣದ ಅರಿವಿದೆಕಳೆದ ಇಂಗ್ಲೆಂಡ್ ಪ್ರವಾಸದ ವೇಳೆ ಅಸ್ಥಿರ ಪ್ರದರ್ಶನ ನೀಡಿದ ಪ್ರಶ್ನೆಯೂ ರಾಹುಲ್‌ಗೆ ಎದುರಾಯಿತು. “ಕಳೆದ ವರ್ಷ ಇದೇ ಅವಧಿಯಲ್ಲಿ ನಾವು ಇಂಗ್ಲೆಂಡ್‌ನಲ್ಲಿದ್ದೆವು. ಹೀಗಾಗಿ ಅಲ್ಲಿನ ವಾತಾವರಣದ ಬಗ್ಗೆ ಅರಿವಿದೆ. ಕಳೆದ ಪ್ರವಾಸ ಯಾರಿಗೂ ಆತ್ಮವಿಶ್ವಾಸ ತುಂಬಿಸದು. ನಾವು ಫ್ರೆಶ್ ಆಗಿ ಇಂಗ್ಲೆಂಡ್‌ನಲ್ಲಿ ವಿಶ್ವಕಪ್ ಆಡಬೇಕಿದೆ. ಇದಕ್ಕಾಗಿ ಉತ್ತಮ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ರಾಹುಲ್ ಹೇಳಿದರು.