Advertisement

ಹ್ಯಾಪಿ ಫ್ರಿಡ್ಜ್: ಬಡವರ ಹಸಿವು ನೀಗಿಸುವ ಭಗವಂತ

08:37 PM Oct 04, 2019 | Lakshmi GovindaRaju |

ಬೆಂಗಳೂರು ರೇಲ್ವೆ ನಿಲ್ದಾಣಕ್ಕೆ ಒಬ್ಬ ದೇವರು ಬಂದು, ಸ್ಥಾಪನೆ ಆಗಿದ್ದಾನೆ. ಕೇಳಿದ್ದನ್ನೆಲ್ಲ ಕೊಡುವ ಭಗವಂತ ಅವನಲ್ಲವಾದರೂ, ಹಸಿದವರಿಗೆ ಏನು ಬೇಕೋ, ಅದನ್ನು ಕೊಡುವ ಕಲ್ಪವೃಕ್ಷ ಆತ! ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೇಲ್ವೆ ಸ್ಟೇಷನ್ನಿಗೆ ಹೋದಾಗ, “ಕೈಯಲ್ಲಿ ಹಣವಿಲ್ಲ. ಹೊಟ್ಟೆ ಹಸಿದಿದೆ. ಏನು ಮಾಡೋದೀಗ?’ ಎಂದು ಬಡವರು, ನಿರ್ಗತಿಕರು ಇನ್ನು ಮುಂದೆ ಚಿಂತೆಗೆಟ್ಟು ಕೂರುವ ಅಗತ್ಯವೇ ಇಲ್ಲ.

Advertisement

ಹಸಿದ ಜೀವಗಳು ಈತನ “ಸನ್ನಿಧಾನ’ಕ್ಕೆ ಬಂದರೆ ಸಾಕು, ಕ್ಷಣಮಾತ್ರದಲ್ಲಿ ಸಂತೃಪ್ತರಾಗಬಹುದು! ಅರೆ, ಇದ್ಯಾವ ದೇವರು ಅಂತ ಅಂದ್ಕೋಂಡ್ರಾ? ಇದು “ಹ್ಯಾಪಿ ಪ್ರಿಡ್ಜ್’! “ಫೀಡಿಂಗ್‌ ಇಂಡಿಯಾ’ ಎನ್ನುವ ಸಂಸ್ಥೆಯು, ರೇಲ್ವೆ ನಿಲ್ದಾಣದಲ್ಲಿ ಇಟ್ಟಿರುವ ಫ್ರಿಡ್ಜ್. ಹಸಿದವರ, ನಿರ್ಗತಿಕರ ಹಸಿವನ್ನು ನೀಗಿಸಲೆಂದೇ, ಭಾರತೀಯ ರೇಲ್ವೆಯ ಸಹಯೋಗದೊಂದಿಗೆ ಇದನ್ನು ಇತ್ತೀಚಿಗೆ ಇಲ್ಲಿ ಸ್ಥಾಪಿಸಲಾಗಿದೆ.

ಹಾಗಾದರೆ, “ಈ ಫ್ರಿಡ್ಜ್ನೊಳಗೆ ಆಹಾರ ಇಡೋ­ರ್ಯಾರು’- ಎನ್ನುವ ಪ್ರಶ್ನೆಯೇ? ಯಾರು ಬೇಕಾದರೂ ಆಗಬಹುದು. ಯಾರ ಬಳಿ, ಹೆಚ್ಚುವರಿಯಾಗಿ ಆಹಾರವಿದೆಯೋ, ಅದನ್ನು ತಂದು ಇಲ್ಲಿ ಇಡಬಹುದು. ಹಣ್ಣು, ಮನೆ ಆಹಾರಗಳು, ರೆಸ್ಟೋರೆಂಟ್‌ ಆಹಾರಗಳನ್ನು ಇಲ್ಲಿ ಇಡಬಹುದು. ಬಡವರ, ಅಸಹಾಯಕರ ಹಸಿವು ನೀಗಿಸಲು ನಮ್ಮಿಂದ ಸಾಧ್ಯವಾಗುವ ಪುಟ್ಟ ಉಪಕಾರವನ್ನು ಈ ಮೂಲಕ ನೆರವೇರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next