Advertisement

ಹನುಮಂತನಗರ :ಕಾಮಾಂಧ ಅಂಗಡಿ ಮಾಲಿಕನಿಂದ 10ರ ಬಾಲೆಯ ರೇಪ್‌ 

11:32 AM May 16, 2017 | Team Udayavani |

ಬೆಂಗಳೂರ : ನಗರದ ಹನುಮಂತನಗರದಲ್ಲಿ ಚಾಕೆಲೇಟ್‌ ಆಮಿಷ ತೋರಿ 10 ವರ್ಷದ ಬಾಲಕಿಯೊಬ್ಬಳ ಮೇಲೆ ಪ್ರಾವಿಷನ್‌ ಸ್ಟೋರ್‌ ಮಾಲಿಕನೊಬ್ಬ ಅತ್ಯಾಚಾರ ಎಸಗಿದ ಘಟನೆ ಮೇ 13 ರಂದು ಸಂಜೆ ನಡೆದಿದೆ.

Advertisement

ಸಂಬಂಧಿಕರ ಮನೆಗೆ ತೆರಳುತ್ತಿದ್ದ ಬಾಲಕಿಗೆ ಚಾಕೆಲೇಟ್‌ ನೀಡುವುದಾಗಿ ಅಂಗಡಿಯ ಒಳಗೆ ಕರೆದ ನಟರಾಜ್‌ ಲೈಂಗಿಕ ಕಿರುಕುಳ ನೀಡಿ ಕಾಮಾಂಧನಾಗಿ ಎರಗಿದ್ದಾನೆ. ಕಾಮುಕನ ಅಟ್ಟಹಾಸಕ್ಕೆ ನಲುಗಿ ತೀವ್ರ ರಕ್ತಸ್ರಾವಕ್ಕೊಳಗಾದ ಬಾಲಕಿ ಕಂಗಾಲಾಗಿ ಮನೆಗೆ ಮರಳಿದ್ದಾಳೆ. ಬಾಲಕಿಯನ್ನು ಕೂಡಲೇ ವಿಕ್ಟೋರಿಯಾ ಅಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪೋಕ್‌ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡ ಹನುಮಂತನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬಾಲಕಿಗೆ ಚಿಕಿತ್ಸೆ ಮುಂದು ವರಿದಿದ್ದು ,ಪೊಲೀಸರು ಹೇಳಿಕೆಗಳನ್ನು ಪಡೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next