Advertisement
ಸೂರ್ಯೋದಯದ ಸಮಯಕ್ಕೆನಿಗದಿತ ದಿನದಂದು ಸೂರ್ಯೋದಯದ ಸಮಯಕ್ಕೆ ಸರಿಯಾಗಿ ಗಲ್ಲಿಗೇರಿಸಬೇಕು. ಗಲ್ಲುಶಿಕ್ಷೆ ವಿಧಿಸುವ ದಿನ ಜೈಲಿನ ಸೂಪರಿಂಟೆಂ ಡೆಂಟ್, ಡೆಪ್ಯುಟಿ ಸೂಪರಿಂಟೆಂಡೆಂಟ್, ಅಸಿಸ್ಟೆಂಟ್ ಸೂಪರಿಂ ಟೆಂಡೆಂಟ್ ಹಾಗೂ ವೈದ್ಯಕೀಯ ಅಧಿಕಾರಿಗಳು ಸ್ಥಳದಲ್ಲಿ ಹಾಜರಿರು ತ್ತಾರೆ. ಗಲ್ಲುಶಿಕ್ಷೆಯ ಮೇಲುಸ್ತುವಾರಿ ನೋಡಿಕೊಳ್ಳಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಂದ ನಿಯುಕ್ತಿಗೊಂಡ ಎಕ್ಸಿಕ್ಯೂಟಿವ್ ಮ್ಯಾಜಿ ಸ್ಟ್ರೇಟ್ ಇರುತ್ತಾರೆ. ಗಲ್ಲುಶಿಕ್ಷೆಯ ಆದೇಶಕ್ಕೆ ಇವರೇ ಸಹಿ ಹಾಕುತ್ತಾರೆ.
ಅಪರಾಧಿ ಬಯಸಿದರೆ ಆತನ ಧರ್ಮದ ಗುರುವೊಬ್ಬರನ್ನು ಒಳಗೆ ಕರೆಯಿಸಿಕೊಳ್ಳುವುದಕ್ಕೆ ಅವಕಾಶ ಇದೆ. ಇಂತಹ ಸಂದರ್ಭ ಜೈಲು ಸೂಪರಿಂಟೆಂಡೆಂಟ್ ಅವರ ಒಪ್ಪಿಗೆಯಿರಬೇಕು. ಕೈದಿಯ ಸಂಬಂಧಿಕರಾಗಲಿ, ಜೈಲಿನ ಇತರ ಕೈದಿಗಳಾಗಲೀ ಅಲ್ಲಿರುವಂತಿಲ್ಲ. ಗಲ್ಲುಶಿಕ್ಷೆಯ ಬಗ್ಗೆ ಸಂಶೋಧನೆ ನಡೆಸುತ್ತಿರುವ ಸಾಮಾಜಿಕ ವಿಜ್ಞಾನಿಗಳು, ಮನಃಶಾÏಸ್ತ್ರಜ್ಞರು ಅಥವಾ ಮನೋವೈದ್ಯರು ಒಳಗೆ ಪ್ರವೇಶಿಸಬಹುದು. ಸ್ನಾನ, ಹೊಸ ಬಟ್ಟೆ
ಜೈಲಿನ ಹೊರಗೆ ಬಿಗಿ ಭದ್ರತೆಯಿರುತ್ತದೆ. ಕೈದಿಯ ಇಷ್ಟದ ಊಟ, ಸ್ನಾನ ಹಾಗೂ ಗಲ್ಲುಶಿಕ್ಷೆಯ ಮುನ್ನಾದಿನ ರಾತ್ರಿ ಕೈದಿ ಬಯಸಿದ ರೀತಿಯ ಆಹಾರವನ್ನು ನೀಡಲಾಗುತ್ತದೆ. ಮರುದಿನ, ಗಲ್ಲುಶಿಕ್ಷೆಗೆ ಎರಡು ತಾಸಿರುವಾಗ ಅವನನ್ನು ಎಬ್ಬಿಸಿ ಸ್ನಾನ ಮಾಡಲು ಹೇಳಲಾಗುತ್ತದೆ. ಬಳಿಕ ಹೊಸ ಬಟ್ಟೆ ತೊಡಿಸಿ ಜೈಲು ಕೋಣೆಯಿಂದ ಹೊರಗೆ ಕರೆತಂದು ಮುಖಕ್ಕೆ ಕಪ್ಪು ಬಟ್ಟೆ ಮುಚ್ಚಲಾಗುತ್ತದೆ. ಅಪರಾಧಿ ಹಲಗೆ ಏರಿದ ಬಳಿಕ ಅಧಿಕಾರಿಗಳು ನೇಣು ಹಾಕುವವನಿಗೆ ಸೂಚನೆ ಕೊಡುತ್ತಾರೆ. ಈ ವೇಳೆ ಆತ ಅಪರಾಧಿ ನಿಂತಿರುವ ಹಲಗೆಯನ್ನು ಲಿವರ್ ಮೂಲಕ ಸರಿಸುತ್ತಾನೆ. ಅಪರಾಧಿ ದೇಹ ನೇತಾಡುವ ಮೂಲಕ ಪ್ರಾಣ ಹೋಗುತ್ತದೆ.
Related Articles
ಗಲ್ಲಿಗೇರಿಸುವುದು, ಅದಕ್ಕಾಗಿ ಸಮಯ ನಿಗದಿ ಆಯಾ ರಾಜ್ಯಗಳ ಕೆಲಸ. ಗಲ್ಲುಶಿಕ್ಷೆಯ ಆದೇಶವನ್ನು ಸರಕಾರದಿಂದ ಸ್ವೀಕರಿಸಿದ ಆನಂತರ ಕಾರಾಗೃಹ ಅಧೀಕ್ಷಕರು ಆ ಬಗ್ಗೆ ಗಲ್ಲು ಶಿಕ್ಷೆಗೊಳಗಾಗುವ ವ್ಯಕ್ತಿಯ ಸಂಬಂಧಿಕರಿಗೆ ಮಾಹಿತಿ ನೀಡುತ್ತಾರೆ. ಗಲ್ಲಿಗೇರುವ ವ್ಯಕ್ತಿ ಉಯಿಲು ಬರೆಯಬೇಕೆಂದು ಬಯಸಿದರೆ ಅದಕ್ಕೆ ವ್ಯವಸ್ಥೆ ಮಾಡಬೇಕು.
Advertisement
ಹಗ್ಗ ಹೇಗಿರುತ್ತದೆ?ಪ್ರತಿ ಗಲ್ಲುಶಿಕ್ಷೆಗೂ ಹೊಸ ಹಗ್ಗ ನೇಯಲಾಗುತ್ತದೆ. ಗಲ್ಲಿಗೇರಿಸುವ ವ್ಯಕ್ತಿಯೇ ಈ ಕೆಲಸ ಮಾಡುತ್ತಾನೆ. ಅದಕ್ಕೆ ಕಾನೂನುಬದ್ಧ ಅಳತೆ ಗಳಿವೆ. ಕೈದಿ 45 ಕೆ.ಜಿ. ತೂಕದವನಾಗಿದ್ದರೆ. ಎಂಟು ಅಡಿಯ ಹಗ್ಗ ಬಳಸಬೇಕು. 45ರಿಂದ 60 ಕೆ.ಜಿ ಒಳಗಿದ್ದರೆ. ಏಳು ಅಡಿ ಎಂಟು ಇಂಚು ಉದ್ದದ ಹಗ್ಗ ಬಳಸಬೇಕು. 60ರಿಂದ 75 ಕೆ.ಜಿ ತೂಕವಿದ್ದರೆ ಏಳು ಅಡಿ, 75ರಿಂದ 91 ಕೆ.ಜಿ. ಇದ್ದರೆ ಆರು ಅಡಿ ಆರು ಇಂಚು ಹಾಗೂ 91 ಕೆ.ಜಿ.ಗಿಂತ ಹೆಚ್ಚು ತೂಕವಿದ್ದರೆ ಆರು ಅಡಿಗಿಂತ ಚೂರು ಉದ್ದದ ಹಗ್ಗ ಬಳಸಲಾಗುತ್ತದೆ. ಈ ಹಗ್ಗ ಜಾರಲು ಅನುಕೂಲವಾ ಗುವಂತೆ ಎಣ್ಣೆ, ಬೆಣ್ಣೆ, ತುಪ್ಪ ಅಥವಾ ಬಾಳೆಹಣ್ಣನ್ನು ಸವರಲಾಗುತ್ತದೆ. ಹ್ಯಾಂಗ್‌ಮೆನ್‌ಗಳು
ಪ್ರಸ್ತುತ ಭಾರತದಲ್ಲಿ ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಲ ಎರಡು ರಾಜ್ಯಗಳಲ್ಲಿ ಮಾತ್ರ ಅಧಿಕೃತವಾಗಿ ನೇಣುಗಂಬಕ್ಕೆ ಏರಿಸುವವರು ಇ¨ªಾರೆ. 2000 ಇಸವಿಯವರೆಗೂ ನೇಣುಗಂಬಕ್ಕೆ ಏರಿಸುವ ಕೆಲಸ ಮಾಡಿ, ಖ್ಯಾತಿ ಪಡೆದವರು ಬಂಗಾಲದ ನಾಟಾ ಮಲ್ಲಿಕ್ ಅವರು. ಇವರು ತಮ್ಮ ಸೇವಾವಧಿಯಲ್ಲಿ ಒಟ್ಟು 25 ಅಪರಾಧಿಗಳನ್ನು ನೇಣಿಗೇರಿಸಿ¨ªಾರೆ. ಇವರು ಕಡೆಯದಾಗಿ 2004ರಲ್ಲಿ ಧನಂಜಯ್ ಚಟರ್ಜಿಯನ್ನು ಗಲ್ಲಿಗೇರಿಸಿದ್ದರು. ಪ್ರತಿ ಬಾರಿ ನೇಣುಗಂಬಕ್ಕೆ ಏರಿಸಿದಾಗ 5ರಿಂದ 10 ಸಾವಿರ ನೀಡಲಾಗುತ್ತಿತ್ತು. ಮಲ್ಲಿಕ್ ಅವರಿಗೆ ಪಶ್ಚಿಮ ಬಂಗಾಲ ಸರಕಾರ ಪ್ರತಿ ತಿಂಗಳು 10 ಸಾವಿರ ರೂ. ಸಂಬಳ ನೀಡುತ್ತಿತ್ತು. 2008ರಲ್ಲಿ ನಾಟಾ ಮಲ್ಲಿಕ್ ನಿಧನರಾದರು. ಆಗ ಅವರ ಮಗ ಮೆಹ್ತಾಬ್ ಆ ಸ್ಥಾನಕ್ಕೆ ನೇಮಕವಾದರು. ನೇಣಿಗೆ ಏರಿಸುವ ವೃತ್ತಿ ಆ ಕುಟುಂಬಕ್ಕೆ ಸಂಪ್ರದಾಯವಾಗಿ ಬಂದಿತ್ತು. ನಾಟಾ ಮಲ್ಲಿಕ್‌ಗೂ ಹಿಂದೆ ಅವರ ತಂದೆ ಮತ್ತು ತಾತ ಇದೇ ವೃತ್ತಿ ಮಾಡಿಕೊಂಡಿದ್ದರು. ಅರ್ಧ ತಾಸು ಕುಣಿಕೆಯಲ್ಲಿ
ಎರಡೂ ಕೈಗಳನ್ನು ಹಿಂದಕ್ಕೆ ಕಟ್ಟಲಾಗುತ್ತದೆ. ಯಾವುದೇ ಸಂದರ್ಭದಲ್ಲೂ ಆತ ನೇಣು ಗಂಬವನ್ನು ನೋಡುವಂತಿಲ್ಲ. ಗಲ್ಲುಗಂಬಕ್ಕೆ ಇರುವ 20 ಮೀಟರ್ ಅಂತರವನ್ನು ಕೈದಿ ಒಂದು ನಿಮಿಷದೊಳಗೆ ನಡೆದುಕೊಂಡು ಕ್ರಮಿಸಬೇಕು. ಗಲ್ಲಿಗೇರಿಸಿದ ಮೇಲೆ ಅರ್ಧ ತಾಸು ಕೈದಿಯನ್ನು ನೇಣು ಕುಣಿಕೆಯಲ್ಲೇ ಬಿಡಲಾಗುತ್ತದೆ. ಅನಂತರ ವೈದ್ಯಕೀಯ ಅಧಿಕಾರಿ ಪರೀಕ್ಷೆ ನಡೆಸಿ ನಿಧನವನ್ನು ಖಚಿತ
ಪಡಿಸುತ್ತಾರೆ. ಮಹಜರು, ಸಂಬಂಧಿಕರಿಗೆ ದೇಹ
ಅಪರಾಧಿ ಮೃತನಾದ ಬಳಿಕ ಆತನ ದೇಹದ ಮಹಜರು ನಡೆಯುತ್ತದೆ. ಬಳಿಕ ಸಂಬಂಧಿಕರಿಗೆ ಮೃತದೇಹ ಹಸ್ತಾಂತರವಾಗುತ್ತದೆ. ಒಂದು ವೇಳೆ ಅವರು ದೇಹ ಪಡೆದುಕೊಳ್ಳಲು ನಿರಾಕರಿಸಿದರೆ ಮಾತ್ರ ಅಧಿಕಾರಿಗಳೇ ಆತನ ಧರ್ಮಕ್ಕೆ ಅನುಗುಣವಾಗಿ ಅಂತ್ಯಸಂಸ್ಕಾರ ನಡೆಸುತ್ತಾರೆ. ಶವ ಹಸ್ತಾಂತರವಾದರೆ ಅದನ್ನು ಸಾರ್ವಜನಿಕ ವೀಕ್ಷಣೆಗೆ ಇಡಬಾರದು, ಮೆರವಣಿಗೆ ನಡೆಸಬಾರದು ಎಂಬ
ಷರತ್ತು ಇದೆ. ಯಾವ ಅಪರಾಧಗಳಿಗೆ ಈ ಶಿಕ್ಷೆ?
– ಗಂಭೀರವಾದ ಅಪರಾಧ, ಹತ್ಯೆಯ ಸಂಚು (ಐಪಿಸಿ 120ಬಿ)
– ದೇಶದ್ರೋಹ, ಸರಕಾರದ ವಿರುದ್ಧ ಯುದ್ಧ ಸಂಚು (ಐಪಿಸಿ 121)
– ಸಶಸ್ತ್ರ ಪಡೆಯೊಳಗೆ ದಂಗೆಗೆ ಪ್ರಚೋದನೆ (ಐಪಿಸಿ 132ಬಿ)
– ಹತ್ಯೆ (ಐಪಿಸಿ 302, 303)
– ಅಪ್ರಾಪ್ತನ ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 305)
– ಸತಿ ಪದ್ಧತಿಯ ಆಚರಣೆ (ಸತಿ ಕಾಯ್ದೆ)
– ಡಕಾಯಿತಿ ಮತ್ತು ಕೊಲೆ (ಐಪಿಸಿ 396)-ಅತ್ಯಾಚಾರ ಮತ್ತು ಹತ್ಯೆ (ಐಪಿಸಿ 376ಎ) ಜಾಹೀರಾತು ನೀಡಿದ್ದ ಶ್ರೀಲಂಕಾ
ಕೆಲವು ಸಮಯಗಳ ಹಿಂದೆ ಶ್ರೀಲಂಕಾದ ಪತ್ರಿಕೆಗಳಲ್ಲಿ ನೇಣಿಗೆ ಹಾಕುವವರ ನೇಮಕಾತಿಯ ಜಾಹೀರಾತು ನೀಡಲಾಗಿತ್ತು. 43 ವರ್ಷಗಳ ಬಳಿಕ ಶ್ರೀಲಂಕಾದಲ್ಲಿ ಗಲ್ಲು ಶಿಕ್ಷೆ ಮತ್ತೆ ಆರಂಭಿಸಲಾಗಿದೆ. 2014ರಲ್ಲಿ ಅಲ್ಲಿ ನೇಣುಗಂಬಕ್ಕೆ ಹಾಕುತ್ತಿದ್ದ ವ್ಯಕ್ತಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಇಬ್ಬರು ಹ್ಯಾಂಗ್‌ಮನ್‌ಗಳನ್ನು ಪೂರ್ಣಾವಧಿಗೆ ನೇಮಿಸಿಕೊಂಡಿದೆ. ಅವರಿಗೆ ಪ್ರತಿ ತಿಂಗಳು 36,310 ರೂ. ನೀಡಲಾಗುತ್ತಿದೆ. ಎಲ್ಲಿ ಹೆಚ್ಚು?
ಚೀನ, ಇರಾನ್, ಸೌದಿ ಈರೇಬಿಯಾ, ಇರಾಕ್ ಮತ್ತು ವಿಯೆಟ್ನಾಂ ದೇಶಗಳಲ್ಲಿ
ಅತಿ ಹೆಚ್ಚು ಪ್ರಮಾಣದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ. ಚೀನದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗುತ್ತದೆ. ಆದರೆ, ಇರಾನ್, ಇರಾಕ್, ಸೌದಿ ಆರೇಬಿಯಾ ಮತ್ತು ವಿಯೆಟ್ನಾಂನಲ್ಲಿ ನೇಣುಗಂಬಕ್ಕೆ ಏರಿಸಲಾಗುತ್ತದೆ ಅಥವಾ ಶಿರಚ್ಛೇದನ ಮಾಡಲಾಗುತ್ತದೆ. ಎಷ್ಟು ದೇಶಗಳಲ್ಲಿದೆ ಗಲ್ಲು?
195 ದೇಶಗಳ ಪೈಕಿ 103 ದೇಶಗಳಲ್ಲಿ ಮರಣದಂಡನೆ ಶಿಕ್ಷೆ ರದ್ದುಪಡಿಸಲಾಗಿದೆ. ಭಾರತದಲಿ ಗಲ್ಲು ಶಿಕ್ಷೆಯ ಮೂಲಕ ಮರಣ ದಂಡನೆ ಜಾರಿಯಲ್ಲಿದೆ. ಚೀನ ಮತ್ತು ಉ.ಕೊರಿಯಾ ಸರಕಾರಗಳು ಲೆಕ್ಕಕ್ಕೆ ಸಿಗದಷ್ಟು ಮಂದಿಯನ್ನು ನಾನಾ ಕಾರಣಕ್ಕಾಗಿ ಪ್ರತಿವರ್ಷ ಸಾಯಿಸುತ್ತವೆ. ಕೆಲವು ರಾಷ್ಟ್ರಗಳು ಮರಣ ದಂಡನೆಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ. ಕೈದಿಗಳಿಂದ ಬಲವಂತದ ತಪ್ಪೊಪ್ಪಿಗೆಗಳನ್ನು ಪಡೆದು ಶಿಕ್ಷೆಗೆ ಒಳಪಡಿಸುವುದೂ ಇದೆ. ಹ್ಯಾಂಗ್‌ಮೆನ್
ಬರ್ಬರ ಕೊಲೆ, ಅಪರೂಪದಲ್ಲಿ ಅಪರೂಪ ಪ್ರಕರಣ (ಭಾರತ, ಅಮೆರಿಕ)
ವ್ಯಭಿಚಾರ (ಮಾಲ್ಡೀವ್ಸ್, ಸೌದಿ ಅರೇಬಿಯಾ)
ಪ್ರವಾದಿ ನಿಂದನೆ, ಧರ್ಮನಿಂದನೆ
(ಸೌದಿ, ಇರಾನ್, ಪಾಕಿಸ್ತಾನ)
ಮಾದಕದ್ರವ್ಯ ಸಾಗಣೆ (ಹಾಂಕಾಂಗ್, ಸಿಂಗಾಪುರ)
ಆರ್ಥಿಕ ಅಪರಾಧ(ಚೀನ, ಉ.ಕೊರಿಯಾ, ವಿಯೆಟ್ನಾಂ)