Advertisement
ಧಾರ್ಮಿಕ ಪರಂಪರೆಕರಾವಳಿ ಕರ್ನಾಟಕದಲ್ಲಿ ಮಹಾಶಿವರಾತ್ರಿಯಂದು ವಿಶಿಷ್ಟವಾಗಿ ಆಚರಿಸುವ ಗ್ರಾಮೀಣ ಧಾರ್ಮಿಕ ಪರಂಪರೆಯಿಂದ ಆಚರಿಸಲ್ಪಡುವ ಸಂಪ್ರದಾಯವೇ ಹಣಬಿನ ಹಬ್ಬ (ದಿಂ ಸಾಲ್ ಹಬ್ಬ) ಹಿಂದೂ ಪುರಾಣ ತಿಳಿಸುವಂತೆ ಶಿವನು ಉರಿಗಣ್ಣಿನಿಂದ ಮನ್ಮಥನನ್ನು ಸುಡುವ ಅದರ ಪ್ರತಿಬಿಂಬಿತವಾಗಿ ಹಣಬು ಸುಡುವುದು ಎಂಬುವುದು ಪಾರಂಪರಿಕೆಯ ನಂಬಿಕೆ.
ಮಹಾಶಿರಾತ್ರಿಯಂದು ಶಿವನ ಆಲಯದಲ್ಲಿ ಶಿವನಿಗೆ ವಿಶೇಷವಾದ ಪೂಜೆಯನ್ನು ಅರ್ಪಿಸುವ ಮೂಲಕ ಗ್ರಾಮೀಣ ಕೃಷಿ ಸಮುದಾಯದ ಹಿರಿಯರು ಸಂಪ್ರದಾಯದಂತೆ ಮೊದಲ ದಿನ ಅಡಿಕೆ ಹಣಬು ಸುಡುವ ಮೂಲಕ ಹಣಬಿನ ಹಬ್ಬಕ್ಕೆ ಚಾಲನೆ ನೀಡುತ್ತಾರೆ. ಅನಂತರ ಮರುದಿನ ಊರಿನ ಗ್ರಾಮಸ್ಥರು ಒಗ್ಗೂಡಿಕೊಂಡು ಶಿವನ ಆಲಯದಲ್ಲಿ ವಿಶಿಷ್ಟವಾಗಿ ಹಣಬಿಗೆ ಬೆಂಕಿ ಸ್ಪರ್ಶಿಸುವ ಮೊದಲು ಕುಂದಗನ್ನಡದಲ್ಲಿಯೇ ಶಿವನನ್ನು ಕೊಂಡಾಡುತ್ತ ಅತ್ಯಂತ ಭಕ್ತಿ ಭಾವದಿಂದ ತನ್ಮಯರಾಗುತ್ತಾರೆ. ಗ್ರಾಮ್ಯ ಸೊಗಡಿನ ಹಣಬಿನ ಹಬ್ಬದ ಕುಂದಗನ್ನಡದ ಪದ್ಯ ಸಾಲು
ದಿಂ ಸಾಲ್ ಎನಿರೋ … ದಿಂಸಾಲ್||
( ಒಂದೇ ದನಿಯಲ್ಲಿ ಎಲ್ಲರೂ ಒಗ್ಗೂಡಿಕೊಂಡು ಹೇಳುವರು )
Related Articles
Advertisement
ಇಂದಿವಿràತ್ತೂತ್ತಿಗೆ ಮಹಾ ದೊಡ್ಡ ಹಬ್ಬವೋ…ದಿಂ ಸಾಲ್ |
ನಾಳಿ ಇಷ್ಟೋತ್ತಿಗೆ ಎನ್‌ತಿಂತ್ರಿ ಮಕ್ಕಳೇ…ದಿಂ ಸಾಲ್ |
ನಮ್ಮ ಕಾಮನಿಗೆ ಹೆಣ್ಣು ಕೇಳ್ಳೋಕೋದರೋ …ದಿಂ ಸಾಲ್ |
ಹೆಣ್ಣು ಕೇಳುಕ್ ಹೋದರೋ ಎಲ್ಲಿಗಾಗಿ ಹೋದರೋ…ದಿಂ ಸಾಲ್ |
ಎಲ್ಲಿಗಾಗಿ ಹೋದರೂ ಕೊಡ್‌ಸಿಗಾಗಿ ( ಕೊಡಚಾದ್ರಿ) ಹೋದರೋ…ದಿಂ ಸಾಲ್ |
ಕೊಡಸಿಗಾಗಿ ಹೋದರೋ ಕೊಡಸುವು ತಂದರೋ…ದಿಂ ಸಾಲ್ |
ಈ ಸಾಲು ಕುಂದ ಗನ್ನಡದಲ್ಲಿ ಪದ್ಯಗಳನ್ನು ಹೇಳುತ್ತ ನೂರಾರು ಭಾವುಕ ಭಕ್ತರು ಒಂದೆಡೆ ಸೇರಿಕೊಂಡು ವಿಶಿಷ್ಟವಾಗಿ ಆಚರಿಸುವ ಹಬ್ಬವೇ ಹಣಬಿನ ಹಬ್ಬ (ದಿಂ ಸಾಲ್ ಹಬ್ಬ)
ಶಿವನನ್ನು ಕೊಂಡಾಡುವಿಕೆಅನಂತರ ನಂಬಿಕೆಯಂತೆ ಪರಂಪರೆಯಿಂದ ನಡೆಸಿಕೊಂಡು ಬಂದ ಗ್ರಾಮೀಣ ಸಮುದಾಯ ಮನೆತನದವರು ಶಿವನನ್ನು ಕೊಂಡಾಡುತ್ತ ಇಡೀ ಗ್ರಾಮದ ಅದೆಷ್ಟೋ ಸಹಸ್ರಾರು ಮನೆಗಳಿಗೆ ತೆರಳುವ ಸಂಪ್ರದಾಯ ಇಂದಿಗೂ ಉಳಿದಿದ್ದು ಇದರಿಂದ ಗ್ರಾಮದಲ್ಲಿ ಮಳೆ, ಬೆಳೆ, ಶಾಂತಿ, ಸಮೃದ್ಧಿಗಳು ನೆಲೆಸಲಿ ಎನ್ನುವುದೇ ನಂಬಿಕೆ ಇಂದಿಗೂ ಈ ಸಂಪ್ರದಾಯ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ, ಉಳೂ¤ರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ, ತೆಕ್ಕಟ್ಟೆ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಕುಂಭಾಶಿ ಮಹಾಲಿಂಗೇಶ್ವರ (ಹರಿಹರ) ದೇವಸ್ಥಾನ, ಬೇಳೂರು ಶ್ರೀಮಹಾಲಿಂಗೇಶ್ವರ, ದೇಲಟ್ಟು ಶ್ರೀ ಮಹಾಲಿಂಗೇಶ್ವರ ಸೇರಿದಂತೆ ಇಂದಿಗೂ ವಿಶಿಷ್ಟವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಇಂತಹ ಕುಂದಗನ್ನಡದ ಗ್ರಾಮೀಣ ಜನಪದ ಸಂಸ್ಕೃತಿ ಉಳಿವಿಗೆ ಸಂಬಂಧಪಟ್ಟ ಸಂಸ್ಕೃತಿ ಇಲಾಖೆ ಪ್ರೋತ್ಸಾಹ ನೀಡುವ ಮೂಲಕ ಅದೆಷ್ಟೋ ನಶಿಸುತ್ತಿರುವ ಕುಂದಗನ್ನಡದ ಅತ್ಯಮೂಲ್ಯ ಜನಪದ ಈ ಮೂಲ ಸೊಗಡಿನ ಉಳಿವಿಗೆ ಅಧ್ಯಯನಶೀಲರಾಗಿ ಪ್ರೋತ್ಸಾಹಿಸ ಬೇಕಾದ ಅನಿವಾರ್ಯತೆ ಇದೆ.
– ತೆಂಕಮನೆ ಗೋವಿಂದ ದೇವಾಡಿಗ ತೆಕ್ಕಟ್ಟೆ, ಹಿರಿಯ ಕೃಷಿಕ – ಟಿ. ಲೋಕೇಶ್ ಆಚಾರ್ಯ