Advertisement

ಟೆಸ್ಟ್‌: ಕಿವೀಸ್‌ ವಿರುದ್ಧ ವಿಂಡೀಸಿಗೆ ಹಿನ್ನಡೆ ಭೀತಿ

07:30 AM Dec 11, 2017 | Team Udayavani |

ಹ್ಯಾಮಿಲ್ಟನ್‌: ಹ್ಯಾಮಿಲ್ಟನ್‌ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಭಾರೀ ಹಿನ್ನಡೆಯ ಭೀತಿಗೆ ಸಿಲುಕಿದೆ. ದ್ವಿತೀಯ ದಿನದಾಟದಲ್ಲಿ ನ್ಯೂಜಿಲೆಂಡಿನ ಬೌಲರ್‌ಗಳು ಸಂಪೂರ್ಣ ಹಿಡಿತ ಸಾಧಿಸಿದ್ದಾರೆ. 

Advertisement

ಮೊದಲ ದಿನ 7ಕ್ಕೆ 286 ರನ್‌ ಮಾಡಿದ ನ್ಯೂಜಿಲೆಂಡ್‌, ಬ್ಯಾಟಿಂಗ್‌ ಮುಂದುವರಿಸಿ 373ರ ತನಕ ಬೆಳೆಯಿತು. ಜವಾಬಿತ್ತ ವೆಸ್ಟ್‌ ಇಂಡೀಸ್‌ 215 ರನ್ನಿಗೆ 8 ವಿಕೆಟ್‌ ಉರುಳಿಸಿಕೊಂಡು ತೀವ್ರ ಸಂಕಟಕ್ಕೆ ಸಿಲುಕಿದೆ. ಇನ್ನೂ 158 ರನ್ನುಗಳ ಹಿನ್ನಡೆಯಲ್ಲಿದೆ. ನ್ಯೂಜಿಲೆಂಡಿನ ಬೌಲರ್‌ಗಳಾದ ಸೌದಿ, ಬೌಲ್ಟ್, ಗ್ರ್ಯಾಂಡ್‌ಹೋಮ್‌ ಮತ್ತು ವ್ಯಾಗ್ನರ್‌ ತಲಾ 2 ವಿಕೆಟ್‌ ಕಿತ್ತು ಕೆರಿಬಿಯನ್ನರ ಸಂಕಟವನ್ನು ಬಿಗಡಾಯಿಸುವಂತೆ ಮಾಡಿದರು. ಆರಂಭಕಾರ ಕ್ರೆಗ್‌ ಬ್ರಾತ್‌ವೇಟ್‌ ಕಪ್ತಾನನ ಆಟದ ಮೂಲಕ 66 ರನ್‌ ಬಾರಿಸಿದ್ದು ವಿಂಡೀಸ್‌ ಸರದಿಯ ಗಮನಾರ್ಹ ಸಾಧನೆ. ಕೀಪರ್‌ ಡೌರಿಚ್‌ 35, ಹೆಟ್‌ಮೈರ್‌ 28 ರನ್‌ ಮಾಡಿದರು. ರೀಫ‌ರ್‌ 22 ರನ್‌ ಗಳಿಸಿ ಆಡುತ್ತಿದ್ದಾರೆ.

ಬೌಲರ್‌ಗಳಾದ ಸೌಥಿ (31) ಮತ್ತು ಬೌಲ್ಟ್ (ಔಟಾಗದೆ 37) ಸೇರಿಕೊಂಡು ನ್ಯೂಜಿಲ್ಯಾಂಡ್‌ ಇನ್ನಿಂಗ್ಸ್‌ ಬೆಳೆಸಿದರು. ಇವರಿಂದ ಅಂತಿಮ ವಿಕೆಟಿಗೆ 61 ರನ್‌ ಹರಿದು ಬಂತು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲ್ಯಾಂಡ್‌-373 (ರಾವಲ್‌ 84, ಗ್ರ್ಯಾಂಡ್‌ಹೋಮ್‌ 58, ವಿಲಿಯಮ್ಸನ್‌ 43, ಗ್ಯಾಬ್ರಿಯಲ್‌ 119ಕ್ಕೆ 4, ರೋಶ್‌ 58ಕ್ಕೆ 3, ಕಮಿನ್ಸ್‌ 57ಕ್ಕೆ 2). ವೆಸ್ಟ್‌ ಇಂಡೀಸ್‌-8 ವಿಕೆಟಿಗೆ 215 (ಬ್ರಾತ್‌ವೇಟ್‌ 66, ಡೌರಿಚ್‌ 35, ಹೆಟ್‌ಮೈರ್‌ 28, ಸೌಥಿ 34ಕ್ಕೆ 2, ಗ್ರ್ಯಾಂಡ್‌ಹೋಮ್‌ 40ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next