ಹಳ್ಳಿ ಮನೆ ಅಂತ ಹೇಳಿದ ಕೂಡ್ಲೇ ನೆನಪಾಗೋದು ಹಳ್ಳಿ… ಆದ್ರೆ ನಾನು ಹೇಳೋಕೆ ಹೊರಟಿರೋ ಹಳ್ಳಿಮನೆ ಬೇರೇನೇ.. ಕೂರ್ಗ್ ಹಳ್ಳಿಮನೆ ರೆಸ್ಟೋರೆಂಟ್ ಒಂದು ಸಲ ನಮಗೆ ಹೈಸ್ಕೂಲ್ ಇರ್ಬೇಕಾದ್ರೆ ಕರ್ನಾಟಕ ದರ್ಶನ ಅನ್ನೋ ವಿಷಯದ ಮೇಲೆ ನಮ್ಮನ್ನು ಕೆಲವು ಜಾಗಗಳಿಗೆ ಕರ್ಕೊಂಡು ಹೋಗಿದ್ರು ಆದ್ರೆ ನನಗೆ ಅದ್ರಲ್ಲಿ ತುಂಬಾ ಇಷ್ಟ ಆಗಿದ್ದ ಜಾಗ ಅಂದ್ರೆ ಮಲೆನಾಡಿನ ಆ ಅಸುಪಾಸಿನ ಪ್ರದೇಶಗಳು ಅದು ಮಳೆಗಾಲದ ಟೈಮ್ ಅಲ್ಲಿ ಹೋಗಿರೋದ್ರಿಂದ ಇನ್ನು ಹೆಚ್ಚಿನ ಅನುಭವಗಳನ್ನು ಬರ್ತಾ ಹೂತ್ತು ತರೋಕೆ ಆಯಿತು. ಅವತ್ತು ಸಂಜೆ 6 ಗಂಟೆ ಆಗ್ತಾ ನಾವೆಲ್ಲ ಮಡಿಕೇರಿಯನ್ನು ತಲುಪಿದೆವು ಆಮೇಲೆ ಅಲ್ಲೇ ರಾತ್ರಿ ವಿಶ್ರಾಂತಿ ಮಾಡಲು ಅಲ್ಲೇ ಇರೋ ಹಳ್ಳಿ ಮನೆ ಅನ್ನೋ ರೆಸ್ಟೋರೆಂಟ್ ಅಲ್ಲಿ ನಿಂತೆವು ದಿನವೆಲ್ಲಾ ಸುತ್ತಾಡಿ ಸುಸ್ತು ಆಗಿ ಏನು ಬೇಡ ಒಂದು ಸಲ ಹೋಗಿ ಮಲಗುವ ಅಂತ ಅನಿಸ್ತಾ ಇತ್ತು ನಂಗು ನನ್ ಫ್ರೆಂಡ್ಸ್ಗು ಆದ್ರೆ ಒಂದ್ಸಲಾ ಅಲ್ಲಿ ತಲುಪಿದ ಮೇಲೆ ನಿದ್ದೆ ಅನ್ನೊದು ಕಣ್ಣ ತುದಿಯರೆಪ್ಪೆಗು ಕೂಡ ಬಂದಿಲ್ಲ ಅಲ್ಲಿನ ಆ ಚುಮು ಚುಮು ಚಳಿಯಲ್ಲಿ ಬೆಳ್ಳಗೆ ಹೊಳೆಯುವ ಚಂದ್ರನ ಅಡಿಯಲ್ಲಿ ಆ ರಾತ್ರಿ ಹೇಗೆ ಇತ್ತು ಅಂತ ಹೇಳೋಕೆ ಪದಗಳೇ ಇಲ್ಲದಂತೆ ಆಗಿದೆ.
ರಾತ್ರಿ ಅದಂತೆ ಎಲ್ಲಾರೂ ಅಲ್ಲೇ ರೆಸ್ಟೋರೆಂಟ್ ಸುತ್ತ ಮುತ್ತ ವಾಕ್ ಮಾಡ್ತಾ ಇದ್ರೂ ಹಾಗೆ ನಾನು ಮತ್ತೆ ನನ್ ಫ್ರಂಡ್ಸ್ ರೆಸ್ಟೋರೆಂಟ್ ಒಂದು ರೌಂಡ್ ಹಾಕೊಂಡು ಅಲ್ಲೇ ಇರೋ ಸಣ್ಣ ಸಣ್ಣ ಹಕ್ಕಿ ಕೀಟ ಗಳ ಸದ್ದನ್ನು ಆನಂದಿಸುತ್ತಾ ಅಲ್ಲೇ ಸ್ವಲ್ಲ ಹೊತ್ತು ಚಂದ್ರನ ಆ ಮಡಿಲಿನಲ್ಲಿ ಮಲೆನಾಡಿನ ಸೊಬಗನ್ನು ಕಣ್ಣು ತುಂಬಿಕೊಂಡೆವು ಆ ತಂಪಿನ ವಾತಾವರಣದ ತಣ್ಣಗಿನ ಗಾಳಿಯ ವರ್ಣಿಸಲು ಪದಗಳೇ ಇಲ್ಲ. ಅಲ್ಲಿನ ಜನ ಅವರ ರೀತಿ ಯಾಕೋ ತುಂಬಾನೆ ಇಷ್ಟ ಆಗೋಯಿತು ನಾನೇನ್ ಅದೇ ಮೊದ್ಲು ಅಲ್ಲ ಮಡಿಕೇರಿಗೆ ಹೋಗಿರೋದು ಆದ್ರೂ ಅವತ್ತು ನನ್ ಫ್ರೆಂಡ್ಸ್ ಜೊತೆ ಹೋಗಿರೋದ್ರಿಂದ ಬೇರೆ ರೀತಿಯ ಅನುಭವ ಸಿಕ್ಕಿತು. ಅಷ್ಟೋತ್ತಿಗೆ ಮೇಡಂ ಬಂದು ಹೇಳಿದ್ರು ಬೇಗ ಮಲಗಿ ಬೆಳಿಗ್ಗೆ ಬೇಗ ಹೊರಡ್ಬೇಕು ಅಂತ ಅವರ ಹೊರಡ್ಬೇಕು ಅನ್ನೋ ಮಾತು ಯಾಕೋ ತುಂಬಾ ನೆ ಕಷ್ಟ ಅನಿಸಿತು ಆದರೂ ಮನಸಿಲ್ಲದ ಮನಸಿಂದ ಬೆಳಿಗ್ಗೆ ಬೇಗ ಎದ್ದು ಆ ತಂಪಿನ ತಂಗಾಳಿ ಯಲ್ಲಿ ಸೂರ್ಯನ ಆ ಚಂದದ ಹೊಂಗಿರಣಗಳ ಕಂಡು ಅಲ್ಲಿಂದ ನಮ್ಮ ಪಯಣ ಮುಂದುವರಿಯಿತು.
– ಮುಕ್ತಿವರ್ಧನಾ ಪತ್ರಿಕೋಧ್ಯಮ ವಿಭಾಗ ಎಂ.ಪಿ.ಎಂ ಕಾಲೇಜು ಕಾರ್ಕಳ