Advertisement
ಇಲ್ಲಿನ ಹಳೆಯಂಗಡಿ ಮಹಿಳಾ ಮತ್ತು ಯುವತಿ ಮಂಡಲದ ಸಭಾಂಗಣದ ಬಳಿಯೇ ಈ ರೀತಿಯಾಗಿ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗಿದೆ. ದ್ವಿಚಕ್ರ ವಾಹನ ಸವಾರರು ಕದಿಕೆ, ಸಂತೆಕಟ್ಟೆ ಪ್ರದೇಶಕ್ಕೆ ಸಂಚರಿಸುವವರು ಹಳೆಯಂಗಡಿಯಿಂದ ಪಡುಪಣಂಬೂರುಶನೈಶ್ಚರ ಮಂದಿರದ ರಸ್ತೆಯಾಗಿ ಸುತ್ತಿ ಬಳಸಿ ಸಂಚರಿಸುತ್ತಿದ್ದಾರೆ.
ಇಲ್ಲಿನ ತೋಕೂರು ಕಲ್ಲಾಪು ರಸ್ತೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಅಡಚಣೆಯಾಗಿದ್ದ ಮಣ್ಣನ್ನು ಗ್ರಾಮ ಹಳೆಯಂಗಡಿಯ ಸಂತೆಕಟ್ಟೆ-ಕದಿಕೆ ರಸ್ತೆಯಲ್ಲಿ ನಿಂತಿರುವ ಮಳೆ ನೀರು. ರಸ್ತೆಯಲ್ಲಿದ್ದ ಮಣ್ಣನ್ನು ತೆಗೆಯುತ್ತಿರುವ ಗ್ರಾ.ಪಂ. ಸದಸ್ಯೆ ಕುಸುಮಾ. ಪಂಚಾಯತ್‌ನ ಸದಸ್ಯೆಯೊಬ್ಬರು ಸ್ವತಹ ತೆರವು ಮಾಡಿದರು. ಪಡುಪಣಂಬೂರು ಗ್ರಾ.ಪಂ.ಗೆ ಸೇರುವ ಈ ರಸ್ತೆಯಲ್ಲಿ ಮಳೆ ನೀರು ನೇರವಾಗಿ ಚರಂಡಿಗೆ ಹರಿಯಲು ಸಾಧ್ಯವಾಗದೇ ಇರುವುದಕ್ಕೆ ಡಾಮರು ರಸ್ತೆ ಮೇಲಿನ ಮಣ್ಣು ಕಾರಣವಾಗಿತ್ತು. ಅದು ಖಾಸಗಿ ಜಮೀನಿನಿಂದ ನೇರವಾಗಿ ರಸ್ತೆಗೆ ಮಳೆ ನೀರಿನೊಂದಿಗೆ ಹರಿಯುತ್ತಿದ್ದರಿಂದ ಅದನ್ನು ತೆಗೆಯಲು ಸಂಬಂಧಿಸಿದವರಿಗೆ ಗ್ರಾಮ ಪಂಚಾಯತ್ ಸದಸ್ಯರಾದ ಕುಸುಮಾ ಚಂದ್ರಶೇಖರ್ ಅವರು ಸೂಚಿಸಿದರೂ ಕಿವಿಗೊಡದಿದ್ದರಿಂದ ನೇರವಾಗಿ ತಾವೇ ಹಾರೆ ಮತ್ತು ಗುದ್ದಲಿಯನ್ನು ತಂದು ಸುಮಾರು ಎರಡು ತಾಸು ಶ್ರಮ ವಹಿಸಿ ರಸ್ತೆ ಮೇಲಿದ್ದ ಮಣ್ಣನ್ನೆಲ್ಲಾ ತೆಗೆದು ಮಳೆ ನೀರು ಚರಂಡಿಗೆ ಸರಾಗವಾಗಿ ಹರಿಯಲು ಅನುವು ಮಾಡಿಕೊಟ್ಟರು.
Related Articles
ರಸ್ತೆಯ ಮೇಲೆ ಮಣ್ಣು ಬಿದ್ದು ಮಳೆ ನೀರಿನೊಂದಿಗೆ ಡಾಮರು ಸಹ ಕಿತ್ತು ಹೋಗುವ ಪರಿಸ್ಥಿತಿ ಇತ್ತು. ಕೆಲವರಲ್ಲಿ ವಿನಂತಿಸಿದೆ ಯಾರೂ ಸ್ಪಂದಿಸಲಿಲ್ಲ. ಎಲ್ಲವನ್ನೂ ಪಂಚಾಯತ್‌ನವರೇ ಮಾಡಬೇಕು ಎಂದು ಹೇಳುತ್ತಾರೆ. ಅದಕ್ಕೆ ಜನಪ್ರತಿನಿಧಿಯಾದ ನನ್ನ ಜವಾಬ್ದಾರಿ ಎಂದು ನಾನೇ ಮಣ್ಣನ್ನು ತೆರವು ಮಾಡಿದೆ.
– ಕುಸುಮಾ, ಗ್ರಾಮ ಪಂಚಾಯತ್ ಸದಸ್ಯೆ,
ಪಡುಪಣಂಬೂರು
Advertisement