Advertisement
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಸದಸ್ಯರು, ಈ ಬಗ್ಗೆ ಕಳೆದ ಕೆಲವು ಸಭೆಗಳಲ್ಲಿ ಪ್ರಸ್ತಾವವಾಗಿದೆ. ಕೆಲವು ಇಲಾಖೆಗಳಲ್ಲಿ ಸಿಬಂದಿ ಕೊರತೆಯ ನೆಪ ಹಾಗೂ ಒಂದೇ ದಿನದಲ್ಲಿ ಹಲವು ಕಡೆಗಳಲ್ಲಿ ಗ್ರಾಮ ಸಭೆ ನಡೆಯುತ್ತದೆ ಎಂಬ ಸಿದ್ಧ ಉತ್ತರ ಸಿಗುತ್ತದೆ ಎಂದರು.
ಎಪಿಎಲ್‌ನಿಂದ ಬಿಪಿಎಲ್ ಪಡಿತರ ಚೀಟಿಗೆ ವರ್ಗಾಯಿಸುವಲ್ಲಿ ತೊಡಕಾಗಿದೆ. ಸರಕಾರದ ನಿರ್ದೇಶನದಂತೆ ಪಡಿತರ ಚೀಟಿ ವಿತರಿಸಲಾಗುತ್ತಿದೆ. ಹೊಸ ಆದೇಶ ಬರುವವರೆಗೆ ತಿದ್ದುಪಡಿ ವ್ಯವಸ್ಥೆ ನಡೆದಿಲ್ಲ. ಹೊಸ ಪಡಿತರ ಚೀಟಿ ಪಡೆಯಲು ಸೂಕ್ತ ಮಾನದಂಡ ನೀಡಲಾಗಿದೆ ಎಂದು ಆಹಾರ ಮತ್ತು ಪಡಿತರ ವಿತರಣ ಇಲಾಖೆಯ ಸಹಾಯಕ ನಿರ್ದೇಶಕ ವಾಸು ಶೆಟ್ಟಿ ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದರು. ಉದ್ಧಟತನದ ಆರೋಪ
ಹಳೆಯಂಗಡಿಗೆ ಹೊಸ ಮೆಸ್ಕಾಂ ಶಾಖಾ ಕಚೇರಿ ಆರಂಭವಾಗಿ ವರ್ಷಗಳಾಗಿದ್ದರೂ ಸುಧಾರಣೆ ಇಲ್ಲವಾಗಿದೆ. ಸಿಬಂದಿಯ ಉದ್ಧಟತನಕ್ಕೆ ಕಡಿವಾಣ ಹಾಕಬೇಕು. ಸಂಜೆಯ ಹೊತ್ತಿಗೆ ದೂರು ನೀಡಿದರೆ ಅವರು ಸ್ಪಂದಿಸುವುದಿಲ್ಲ. ವಿದ್ಯುತ್ ಕಡಿತ ಸಂದರ್ಭ ಯಾವುದೇ ಮುನ್ಸೂಚನೆ ನೀಡುವುದಿಲ್ಲ. ಕರೆಂಟ್ ಹೋದರೆ ದೂರನ್ನು ಕೇಳುವವರೇ ಇಲ್ಲ ಎಂಬ ದೂರಿಗೆ ಸ್ಪಂದಿಸಿದ ಮೆಸ್ಕಾಂ ಶಾಖಾಧಿಕಾರಿ ಶ್ರೀನಿವಾಸ ಮೂರ್ತಿ, ಮುಂದಿನ ದಿನಗಳಲ್ಲಿ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದರು.