Advertisement

ಹಾಲಕೆರೆ ಶ್ರೀ ಅಗಲಿಕೆಯಿಂದ ಭಕರ ಮನಸ್ಸು ಭಾರ

06:25 PM Nov 27, 2021 | Team Udayavani |

ಗಜೇಂದ್ರಗಡ: ವೀರಶೈವ ಪರಂಪರೆಯ ಮಠಗಳಿಗೆ ಹಿರಿದಾದ ಇತಿಹಾಸವಿದ್ದು, ಅಂತಹ ಪರಂಪರೆಯಲ್ಲಿ ಆಧ್ಯಾತ್ಮಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಕ್ಕೆ ಪ್ರಸಿದ್ಧರಾಗಿದ್ದ ಹಾಲಕೆರೆ ಸಂಸ್ಥಾನಮಠದ ಡಾ| ಅಭಿನವ ಅನ್ನದಾನ ಮಹಾಸ್ವಾಮಿಗಳ ಅಗಲಿಕೆಯಿಂದ ಭಕ್ತರ ಮನ ಭಾರವಾಗಿದೆ ಎಂದು ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

Advertisement

ತಾಲೂಕಿನ ನರೇಗಲ್ಲ ಹಿರೇಮಠದ ಸಭಾಭವನದಲ್ಲಿ ನಡೆದ ಜಾತ್ರಾ ಮಹೋತ್ಸವ, ಗುರು ಪರಂಪರೆಯ ಸ್ಮರಣೋತ್ಸವ ಹಾಗೂ ಧರ್ಮ ಗ್ರಂಥಗಳ ಅಡ್ಡಪಲ್ಲಕ್ಕಿ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು. ಶರಣ ಪರಂಪರೆಯ ಮಠವೆಂದರೆ ಅದು ಹಾಲಕೆರೆ ಅನ್ನದಾನೇಶ್ವರ ಮಠವಾಗಿದ್ದು, ಲಿಂ| ಡಾ| ಅಭಿನವ ಅನ್ನದಾನ ಗುರುಗಳು ಈ ನಾಡಿನ ಉದ್ದಗಲಕ್ಕೂ ಸಂಚರಿಸಿ ಗುರು ವಿರಕ್ತರಲ್ಲಿ ಸಾಮರಸ್ಯತೆ ಬೆಸೆದು ನಮ್ಮೆಲ್ಲ ಮಠಾಧೀಶರಿಗೆ ಮಾರ್ಗದರ್ಶಕರಾಗಿದ್ದರು. ಅಂತಹ ಮಹಾತ್ಮರು ಮತ್ತೆ ಈ ಭೂಮಿಗೆ ಜನ್ಮತಾಳಿ ಬರಲಿ ಎಂಬುದು ಶ್ರೀಮಠದ ಭಕ್ತರ ಮಹದಾಸೆಯಾಗಿದೆ.

ಅವರಲ್ಲಿ ತಮ್ಮ ನುಡಿಯಲ್ಲಿ ಪ್ರಮುಖವಾಗಿ ಮೂರು ವಿಷಯಗಳನ್ನ ತಮ್ಮೆಲ್ಲರ ಮುಂದೆ ಹೇಳುತ್ತಿರುವದೇನಂದರೆ ಒಂದು ರೈತರ ಬಗೆಗೆ ಅವರಿಗಿದ್ದ ಕಾಳಜಿಯಂದರೆ ರೈತರಿಗಾಗಿ ಕೃಷಿ ಗೋಷ್ಠಿ, ಅನುಭವಿ ಕೃಷಿಕರನ್ನ ಕರೆತಂದು ಸಾವಯವ ಕೃಷಿಗಾಗಿ ಮಾಹಿತಿ ನೀಡುವುದು ಜೊತೆಗೆ ಸಾಧಕ ರೈತರನ್ನ ಗುರುತಿಸಿ ಗೌರವಿಸುವ ಕಾಯಕ ಅವರದಾಗಿತ್ತು. ಅದರಂತೆ ವೀರಶೈವ ಲಿಂಗಾಯತ ಒಳಪಂಗಡಗಳು ಒಂದಾಗುವ ಕುರಿತು ಜಾಗೃತಿ ಮೂಡಿಸುವ ಪ್ರಯತ್ನವನ್ನು ಡಾ| ಅಭಿನವ ಅನ್ನದಾನ ಶ್ರೀಗಳು ಮಾಡುತ್ತಿದ್ದರು.

ವೀರಶೈವ ಲಿಂಗಾಯತ ಧರ್ಮಾಚರಣೆಯಂತೆ ಇಷ್ಟಲಿಂಗ ಪೂಜೆ ಮಾಡುವಂತೆ ಪದೆಪದೆ ತಮ್ಮ ಆಶೀರ್ವಚನದಲ್ಲಿ ಹೇಳುವುದನ್ನು ನಾವುಗಳೆಲ್ಲ ಕೇಳಿದ್ದೇವೆ. ಅದರಂತೆ ಶ್ರೀಗಳ ಮಹದಾಸೆಯಂತೆ ನೀವುಗಳೆಲ್ಲ ನಿಮ್ಮ ಎದೆಯ ಮೇಲೆ ಇಷ್ಟಲಿಂಗ ಧಾರಣೆಯೊಂದಿಗೆ ಪ್ರತಿನಿತ್ಯ ಪೂಜೆ ಸಲ್ಲಿಸಿದಲ್ಲಿ ಆ ಪೂಜೆಯಲ್ಲಿಯೇ ಡಾ| ಅಭಿನವ ಅನ್ನದಾನ ಶ್ರೀಗಳನ್ನು ಕಾಣಿರಿ ಎಂದ ಮಲ್ಲಿಕಾರ್ಜುನ ಶಿವಾಚಾರ್ಯರು ವಿರಕ್ತ ಪರಂಪರೆ ಮಠಗಳಲ್ಲಿ ಶಿದ್ಧಾಂತ ಶಿಖಾಮಣಿ ಗ್ರಂಥದ ಪ್ರವಚನವನ್ನು ತಮ್ಮಿಂದ ಹೇಳಿಸಿ ಗುರು ವಿರಕ್ತರು ಒಂದೇ ಎಂಬ ಭಾವನೆ ಸಮಾಜಕ್ಕೆ ಬಿತ್ತರಿಸಿದ ಕೀರ್ತಿ ಡಾ| ಅಭಿನವ ಅನ್ನದಾನ ಸ್ವಾಮಿಜಿಗೆ ಸಲ್ಲುತ್ತದೆ. ಶ್ರೀಗಳ ಇಂತಹ ಹಲವಾರು ವಿಚಾರಗಳನ್ನು ಮುಂದಿಟ್ಟುಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಿವುಗಳೆಲ್ಲ ಸಾಗೋಣ ಎಂದು ತಿಳಿಸಿದರು.

ನರೇಗಲ್ಲ ಪಪಂ ಮುಖ್ಯಾಧಿಕಾರಿ ಎಚ್‌.ವೈ. ಮಣ್ಣವಟ್ಟರ ಮಾತನಾಡಿ, ಜನಸಾಮಾನ್ಯರು ತಮ್ಮ ಸಂಸಾರದ ಜಂಜಾಟಗಳ ಮಧ್ಯೆ ಸಿಲುಕಿ ಪರದಾಡುತ್ತಿರುವುದು ಇತ್ತೀಚಿನ ದಿನಮಾನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಕೌಟುಂಬಿಕ ಜೀವನದಲ್ಲಿ ಮನಃಶಾಂತಿ ಇಲ್ಲದಂತ ಇಂದಿನ ಸಂದಿಗ್ಧ ದಿನಮಾನಗಳಲ್ಲಿ ಭಕ್ತಾದಿಗಳು ಇಂತಹ ಮಠಗಳಲ್ಲಿ ನಡೆಯುವ ಪುರಾಣ ಪ್ರವಚನಗಳನ್ನು ಆಲಿಸುವುದರಿಂದ ಪ್ರತಿಯೊಬ್ಬರ ಮನಶುದ್ಧಿಗೊಂಡು ಸಂಸ್ಕಾರಯುತ ಜೀವನಕ್ಕೆ ಮುನ್ನುಡಿಯಾಗಲಿದೆ ಎಂದರು.

Advertisement

ಡಾ| ಎಲ್‌.ಎಸ್‌. ಗೌರಿ, ಶಿಕ್ಷಕ ಸುರೇಶ ಹಳ್ಳಿಕೇರಿ, ಕಳಕಪ್ಪ ಹತ್ತಿಕಟಗಿ ಮತ್ತು ಮಠದ ಸೇವೆಯಲ್ಲಿ ಪಾಲ್ಗೊಂಡ ಅದರಗುಂಚಿ ಗ್ರಾಮದ ಕುಸುಗಲ್ಲ ಮನೆತನದ ಭಕ್ತರು ಸೇರಿದಂತೆ 2021ರ ನೀಟ ಪರಿಕ್ಷೆಯಲ್ಲಿ 637 ಅಂಕ ಪಡೆದು ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದ ಚೈತ್ರಾ ಗೌರಿಯನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next