ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಮಂಗಳವಾರ ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ 2023 ಈವೆಂಟ್‌ನಲ್ಲಿ ಪ್ರದರ್ಶಿಸಲಾದ HLFT-42 ವಿಮಾನದ ಮಾದರಿಯಿಂದ ಭಗವಾನ್ ಹನುಮಾನ್ ಚಿತ್ರವನ್ನು ತೆಗೆದು ಹಾಕಿದೆ.
ಹಿಂದೂಸ್ತಾನ್ ಲೀಡ್ ಇನ್ ಫೈಟರ್ ಟ್ರೈನರ್ (HLFT-42) ನ ಸ್ಕೇಲ್ ಮಾಡೆಲ್ ಅನ್ನು ಎಚ್ಎಲ್ ಸೋಮವಾರ ಅನಾವರಣಗೊಳಿಸಿತ್ತು. ಇದರ ಲಂಬವಾದ ರೆಕ್ಕೆಯ ಮೇಲೆ ಭಗವಾನ್ ಹನುಮಂತನ ಫೋಟೋವನ್ನು ಹಾಕಲಾಗಿತ್ತು. ಆದರೆ ಈ ಚಿತ್ರವನ್ನು ತೆಗೆಯಲಾಗಿದೆ.
HLFT-42 ವಿಮಾನವು ಮೊದಲ ಸ್ವದೇಶಿ ವಿಮಾನವಾದ ಎಚ್ಎಎಲ್ ಮಾರುತ್ ನ ಉತ್ತರಾಧಿಕಾರಿಯಾಗಿದೆ. ಮಾರುತ್ ಎಂಬುದು ಗಾಳಿಯ ಇನ್ನೊಂದು ಹೆಸರು, ಅಥವಾ ಹಿಂದಿಯಲ್ಲಿ ಇದನ್ನು ‘ಪವನ್’ ಎಂದು ಕರೆಯಲಾಗುತ್ತದೆ. ಪುರಾಣದಲ್ಲಿ ಇದು ಭಗವಾನ್ ಹನುಮಾನ್ ಗೆ ಸಂಬಂಧಿಸಿದ ಕಾರಣ ಹನುಂತನ ಚಿತ್ರವನ್ನು ಮಾದರಿ ವಿಮಾನದಲ್ಲಿ ಪ್ರದರ್ಶಿಸಲಾಗಿತ್ತು.
HLFT-42 ಮುಂದಿನ ಜನರೇಶನ್ ನ ಸೂಪರ್ಸಾನಿಕ್ ಟ್ರೇನರ್ ಆಗಿದ್ದು, ಆಧುನಿಕ ಯುದ್ಧ ವಿಮಾನ ತರಬೇತಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.