Advertisement
ಘಟನೆ 1ಕಪ್ಪು ಗರುಡ ಅಥವಾ ಕಾಮನ್ ಪರಯ್ಹ ಕೈಟ್ ಎಂಬ ಹಕ್ಕಿಯ ಬಗ್ಗೆ ಲೇಖಕರು ವಿಶ್ಲೇಷಣೆಯನ್ನು ಹೀಗೆ ನೀಡುತ್ತಾರೆ. ಊರ ಕೋಳಿಹುಂಜದಷ್ಟು ದೊಡ್ಡದಾದ ಕಪ್ಪು, ಕೆಂಪು ಬಣ್ಣದ ಹದ್ದು. ಹಾರುತ್ತ ಕತ್ತರಿಯಂತೆ ಕಾಣುವ ಬಾಲದ ತುದಿಯಿಂದ ಇದನ್ನು ಪ್ರತ್ಯೇಕಿಸಿ ಗುರುತಿಸಬಹುದು. ಗಂಡು ಹೆಣ್ಣು ಹಕ್ಕಿಗಳಲ್ಲಿ ವ್ಯತ್ಯಾಸವಿಲ್ಲ. ಖಂಡಾಂತರ ವಲಸೆ ಹೋಗದಿದ್ದರೂ ಸ್ಥಳೀಯವಾಗಿ ವಲಸೆ ಹೋಗುತ್ತದೆ.
ಕೋಗಿಲೆ ಚಾಣ ಪಾರಿವಾಳ ಗಾತ್ರದ ಹಕ್ಕಿ. ಮೈಯೆಲ್ಲ ಕಪ್ಪು ಹಸುರು ಇಲ್ಲವೇ ದಟ್ಟ ಬೂದು ಬಣ್ಣ. ಅಗಲವಾದ ಕಪ್ಪು ಮತ್ತು ಬಿಳಿ ಚುಕ್ಕೆಗಳಿರುವ ಬಾಲ. ಹೆಣ್ಣು ಗಂಡುಗಳೆರಡೂ ಒಂದೇ ರೀತಿ ಇರುತ್ತವೆ. ಹಾರುವ ರೀತಿಯಲ್ಲೂ ಹಾವಭಾವದಲ್ಲೂ ಮಾಂಸಹಾರಿ ಹಕ್ಕಿಯಾದ ಚಾಣವನ್ನು ಹೋಲುವುದರಿಂದ ಇದಕ್ಕೆ ಕೋಗಿಲೆ ಚಾಣವೆಂದು ಹೆಸರು. ಘಟನೆ 3
ಅರಿಸಿನ ಬುರುಡೆ ಅಥವಾ ಗೋಲ್ಡನ್ ಓರಿಯೋಲ್ ಮಯನಾ ಹಕ್ಕಿ ಗಾತ್ರದ ಹೊಳೆಯುವ ಹೊಂಬಣ್ಣದ ಹಕ್ಕಿ. ರೆಕ್ಕೆ ಮತ್ತು ಪುಕ್ಕ ಕಪ್ಪು ಬಣ್ಣ. ಕಣ್ಣಗಳು ದಾಳಿಂಬೆ ಕೆಂಪು. ಹಳದಿ ತಲೆಯ ಮೇಲೆ ಎದ್ದು ಕಾಣುವ ಕಪ್ಪು ಹುಬ್ಬಿದೆ. ಹೆಣ್ಣು ಹಕ್ಕಿಗೆ ಕೊಂಚ ಹಸುರು ಮಿಶ್ರಿತ ಹಳದಿ ಬಣ್ಣ. ಭಾರತ, ಪಾಕಿಸ್ತಾನ, ಅಪೂರ್ವವಾಗಿ ಸಿಲೋನ್‌ನಲ್ಲಿ ಈ ಹಕ್ಕಿಗಳು ಕಾಣ ಸಿಗುತ್ತವೆ. ಯುರೋಪಿನ ಈ ಹಕ್ಕಿಗೆ ಭಾರತದ ಹಕ್ಕಿಯಂತೆ ಕಣ್ಣಿನ ಮೇಲೆ ಕಪ್ಪು ಹುಬ್ಬು ಇಲ್ಲ. ಒಟ್ಟಿನಲ್ಲಿ ಪಕ್ಷಿಗಳ ಬಗ್ಗೆ ಮಾತ್ರವಲ್ಲ ಅವುಗಳ ಜೀವನ ವಿಧಾನದ ವಿವರಣೆಯೂ ಇದರಲ್ಲಿದ್ದು, ಅತ್ಯಮೂಲ್ಯದ ಮಾಹಿತಿಯನ್ನು ಒಳಗೊಂಡಿರುವ ಸಂಗ್ರಹ ಯೋಗ್ಯ ಕೃತಿ ಇದಾಗಿದೆ.
Related Articles
Advertisement