ಪೋರ್ಟ್ ಒ ಪ್ರಿನ್ಸ್: ಹೈಟಿ ದೇಶದ ಅಧ್ಯಕ್ಷ ಜೊವೆನೆಲ್ ಮೊಯಿಸ್ ಅವರನ್ನು ನಿವಾಸದಲ್ಲಿಯೇ ಅಪರಿಚಿತ ಜನರ ಗುಂಪು ಹಲ್ಲೆ ನಡೆಸಿ ಹತ್ಯೆಗೈದಿರುವುದಾಗಿ ದೇಶದ ಮಧ್ಯಂತರ ಪ್ರಧಾನಿ ಬುಧವಾರ(ಜುಲೈ 07) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಜಸ್ಟೀಸ್ ವಿರುದ್ಧ ಆರೋಪ: ಮಮತಾ ಬ್ಯಾನರ್ಜಿಗೆ 5 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್
ಘಟನೆಯಲ್ಲಿ ಮೊಯಿಸ್ ಪತ್ನಿ ಮಾರ್ಟಿನ್ ಮೊಯಿಸ್ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಧ್ಯಂತರ ಪ್ರಧಾನಿ ಕ್ಲೌಡ್ ಜೋಸೆಫ್ ಮಾಹಿತಿ ನೀಡಿದ್ದಾರೆ.
ಕೆರೆಬಿಯನ್ ದೇಶದಲ್ಲಿನ ರಾಜಕೀಯ ಅಸ್ಥಿರತೆ, ಹಣಕಾಸು ಮುಗ್ಗಟ್ಟಿನ ನಡುವೆಯೇ ಅಧ್ಯಕ್ಷರ ಹತ್ಯೆ ನಡೆದಿದೆ. ಇದೊಂದು ಅಮಾನವೀಯ ಮತ್ತು ಪೈಶಾಚಿಕ ಕೃತ್ಯವಾಗಿದೆ ಎಂದು ಮಧ್ಯಂತರ ಪ್ರಧಾನಿ ಜೋಸೆಫ್ ತಿಳಿಸಿದ್ದಾರೆ.
ದೇಶದ ರಕ್ಷಣೆಗೆ ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಜೋಸೆಫ್ ತಿಳಿಸಿದ್ದಾರೆ. 2017ರಿಂದ ಮೊಯಿಸ್ ಅವರು ಹೈಟಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಚುನಾವಣೆಯನ್ನು ನಡೆಸಲು ಅವರು ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ.
2021ರ ಫೆಬ್ರುವರಿಯಲ್ಲಿಯೇ ಮೊಯಿಸ್ ಅವರ ಅಧಿಕಾರಾವಧಿ ಅಂತ್ಯಗೊಂಡಿದ್ದು, ಈ ನಿಟ್ಟಿನಲ್ಲಿ ಕೂಡಲೇ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕು ಎಂದು ವಿಪಕ್ಷ ನಾಯಕರು ಆಗ್ರಹಿಸಿದ್ದರು.