ಕಲಬುರಗಿ: ಕಾಲಮಿತಿಯ ಕ್ರಿಯಾ ಯೋಜನೆಯೊಂದನ್ನು ರೂಪಿಸಿ ಹೈ.ಕ.ಭಾಗದ ಸಮಗ್ರ ಅಭಿವೃದ್ದಿ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಹೈ.ಕ.ಜನಪರ ಹೋರಾಟ ಸಮಿತಿ ನಿರ್ಣಯ ಕೈಗೊಂಡಿದೆ ಎಂದು ಸಮಿತಿ ಅಧ್ಯಕ್ಷ ಲಕ್ಷಣ ದಸ್ತಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ನೀರಾವರಿ, ಕೈಗಾರಿಕೆ, ಶಿಕ್ಷಣ, ರಸ್ತೆ, ಸಾರಿಗೆ, ವಾಣಿಜ್ಯ, ವೈದ್ಯಕೀಯ, ಕ್ರೀಡಾ, ಸಾಹಿತ್ಯ ಸೇರಿದಂತೆ ಸಮಗ್ರ ಅಭಿವೃದ್ದಿಗೆ ಸರ್ಕಾರ ವೈಜ್ಞಾನಿಕ ಕ್ರಿಯಾ ಯೋಜನೆ ರೂಪಿಸುವಂತೆ ಒತ್ತಾಯಿಸಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು ಎಂದು ಹೇಳಿದರು.
371(ಜೆ) ಕಲಂ ತಿದ್ದುಪಡಿಯ ವಿಶೇಷ ಸ್ಥಾನಮಾನದ ಪರಿಣಾಮಕಾರಿ ಅನುಷ್ಠಾನಕ್ಕೆ ತಕ್ಷಣ ಕ್ರಮ ಕೈಗೊಂಡು ಇದರ ಫಲ ಹಳ್ಳಿಯಿಂದ ವಿಭಾಗೀಯ ಕೇಂದ್ರದವರೆಗೆ ಮುಟ್ಟುವಂತೆ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದೆ. ವಿಶೇಷ ಸ್ಥಾನಮಾನದ ಅನುಷ್ಠಾನಕ್ಕೆ ಸಮಾಜದ ಎಲ್ಲ ಕೇತ್ರದ ಮುಖಂಡರೊಂದಿಗೆ ಸಮಾಲೋಚಿಸಿ ಹೈ.ಕ.ಪ್ರದೇಶದಲ್ಲಿ ಸಂಘಟಿತ ಹೋರಾಟ ನಡೆಸಲು ನಿರ್ಧರಿಸಲಾಗಿದೆ.
ಕಲಬುರಗಿ ನಗರ ಸೇರಿದಂತೆ ಹೈ.ಕ.ಭಾಗದ 6 ಜಿಲ್ಲೆಗಳಲ್ಲಿ ಸರ್ಕಾರದ ಮಟ್ಟದಲ್ಲಿ ಕೆಲಸಗಳು ಸಕಾಲದಲ್ಲಿ ಆಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಧರ್ಮಾತೀತ, ಜಾತ್ಯತೀತ, ಪûಾತೀತ, ವರ್ಗಾತೀತ ಹಾಗೂ ಶುದ್ಧ ರಾಜಕೀಯೇತರ ತಳಹದಿ ಮೇಲೆ ಹೋರಾಟ ನಡೆಸಲು ಸಮಿತಿಯ ಪ್ರದೇಶ ಮಟ್ಟದ ಜಿಲ್ಲಾವಾರು,
ತಾಲೂಕುವಾರು, ಮಹಾನಗರ ಮಟ್ಟದ, ವಾಡ್ ìವಾರು ಘಟಕ ರಚಿಸಿ ತಕ್ಷಣ ಅಸ್ತಿತ್ವಕ್ಕೆ ತರಲು ಸಂಸ್ಥಾಪಕ ಅಧ್ಯಕ್ಷರಿಗೆ ಸರ್ವಾನುಮತದಿಂದ ಸಭೆಯಲ್ಲಿ ಅಧಿಕಾರ ನೀಡಲಾಯಿತು ಹಾಗೂ ಏಪ್ರಿಲ್ ಮೊದಲ ವಾರದಿಂದ ಹೋರಾಟ ಆರಂಭಿಸಲು ನಿರ್ಣಯಿಸಲಾಯಿತು. ರಾಹುಲ ಹೂನ್ನಳ್ಳಿ, ಸಿದ್ದಪ್ಪ ಅರಳಿ, ಶಿವಲಿಂಗಪ್ಪ ಭಂಡಕ, ಮನೀಷ ಜಾಜು,
ಡಾ.ಮಾಜೀದ ದಾಗೆ, ಶಾಂತಪ್ಪ ಕಾರಭಾಸಗಿ, ವೀರೇಶ ಪುರಾಣಿಕ, ನಿಂಗಣ್ಣ ಉದನೂರ, ಮಲ್ಲಿಕಾರ್ಜುನ ಭೂಸನೂರ, ಅಶೋಕ ಜಾಧವ, ಅಸ್ಲಮ ಖಾನ್, ಮಿರಾಜುದ್ದೀನ್, ಜ್ಞಾನ ಮಿತ್ರ, ಸಾಲೋಮನ್ ದಿವಾಕರ, ಗೋಪಾಲರಾವ ಜಾಧವ, ಮಡಿವಾಳಪ್ಪ, ಅಣ್ಣಾರಾವ ಹೆಬ್ಟಾಳ, ಮಲ್ಲಿನಾಥ ದೇಶಮುಖ, ದತ್ತು ಚವ್ಹಾಣ,
ಚಾಂದ ಅಕºರ, ಬಸವರಾಜ ಚಿಗುಂಡಿ, ಬಿ.ಪಿ. ಪಾಟೀಲ, ವಿಶಾಲದೇವ, ಆನಂದ ಚವ್ಹಾಣ, ಧರಮಸಿಂಗ್ ತಿವಾರಿ, ಸಂತೊಷ ಭೈರಾಮಡಗಿ, ಬಸವರಾಜ ಅನವಾರ, ಹೀರಾ ಹೇಮಂತ ರಾಠೊಡ, ಮಾರುತಿ ಪಾಟೀಲ, ಆಕಾಶ ರಾಠೊಡ, ಗಿರೀಶ ಚಕ್ರ, ಕಿರಣ ಪವಾರ, ಶ್ರೀಧರ ಚವ್ಹಾಣ, ಚಂದು ಪವಾರ, ನಿಶಾನ ಚವ್ಹಾಣ, ವಿಕಾಸ ಚವ್ಹಾಣ, ಕೈಲಾಸ ರಾಠೊಡ, ಸಂದೀಪ ಪಾಟೀಲ ಇದ್ದರು.