Advertisement

ಉಗ್ರ ಹಫೀಜ್‌ ಸಂಘಟನೆಗೆ ಹೊಸ ಹೆಸರು!

03:45 AM Feb 05, 2017 | Team Udayavani |

ಇಸ್ಲಾಮಾಬಾದ್‌: ಉಗ್ರ ಸಂಘಟನೆ ಜಮಾತ್‌ ಉದ್‌-ದಾವಾ ಮುಖ್ಯಸ್ಥ ಹಫೀಜ್‌ ಸಯೀದ್‌ನನ್ನು ಗೃಹ ಬಂಧನದಲ್ಲಿಡಲಾಗಿದೆ. ಜತೆಗೆ ಸಂಘಟನೆ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಆದರೆ ಅದು  “ತೆಹ್ರಿಕ್‌- ಇ ಆಜಾದಿ ಜಮ್ಮು ಕಾಶ್ಮೀರ’ ಎಂಬ ಹೊಸ ಹೆಸರಿನಲ್ಲಿ ಪ್ರತ್ಯಕ್ಷವಾಗಿದೆ. 

Advertisement

ಜಮ್ಮು ಮತ್ತು ಕಾಶ್ಮೀರಕ್ಕೆ ಸ್ವಾತಂತ್ರÂ ಕೊಡಿಸಲೇಬೇಕು ಎಂಬ ಪಣದೊಂದಿಗೆ ಭಾನುವಾರ ಪಾಕಿಸ್ತಾನದಾದ್ಯಂತ ಬೃಹತ್‌ ಕಾಶ್ಮೀರ ಸ್ವಾತಂತ್ರ್ಯ ಚಳವಳಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಸಂಘಟನೆಯಲ್ಲಿ 20 ಧಾರ್ಮಿಕ ಸಂಸ್ಥೆಗಳು ಸೇರಿಕೊಂಡಿವೆ.

ಈ ಉದ್ದೇಶಕ್ಕಾಗಿ ನೆರೆಯ ರಾಷ್ಟ್ರದ ಉದ್ದಗಲಕ್ಕೂ ಸಭೆ , ಸಮಾವೇಶ ಮತ್ತು ಪ್ರತಿಭಟನಾ ರ್ಯಾಲಿ ಕಾರ್ಯಕ್ರಮ  ನಡೆಯಲಿದೆ.  ನಾಸಿರ್‌ಬಾಗ್‌ ಮತ್ತು ಲಾಹೋರ್‌ನಲ್ಲಿ ಸಮಾವೇಶ ನಡೆಸಲಾಗುತ್ತದೆ. ಇಸ್ಲಾಮಾಬಾದ್‌, ಮುಜಫ‌ರಬಾದ್‌, ಮೀರ್‌ಪುರ್‌ಗಳಲ್ಲಿ ಬೃಹತ್‌ ರ್ಯಾಲಿ ಮಾಡುವುದಾಗಿಯೂ ಸಂಘಟನೆ ಹೇಳಿಕೊಂಡಿದೆ. ಈ ರ್ಯಾಲಿಯಲ್ಲಿ ವಿದ್ವಾಂಸರು , ವರ್ತಕರು, ವಕೀಲರು ರಾಜಕಿಯ ಪಕ್ಷಗಳ ಸದ್ಯರು ಮತ್ತು ಎಲ್ಲ ಸ್ತರದ ವ್ಯಕ್ತಿಗಳು ಭಾಗವಹಿಸಲಿದ್ದಾರೆಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next