Advertisement

ನಿಟ್ಟೆ ಕಾಲೇಜಿನಲ್ಲಿ ‘ಹ್ಯಾಕಥಾನ್’ ಕೋಡಿಂಗ್ ಸ್ಪರ್ಧೆ

05:34 PM Sep 20, 2018 | Team Udayavani |

ಕಂಪ್ಯೂಟರ್ ಪ್ರೋಗ್ರಾಮಿಂಗ್ ಬರೆಯುವವರಿಗಾಗಿ ಹಾಗೂ ಕೋಡಿಂಗ್ ನಲ್ಲಿ ಪರಿಣಿತರಿಗಾಗಿ ನಿಟ್ಟೆ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ‘ಹ್ಯಾಕಥಾನ್ – 2ಕೆ18’ ಎಂಬ ವಿಶೇಷ ಕಾರ್ಯಾಗಾರವನ್ನು ನಿಟ್ಟೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರದಲ್ಲಿ ಭಾಗವಹಿಸಲು ನೀವು ಮೊದಲಿಗೆ ನಿಮ್ಮ ಹೆಸರನ್ನು ಗೂಗಲ್ ಫಾರ್ಮ್ ತುಂಬುವುದರ ಮೂಲಕ ನೋಂದಾಯಿಸಿಕೊಳ್ಳಬೇಕು. ಇದಾದ ಬಳಿಕ ಸೆಪ್ಟಂಬರ್ 22 ಮತ್ತು 23ರಂದು 40 ನಿಮಿಷಗಳ Online ಪರೀಕ್ಷೆಯೊಂದನ್ನು ಬರೆಯಬೇಕಾಗಿರುತ್ತದೆ. ಈ ಪರೀಕ್ಷೆಯ ಮೂಲಕ ಆಯ್ಕೆಗೊಳ್ಳುವ 51 ಸ್ಪರ್ಧಿಗಳು ಮುಂದಿನ ಹಂತಕ್ಕೆ ಪ್ರವೇಶವನ್ನು ಪಡೆದುಕೊಳ್ಳುತ್ತಾರೆ.

Advertisement

ಹೀಗೆ ಆಯ್ಕೆಗೊಳ್ಳುವ 51 ಸ್ಪರ್ಧಿಗಳು 100 ರೂಪಾಯಿಗಳ ನೋಂದಾವಣೆ ಶುಲ್ಕವನ್ನು ನೀಡಿ ಸೆಪ್ಟಂಬರ್ 29ರಂದು ನಡೆಯಲಿರುವ ‘ಹ್ಯಾಕಥಾನ್ – 2ಕೆ18’ ಕಾರ್ಯಾಗಾರದಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದುಕೊಳ್ಳಲಿದ್ದಾರೆ. ಇಲ್ಲಿ ವಿಜೇತರಾಗುವ ಭಾಗೀದಾರರಿಗೆ 10,000 ರೂಪಾಯಿಗಳ ನಗದು ಬಹುಮಾನವಿರುತ್ತದೆ. ಮತ್ತು ಮೊದಲ ಹತ್ತು ವಿಜೇತರಿಗೆ ಆಕರ್ಷಕ ಬಹುಮಾನಗಳೂ ಕಾದಿವೆ.

ಈ ಕಾರ್ಯಾಗಾರದ ಕುರಿತಾದ ಹೆಚ್ಚಿನ ಮಾಹಿತಿಗಾಗಿ ರಜತ್ ಭಟ್ (+919902482348) rajathrbhat15@gmail.com, ಹರ್ಷಿತ್ ಎಸ್. ಕೆ. (+918197287939) skharshith@gmail.com, ಅಲ್ತಾಫ್ ಶೇಖ್ (+918147299298) alfafs156@gmail.com ಅವರನ್ನು ಮೂಲಕ ಸಂಪರ್ಕಿಸಬಹುದಾಗಿರುತ್ತದೆ. ಈ ವಿಶೇಷ ಕಾರ್ಯಾಗಾರವನ್ನು IoT ಕ್ಲಬ್ CFSI ಆಶ್ರಯದಲ್ಲಿ NAIN (ಕರ್ನಾಟಕ ಸರಕಾರದ ಐಟಿ, ಬಿಟಿ, ಮತ್ತು ಎಸ್ ಆ್ಯಂಡ್ ಟಿ.ಯ ಒಂದು ಸಹಸಂಸ್ಥೆ) ಇದರ ಸಹಯೋಗದೊಂದಿಗೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next