Advertisement
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಫೀವರ್ ಕ್ಲೀನಿಕ್ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ್ದ ಎಂ.ಎಲ್.ಸಿ.ವಿಶ್ವನಾಥ್ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿ ಮಾತನಾಡಿ, ಕೊವಿಡ್ ಮಹಾಮಾರಿ ಎಲ್ಲೆಡೆ ಆವರಿಸಿರುವ ಸಂದರ್ಭದಲ್ಲಿ ದಾನಿಗಳು, ಸ್ನೇಹಿತರನ್ನು ಕೇಳಿದರೆ ಕೊಡುವವರಿದ್ದಾರೆ, ಆದರೆ ಯಾರೋ ಕೊಟ್ಟಿದ್ದನ್ನು ನಾನೆ ಕೊಟ್ಟೆ ಎನ್ನುವುದು ತರವಲ್ಲ. ಕಾರ್ಯಕರ್ತರು ನಮ್ಮ ಲೀಡರ್ ಕೊಟ್ಟಿದ್ದಾರೆಂದು ಬಿಂಬಿಸುವುದೂ ಸರಿಯಲ್ಲ. ಈ ವೇಳೆಯಲ್ಲಿ ಎಲ್ಲವನ್ನೂ ಮರೆಯಬೇಕು, ರಾಜಕಾರಣಿಗಳು, ಅಧಿಕಾರಿಗಳು, ಪೊಲೀಸ್ ಒಂದಾಗಿ ಸಂಕಷ್ಟಕ್ಕೊಳಗಾದವರ ನೆರವಿಗೆ ನಿಲ್ಲಬೇಕೆಂದು ಮನವಿ ಮಾಡಿದ್ದಾರೆ.
Related Articles
Advertisement
ದೆಹಲಿಯಲ್ಲಿ ಸಂದೇಶ್ ಫಾರ್ಮಿಕಲ್ಸ್ ಹೊಂದಿರುವ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದ ಸಂದೇಶ್, ತಾಲೂಕಿನ ಕೋವಿಡ್ ಸೋಂಕಿನಿಂದ ಹೋಂ ಐಸ್ಯೂಲೇಷನ್ ಗೊಳಗಾದವರಿಗಾಗಿ 250 ಜೀವರಕ್ಷಕ ಔಷಧ ಕಿಟ್ಟನ್ನು ಕೊಡುಗೆಯಾಗಿ ನೀಡುತ್ತಿದ್ದು. ಇದರಲ್ಲಿ ಕೊಯಮುತ್ತೂರು ಕಾಲೋನಿಯ ಕೆಲ ಸೋಂಕಿತರಿಗೆ ವಿತರಿಸಿ, ಉಳಿದವನ್ನು ತಾಲೂಕು ಆಡಳಿತಕ್ಕೆ ಹಸ್ತಾಂತರಿಸಲಾಗುವುದೆಂದರು.
ಆದಿವಾಸಿಗಳಿಗೆ ಪಡಿತರ:
ತಾಲೂಕಿನ ಸುಮಾರು ಆರು ಸಾವಿರ ಆದಿವಾಸಿ ಕುಟುಂಬಗಳಿಗೆ ಹಾಗೂ ಆಶ್ರಮ ಶಾಲೆ ಮಕ್ಕಳಿಗೂ ಸರಕಾರದ ವತಿಯಿಂದಲೇ ಪ್ರತ್ಯೇಕ ಪಡಿತರ ವಿತರಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ಜಿಲ್ಲಾದ್ಯಂತ ಆದಿವಾಸಿಗಳಿಗೆ ಕಿಟ್ ವಿತರಣೆಯಾಗುತ್ತಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಆದಿವಾಸಿಗಳು ಗೆಡ್ಡೆ-ಗೆಣಸು ಕಿತ್ತು ರಾಶಿಹಾಕಿರುವ ಬಗ್ಗೆ ವ್ಯಾಪಕ ಪ್ರಚಾರವಾಗುತ್ತಿರುವುದು ಬೇಸರದ ಸಂಗತಿ, ಈ ಬಗ್ಗೆ ಸುಖಾಸುಮ್ಮನೆ ಪ್ರಚಾರ ನೀಡಬಾರದೆಂದು ಮನವಿ ಮಾಡಿದರು.
ಸಮಾಜಾಯಿಷಿ ನೀಡಿದ ತಹಸೀಲ್ದಾರ್ ಬಸವರಾಜು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಕಳೆದ ವರ್ಷದ್ದೆಂದು ಮಾಹಿತಿ ಪಡೆಯಲಾಗಿದೆ. ಆದರೆ ತಮಗೂ ವರ್ಷದ ಪಡಿತರ ಜೊತೆಗೆ ಹತ್ತು ಸಾವಿರ ರೂ ಪ್ಯಾಕೇಜ್ ಘೋಷಣೆ ಮಾಡಬೇಕು, ಅರಣ್ಯಹಕ್ಕು ಮಾನ್ಯತಾ ಕಾಯ್ದೆ ಜಾರಿಗೊಳಿಸಿಕೊಡಬೇಕೆಂದು ನ್ಯಾಯಾಧೀಶರೊಂದಿಗೆ ನೇರಳಕುಪ್ಪೆ ಹಾಡಿಗೆ ಭೇಟಿ ನೀಡಿದ್ದ ವೇಳೆ ಆದಿವಾಸಿಗಳು ಮನವಿ ಮಾಡಿದ್ದಾರೆ. ಈಗಾಗಲೆ ತಾಲೂಕಿನಾದ್ಯಂತ ಆದಿವಾಸಿಗಳಿಗೆ ಹಾಗೂ ಆಶ್ರಮ ಶಾಲಾ ಮಕ್ಕಳಿಗೆ ಪಡಿತರ ವಿತರಣೆಯಾಗುತ್ತಿದೆ ಎಂದರು.
ಎಂ.ಎಲ್.ಸಿ.ಯವರೊಂದಿಗೆ ತಾಲೂಕು ಬಿಜೆಪಿ ಅಧ್ಯಕ್ಷ ಹಳ್ಳದಕೊಪ್ಪಲುನಾಗಣ್ಣ, ಮಹಿಳಾ ಅಧ್ಯಕ್ಷೆ ಕಮಲಾಪ್ರಕಾಶ್, ನಗರಸಭೆ ಸದಸ್ಯರಾದ ಹರೀಶ್, ಸಾಯಿನಾಥ್, ಉಮೇಶ್, ಶ್ರೀನಿವಾಸ್, ರಮೇಶ್, ಮಾಜಿ ಅಧ್ಯಕ್ಷ ಶಿವಕುಮಾರ್, ಮುಖಂಡರಾದ ಹಳ್ಳಿಮನೆ ಸಂದೇಶ್(ಸ್ಯಾಂಡಿ), ಡಾ. ಶ್ರೀಕಾಂತ್, ಇಂಟೆಕ್‌ರಾಜು, ನಿಂಗರಾಜ್ ಮಲ್ಲಾಡಿ, ಬಲ್ಲೇನಹಳ್ಳಿ ಕೆಂಪರಾಜ್ ಇದ್ದರು.
ಇದನ್ನೂ ಓದಿ : ಕೋವಿಡ್ ನಿಯಮದಿಂದ ತಪ್ಪಿಸಿಕೊಳ್ಳಲು ವಿಮಾನದಲ್ಲಿ ಮದುವೆ; ವೈರಲ್ ವಿಡಿಯೋದಿಂದ ತನಿಖೆಯ ಬಿಸಿ!