Advertisement

ಎಚ್‌-1ಬಿ ಪ್ರೀಮಿಯಂ ವೀಸಾ ಪ್ರಕ್ರಿಯೆ ರದ್ದು

03:50 AM Mar 18, 2017 | Team Udayavani |

ವಾಷಿಂಗ್ಟನ್‌: ಭಾರತ ಮೂಲದ ಐಟಿ ಕಂಪನಿಗಳು ಹಾಗೂ ವೃತ್ತಿಪರರಲ್ಲಿ ಸಾಕಷ್ಟು ಜನಪ್ರಿಯವಾಗಿರುವ ಎಚ್‌-1ಬಿ ವೀಸಾ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ­ರುವು­ದಾಗಿ ಅಮೆರಿಕ ಶುಕ್ರವಾರ ತಿಳಿಸಿದೆ.

Advertisement

ಎಪ್ರಿಲ್‌ ತಿಂಗಳ ಮೊದಲ ವಾರದಲ್ಲಿ ಉದ್ಯೋಗ ವೀಸಾ ಬಯಸಿ ಸಾಕಷ್ಟು ಅರ್ಜಿಗಳು ಬರಲಿದ್ದು, ಅವುಗಳನ್ನು ಸಮರ್ಪಕವಾಗಿ ನಿಭಾಯಿಸುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿರುವ ಅಮೆರಿಕ, ಎಚ್‌1ಬಿ ವೀಸಾ ಪ್ರಕ್ರಿಯೆಯನ್ನು ರದ್ದುಗೊಳಿಸಿಲ್ಲ. ಇನ್ನು 15 ದಿನಗಳಲ್ಲಿ ಪ್ರಕ್ರಿಯೆ ಮತ್ತೆ ಆರಂಭವಾಗಲಿದೆ ಎಂದು ಸ್ಪಷ್ಟಪಡಿಸಿದೆ. ಎಪ್ರಿಲ್‌ ಮೊದಲ ವಾರದ ವೇಳೆಗೆ ಯುಎಸ್‌ ಸಿಟಿಜನ್‌ ಆಂಡ್‌ ಇಮಿಗ್ರೇಷನ್‌ ಸರ್ವಿಸಸ್‌ (ಯುಎಸ್‌ಸಿಐಎಸ್‌) ಸುಮಾರು 200,000ಕ್ಕೂ ಹೆಚ್ಚು “ಎಚ್‌-1ಬಿ’ ಅರ್ಜಿಗಳನ್ನು ಸ್ವೀಕರಿಸುತ್ತದೆ. ಕೇವಲ 15 ದಿನಗಳಲ್ಲಿ ಈ ಎಲ್ಲ ಅರ್ಜಿಗಳ ಪ್ರಕ್ರಿಯೆ ಪೂರ್ಣಗೊಳಿಸುವುದು ನಮ್ಮಿಂದ ಅಸಾಧ್ಯ. ಹಾಗೇ ಎಪ್ರಿಲ್‌ನಲ್ಲಿ ಅರ್ಜಿ ಸಲ್ಲಿಸಿದ ವೀಸಾಗಳು ಅಕ್ಟೋಬರ್‌ವರೆಗೂ ಲಭ್ಯವಾಗುವುದಿಲ್ಲ ಎಂದು ಅಮೆರಿಕ ಸರಕಾರ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next