ಬೆಂಗಳೂರು: ನಗರದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಹಾದೇವಪುರ, ಪಶ್ಚಿಮ ವಲಯ, ದಕ್ಷಿಣ ವಲಯದಲ್ಲಿ ಹೆಚ್ಚು ಕೇಸ್ ಗಳು ಪತ್ತೆಯಾಗುತ್ತಿವೆ. ಸೋಂಕು ತಡೆಗೆ ಕಠಿಣ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದ್ದು, ಚಿತ್ರಮಂದಿರ, ಮದುವೆ ಸಮಾರಂಭಗಳಲ್ಲಿ ಹೆಚ್ಚು ಜನ ಸೇರದಂತೆ ತಡೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಬಿಬಿಎಂಪಿ ವ್ಯಾಪ್ತಿಯ ಅಪಾರ್ಟ್ಮೆಂಟ್ ಗಳ ಆವರಣಗಳನ್ನು ಮುಚ್ಚಬೇಕು. ಅಪಾರ್ಟ್ಮೆಂಟ್ ಗಳ ಆಟದ ಮೈದಾನ, ಜಿಮ್, ಸ್ವಿಮ್ಮಿಂಗ್ ಪೂಲ್, ಪಾರ್ಟಿ ಹಾಲ್ ಜಾಗ ಬಂದ್, ಬಿಬಿಎಂಪಿಯ ಪಾರ್ಕ್ ಗಳಲ್ಲಿ ಇರುವ ಜಿಮ್ ಮುಚ್ಚುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಇದನ್ನೂ ಓದಿ:‘ಪರೀಕ್ಷಾ ಪೇ ಚರ್ಚಾ’ಗೆ ಆಯ್ಕೆ: ಆರ್ಡಿ ಶಾಲೆಯ ಅನುಷಾಗೆ ಅಭಿನಂದನೆ ಸಲ್ಲಿಸಿದ ಸುರೇಶ್ ಕುಮಾರ್
ಚಿತ್ರಮಂದಿರಗಳಲ್ಲಿ ಎಷ್ಟು ಪ್ರಕರಣಗಳು ಬರುತ್ತಿದೆ ಎಂಬ ಮಾಹಿತಿಯಿಲ್ಲ. ಆದರೆ ಶೇ.100 ರಷ್ಟು ಜನರು ಮುಚ್ಚಿದ ಸಭಾಂಗಣದಲ್ಲಿದ್ದಾಗ ಕೇಸ್ ಹೆಚ್ಚಳವಾಗುತ್ತದೆ. ಹಾಗಾಗಿ ಚಿತ್ರಮಂದಿರಗಳಲ್ಲಿ ಶೇ.50 ರಷ್ಟು ಜನರಿಗೆ ಮಾತ್ರ ಅವಕಾಶ ನೀಡಬೇಕು ಎಂದು ಬಿಬಿಎಂಪಿ ಪ್ರಸ್ತಾವನೆಯಲ್ಲಿ ತಿಳಿಸಿದೆ.
ಮದುವೆಗೆ 200 ಜನ: ವಿವಾಹ ಸಮಾರಂಭದಲ್ಲಿ ಹೆಚ್ಚು ಜನ ಸೇರದಂತೆ ಬಿಬಿಎಂಪಿ ಕ್ರಮಕ್ಕೆ ಮುಂದಾಗಿದ್ದು, ಇಡೀ ಮದುವೆಗೆ 200 ಜನರು ಮಾತ್ರ ಸೇರಬೇಕು. ಇದರ ಜವಾಬ್ದಾರಿಯು ಮದುವೆ ಮಾಡುವವರು ಮತ್ತು ಕಲ್ಯಾಣ ಮಂಟಪ ಮಾಲಿಕರು ಮೇಲಿರುತ್ತದೆ. ಮುಚ್ಚಿದ ಸಭಾಂಗಣದ ಸಮಾರಂಭದಲ್ಲಿ 200 ಜನ, ಹೊರಾಂಗಣ ಸಮಾರಂಭಗಳಲ್ಲಿ 500 ಜನಕ್ಕೆ ಮಾತ್ರ ಅವಕಾಶ ನೀಡಬೇಕು ಎಂದಿದೆ.
ಇದನ್ನೂ ಓದಿ: ಸಾಫ್ಟ್ ಸಿಗ್ನಲ್ ಗೆ ಬಲಿಯಾದ ಹಾರ್ಡ್ ಹಿಟ್ಟರ್ ಸೂರ್ಯ: ಏನಿದು ಸಾಫ್ಟ್ ಸಿಗ್ನಲ್?