Advertisement

ಬಡತನ ಅಡ್ಡಿಯಾದರೂ ಛಲ ಬಿಡದ ಗ್ಯಾನಪ್ಪ 

06:10 AM May 20, 2018 | |

ಉಡುಪಿ: ಮನಸ್ಸಿದ್ದರೆ ಮಾರ್ಗ ಎನ್ನುವುದಕ್ಕೆ ಸೂಕ್ತ ಉದಾಹರಣೆ ಗ್ಯಾನಪ್ಪ ದಳವಾಯಿ. ಕಲಿಯುವ ಉತ್ಕಟ ಆಸೆಗೆ ಬಡತನ ಅಡ್ಡಿ ಬಂದರೂ ಛಲ ಬಿಡದೆ ಬಂದ ಅಡೆತಡೆಗಳನ್ನು ಮೀರಿ ಈ ಬಾರಿ ನಡೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ 577 ಅಂಕ ಪಡೆದಿದ್ದಾನೆ. ಮಣಿಪಾಲದ ರಾಜೀವನಗರದಲ್ಲಿರುವ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯಾಗಿರುವ ಇವನ ಹುಟ್ಟೂರು ಬಿಜಾಫ‌ುರ ಜಿಲ್ಲೆಯ ಮನಗೋಳಿ. ಕೂಲಿ ಕೆಲಸ ಅರಸಿ ಬಂದ ಇವರ ತಂದೆ (ದೂರವಾಣಿ: 9008074659) ಮಣಿಪಾಲದ ಪ್ರಗತಿನಗರದಲ್ಲಿ. ಬಿಡಾರ ಹೂಡಿದ್ದಾರೆ. 

Advertisement

ಗ್ಯಾನಪ್ಪನ ತಂದೆ ದುಡಿದರಷ್ಟೇ ಮನೆಯಲ್ಲಿ ಆ ದಿನದ ತುತ್ತು, ಇಲ್ಲದಿದ್ದರೆ ಉಪವಾಸ. ಇಂತಹ ಪರಿಸ್ಥಿತಿಯಲ್ಲೂ ಸಾಧನೆ ಮಾಡುವ ಹಂಬಲ ಇವನನ್ನು ಬಿಡಲಿಲ್ಲ. ತಾಯಿಗೆ ಮನೆ ಕೆಲಸದಲ್ಲಿ ಸಹಕಾರ ನೀಡಿ, ಪ್ರತಿನಿತ್ಯ ಆಯಾ ದಿನದ ಪಾಠ ಪ್ರವಚನಗಳನ್ನು ರಾತ್ರಿ ವೇಳೆ ಓದಿ ಪರೀಕ್ಷೆಯನ್ನು ಎದುರಿಸಿದ್ದಾನೆ. ಭವಿಷ್ಯದ ಬಗ್ಗೆ ದೊಡ್ಡ ಕನಸನ್ನು ಹೊಂದಿರುವ ಗ್ಯಾನಪ್ಪ, ಕುಟುಂಬದ ಕಷ್ಟವನ್ನು ತನ್ನಲ್ಲಿಗೆ ಕೊನೆಗೊಳಿಸಬೇಕೆಂಬ ಹಂಬಲವಿದೆ. ಔಷಧ ವಿಜ್ಞಾನ ವಿಷಯದಲ್ಲಿ ಸಾಧನೆ ಮಾಡಬೇಕೆಂಬ ಹಂಬಲ ಹೊಂದಿದ್ದಾನೆ. ಪಿಯುಸಿಯಲ್ಲಿ ಪಿಸಿಎಂಬಿ ವಿಷಯ ತೆಗೆದುಕೊಳ್ಳಲು ಆಸಕ್ತಿ ಇರುವ ಇವನಿಗೆ ಆರ್ಥಿಕ ಅಡಚಣೆ ಸವಾಲಾಗಿದೆ. 

ಸಾಧನೆ ಹಂಬಲ
ಶಾಲೆಯಲ್ಲಿ ಟೀಚರ್‌ ಹೇಳಿಕೊಟ್ಟಿದ್ದನ್ನು ಪ್ರತಿನಿತ್ಯ ಮನೆಯಲ್ಲಿ ಅಭ್ಯಾಸ ಮಾಡುತ್ತಿದ್ದೆ. ಪರೀಕ್ಷೆ ಸಂದರ್ಭ ಸ್ವಲ್ಪ ಹೆಚ್ಚಿನ ಸಮಯ ನಿಗದಿಪಡಿಸಿ ಓದಿದ್ದೇನೆ. ಔಷಧಗಳ ಬಗ್ಗೆ ಬಹಳಷ್ಟು ಆಸಕ್ತಿ ಹೊಂದಿದ್ದೇನೆ. ಈ ಕ್ಷೇತ್ರದಲ್ಲೇ ಸಾಧನೆ ಮಾಡಬೇಕೆಂಬ ಹಂಬಲ ಹೊಂದಿದ್ದೇನೆ.

– ಗ್ಯಾನಪ್ಪ ದಳವಾಯಿ

Advertisement

Udayavani is now on Telegram. Click here to join our channel and stay updated with the latest news.

Next