Advertisement

UNESCO: ಸೃಜನಶೀಲ ನಗರ ಪಟ್ಟಿಗೆ ಗ್ವಾಲಿಯರ್‌, ಕಲ್ಲಿಕೋಟೆ

12:30 AM Nov 02, 2023 | Pranav MS |

ಹೊಸದಿಲ್ಲಿ: ಯುನೆಸ್ಕೊ ಸಿದ್ಧಪಡಿಸಿರುವ ಜಗತ್ತಿನ 55 ಸೃಜನಶೀಲ ನಗರಗಳ ಪಟ್ಟಿಯಲ್ಲಿ ಮಧ್ಯಪ್ರದೇಶದ ಗ್ವಾಲಿಯರ್‌ ಹಾಗೂ ಕೇರಳದ ಕಲ್ಲಿಕೋಟೆ ಸ್ಥಾನ ಪಡೆದಿವೆ.

Advertisement

ಯುನೆಸ್ಕೊ ತನ್ನ ವೆಬ್‌ಸೈಟ್‌ನಲ್ಲಿ ಈ ಪಟ್ಟಿಯನ್ನು ಪ್ರಕಟಿಸಿದೆ. ವಿಶ್ವ ನಗರಗಳ ದಿನಾಚರಣೆ ಅಂಗವಾಗಿ ಮಂಗಳವಾರ ವಿಶ್ವದ ಸೃಜನಶೀಲ ನಗರಗಳ ಪಟ್ಟಿಯನ್ನು ಯುನೆಸ್ಕೊ ಬಿಡುಗಡೆಗೊಳಿಸಿದೆ. ಸಂಗೀತ ವಿಭಾಗದಲ್ಲಿ ಗ್ವಾಲಿಯರ್‌ ಹಾಗೂ ಸಾಹಿತ್ಯ ವಿಭಾಗದಲ್ಲಿ ಕಲ್ಲಿಕೋಟೆ ಸ್ಥಾನ ಪಡೆದಿವೆ.

“ಸಂಸ್ಕೃತಿ ಮತ್ತು ಸೃಜನಶೀಲತೆಯು ಈ ನಗರಗಳ ಅಭಿವೃದ್ಧಿಯ ಅವಿಭಾಜ್ಯ ಅಂಗವಾಗಿವೆ. ಮಾನವ ಕೇಂದ್ರಿತ ನಗರ ಯೋಜನೆಗಳ ಅನುಷ್ಠಾನದಲ್ಲಿಯೂ ನಾವೀನ್ಯತೆಯ ಹೊಸ ಅಧ್ಯಯನಕ್ಕೆ ಈ ನಗರಗಳು ಮುನ್ನುಡಿ ಬರೆದಿವೆ” ಎಂದು ಯುನೆಸ್ಕೊ ಹೇಳಿದೆ.

ಅಮಿತ್‌ ಶಾ ಸಂತಸ: ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕಲ್ಲಿಕೋಟೆ ಸಾಹಿತ್ಯಗಳ ನಗರ ಎಂಬ ಕಾರಣಕ್ಕೆ, ಗ್ವಾಲಿಯರ್‌ ಅನ್ನು ಸಂಗೀತದ ನಗರ ಎಂಬ ಹೆಗ್ಗಳಿಕೆ ಯಿಂದ 2 ನಗರಗಳಿಗೆ ಮಾನ್ಯತೆ ಸಿಕ್ಕಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next