Advertisement

ಪೇಜಾವರ ಶ್ರೀಗಳಿಗೆ ಗುರುವಂದನೆ

11:24 AM Dec 26, 2017 | Team Udayavani |

ಉಡುಪಿ: ತಿರುಮಲ ತಿರುಪತಿ ದೇವಸ್ಥಾನದ ದಾಸ ಸಾಹಿತ್ಯ ಪ್ರಾಜೆಕ್ಟ್ ವತಿಯಿಂದ ಶ್ರೀಕೃಷ್ಣ ಮಠದಲ್ಲಿ ಆಯೋಜಿಸಲಾದ ಹರಿದಾಸೋತ್ಸವ ಮತ್ತು ಗುರುವಂದನ ಕಾರ್ಯಕ್ರಮದಲ್ಲಿ ಸೋಮವಾರ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರನ್ನು ಗೌರವಿಸಲಾಯಿತು.

Advertisement

ಮೂರು ದಿನಗಳ ಕಾಲ ನಡೆದ ಹರಿದಾಸೋತ್ಸವದ ಸಮಾರೋಪ ಸಮಾರಂಭವೂ ಇದೇ ಸಂದರ್ಭ ಜರುಗಿತು. ಪ್ರಾಜೆಕ್ಟ್ ವಿಶೇಷಾಧಿಕಾರಿ ಆನಂದತೀರ್ಥಾಚಾರ್ಯ ಪಗಡಾಲ ಅವರು ತಿರುಪತಿ ದೇವಸ್ಥಾನದ ಕ್ರಮದಂತೆ ಶ್ರೀನಿವಾಸನಿಗೆ ಸಮರ್ಪಿಸಿದ ವಸ್ತ್ರವನ್ನು ಸ್ವಾಮೀಜಿಯವರಿಗೆ ರುಮಾಲು ಸುತ್ತಿ ಗೌರವ ಸಮರ್ಪಿಸಿದರು.

ಹರಿನಾಮ ಸಂರ್ಕಿರ್ತನೆಯಿಂದ ಮನಸ್ಸು, ಪರಿಸರ ಸ್ವತ್ಛವಾಗುತ್ತದೆ. ದೇಶದ ಉನ್ನತಿಯೂ ಸಾಧ್ಯ. ಹರಿನಾಮ ಪಠಿಸುವುದರಿಂದ ಭಗವಂತನಿಗೆ ಕೃತಜ್ಞತೆಯನ್ನು ಸಲ್ಲಿಸಿದಂತಾಗುತ್ತದೆ ಎಂದು ಪೇಜಾವರ ಶ್ರೀಪಾದರು ತಿಳಿಸಿದರು.

ತೆಲಂಗಾಣ ಉಪಮುಖ್ಯಮಂತ್ರಿ ಕಡಿಯಮ್‌ ಶ್ರೀಹರಿ ಅವರು ಮಾತನಾಡಿ, ತೆಲುಗಿನವರು ಸೇರಿ ದೊಡ್ಡ ಕ್ಷೇತ್ರದಲ್ಲಿ ಮಾಡುವ ಕಾರ್ಯಕ್ರಮದಲ್ಲಿ ತನಗೆ ಪಾಲ್ಗೊಳ್ಳಲು ಅವಕಾಶ ಸಿಕ್ಕಿದ್ದು ವಿಶೇಷ ಸೌಭಾಗ್ಯ ಎಂದರು. ಆನಂದತೀರ್ಥಾಚಾರ್ಯ ಸ್ವಾಗತಿಸಿ, ಗೋಪಾಲಾಚಾರ್ಯ ವಂದಿಸಿದರು. ಗುಂಟೂರು ಶ್ರೀನಿವಾಸ ರಾವ್‌ ಸೇರಿದಂತೆ ಪ್ರಾಜೆಕ್ಟ್ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next