ಕೆ.ಆರ್.ನಗರ: ತಾಲೂಕಿನ ಚುಂಚನಕಟ್ಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 2012-13ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ ಮತ್ತು ಸ್ನೇಹಿತರ ಸಮ್ಮಿಲನ ಯಶಸ್ವಿಯಾಗಿ ನಡೆಯಿತು. ತಾವು ಓದಿದ ಶಾಲೆಯ ಶಿಕ್ಷಕರನ್ನು ಒಂದೆಡೆ ಸೇರಿಸಿ ಅವರನ್ನು ಅರ್ಥಪೂರ್ಣವಾಗಿ ಗೌರವಿಸಿ ಅಭಿನಂದಿಸಿದರು.
ನಿವೃತ್ತ ಮುಖ್ಯ ಶಿಕ್ಷಕ ಜಿ.ಟಿ.ರಾಮೇಗೌಡ, ನಿವೃತ್ತ ಶಿಕ್ಷಕ ರಾಜೇಗೌಡ, ವರ್ಗಾವಣೆಗೊಂಡಿರುವ ಶಿಕ್ಷಕರಾದ ಕೋಟ್ರಪ್ಪಕುಂದೂರು, ತಿಮ್ಮರಾಯಪ್ಪ, ಮಂಜುನಾಥ್, ಶಿಕ್ಷಕರಾದ ಸಿ.ಆರ್.ಉದಯಕುಮಾರ್, ಶಶಿಧರ್, ಮಲಿಯಪ್ಪ, ಜಗದೀಶ್, ಶೋಭಾ, ಸಿಬ್ಬಂದಿಗಳಾದ ಜಯಮ್ಮ, ಹರೀಶ್‌ರಿಗೆ ಶಾಲೆಯ 20ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಆತ್ಮಿಯವಾಗಿ ನೆನಪಿನ ಕಾಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ವಿನಯ್‌ದೊಡ್ಡಕೊಪ್ಪಲು, ತಾವು ಓದಿದ ಶಾಲೆಯ ಎಲ್ಲಾ ಶಿಕ್ಷಕರನ್ನು ಒಂದೆಡೆ ಸೇರುವುದೇ ದೊಡ್ಡ ಸಾಧನೆ. ಇಂತಹ ದಿನಗಳಲ್ಲಿ ತಾವು ಓದಿದ ಶಾಲೆಯಲ್ಲಿ ಶಿಕ್ಷಕರಾಗಿದ್ದವರನ್ನು ಒಂದೆಡೆ ಸೇರಿಸಿ ಅವರನ್ನು ಗೌರವಿಸಿ ಅಭಿನಂದಿಸುವ ಕೆಲಸ ಮಾಡುತ್ತಿರುವ ಬಗ್ಗೆ ಭಾವುಕರಾಗಿ ವಿದ್ಯಾರ್ಥಿಗಳ ಕಾರ್ಯವನ್ನು ಶ್ಲಾ ಸಿದರು.
ತಾಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಆರ್.ಉದಯಕುಮಾರ್, ಕಳೆದ 70 ವರ್ಷಗಳಿಂದ ನಡೆಯುತ್ತಿರುವ ಈ ಶಾಲೆಯಲ್ಲಿ ಪ್ರಥಮ ಬಾರಿಗೆ ಗುರುವಂದನೆ ಏರ್ಪಡಿಸಿ ಗುರುಗಳಿಗೆ ಗೌರವ ಸಲ್ಲಿಸಲಾಗುತ್ತಿದೆ ಎಂದರು.
ಈ ವೇಳೆ ವಿದ್ಯಾರ್ಥಿಗಳು ಶಿಕ್ಷಕರು ಶಾಲೆಯ ಅವಧಿಯಲ್ಲಿ ವಿದ್ಯಾರ್ಥಿಗಳ ತುಂಟತನ ಉತ್ತಮ ನಡತೆ ಕ್ರೀಡೆಯಲ್ಲಿ ಹೆಚ್ಚಿನ ರೀತಿಯಲ್ಲಿ ಭಾಗವಹಿಸುವುದು ಸೇರಿದಂತೆ ಇನ್ನಿತರ ಚಟುವಟಿಕೆಗಳ ಬಗ್ಗೆ ಮೆಲಕು ಹಾಕಿದರು. ಅಲ್ಲದೆ, ತಮ್ಮ ಅವಧಿಯಲ್ಲಿನ ಶಿಕ್ಷಣವನ್ನು ನೆನೆದು ವಿದ್ಯಾರ್ಥಿಗಳು ಕಣ್ಣೀರು ಹಾಕಿದರು. ಅಲ್ಲದೆ, ಕೇಕ್ ಕತ್ತರಿಸಿ ಶಿಕ್ಷಕರ ದಿನವನ್ನು ಆಚರಿಸಿ ಶುಭಕೋರಿದರು.
ತಾಲೂಕು ಒಕ್ಕಲಿಗರ ನೌಕರರ ಸಂಘದ ಕಾರ್ಯದರ್ಶಿ ಸುರೇಶ್, ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜು, ಗೌರವಾಧ್ಯಕ್ಷ ಲೋಕೇಶ್, ಹಳೆಯ ವಿದ್ಯಾರ್ಥಿಗಳಾದ ಎಚ್.ಕೆ.ದಿವ್ಯಾ, ಶಿಲ್ಪಾ, ಸುಷ್ಮಾ, ಸುಚಿತ್ರಾ, ಭೂಮಿಕಾ, ಭವಾನಿ, ಆಶಾ, ದಿವ್ಯಾ, ಅಂಕಿತಾ, ಶ್ವೇತಾ, ಸಿಂಚನಾ, ಶಿವಕುಮಾರ್, ನಂದಯ್ಯ, ಮಹೇಂದ್ರ, ನಿರಂಜನ್, ಚಂದ್ರಶೇಖರ್, ಸುಭಾಷ್, ಅಭಿಷೇಕ್, ಉದಯ್, ನಾಗೇಶ್, ಅವಿನಾಶ್, ಮನೋಜ್, ನಂದನ್, ಭರತ್ ಕಾರ್ತಿಕ್ ಮತ್ತಿತರರಿದ್ದರು.