Advertisement

ಬಿಳಿಶಿವಾಲೆ ಶಾಲೆಯಲ್ಲಿ ಗುರುವಂದನೆ

12:29 PM Sep 24, 2018 | |

ಮಹದೇವಪುರ: ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯವನ್ನು ಪಠ್ಯದಲ್ಲಿ ಸಮಗ್ರವಾಗಿ ಅಳವಡಿಸಿಕೊಂಡರೆ ಶಿಕ್ಷಣದ ಗುಣಮಟ್ಟ ಉತ್ತಮಗೊಳ್ಳಲಿದೆ ಎಂದು ಶಿಕ್ಷಕ ಪಿ.ಸಿ.ಜರ್ನಾರ್ಧನ ಸ್ವಾಮಿ ಅಭಿಪ್ರಾಯಪಟ್ಟರು.

Advertisement

ಕ್ಷೇತ್ರದ ಬಿಳಿಶಿವಾಲೆಯ ಸರ್ಕಾರಿ ಪ್ರೌಢಶಾಲೆಯಲ್ಲಿ 1997-98ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಂತಹ ಅನಗತ್ಯ ವಿಚಾರಗಳಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿದ್ದು, ಸಂಸ್ಕಾರ ಮತ್ತು ಮಾನವೀಯ ಸಂಬಂಧಗಳಿಂದ ದೂರವಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಎ.ಎಸ್‌.ವೆಂಕಟಚಲ ಅವಧಾನಿ, ಉಮಾರಾಣಿ ಹಾಗೂ ಹಳೆಯ ವಿದ್ಯಾರ್ಥಿಗಳಾದ ಸದಾಶಿವ, ಸಂದೇಶ್‌, ಗಜೇಂದ್ರ, ಅಂಜನಮೂರ್ತಿ, ಡಿ.ಎಂ.ಮಾರುತಿಕುಮಾರ್‌, ಚೈತ್ರ, ರಮಾಮಣಿ, ಬಿ.ಜಿ.ಮಂಜುನಾಥ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next