Advertisement

ಗುರುಮಠಕಲ್‌ನಲ್ಲಿ ಪರೀಕ್ಷೆ ಸುಗಮ

04:56 PM Jun 26, 2020 | Naveen |

ಗುರುಮಠಕಲ್‌: ತಾಲೂಕಿನಾದ್ಯಂತ ಗುರುವಾರ ಮೊದಲ ದಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆದವು. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಥರ್ಮಲ್‌ ಸ್ಕ್ರೀನಿಂಗ್‌ ನಡೆಸಿ, ಮಾಸ್ಕ್ ವಿತರಿಸಲಾಯಿತು.

Advertisement

ಕೈಗಳಿಗೆ ಸ್ಯಾನಿಟೈಸ್‌ ಮಾಡಿ ಪರೀಕ್ಷಾ ಕೊಠಡಿಗಳಿಗೆ ಬಿಡಲಾಯಿತು. ಗುರುಮಠಕಲ್‌ ಸರ್ಕಾರಿ ಬಾಲಕಿಯರ ಪ.ಪೂ. ಕಾಲೇಜು ಕೇಂದ್ರದಲ್ಲಿ ಒಟ್ಟು 256 ವಿದ್ಯಾರ್ಥಿಗಳಲ್ಲಿ 243 ಜನ ಪರೀಕ್ಷೆಗೆ ಹಾಜರಾಗಿದ್ದು, 13 ಜನ ಗೈರಾಗಿದ್ದರು. ಬಾಲಕಿಯರ ಪ್ರೌಢಶಾಲೆ ಕೇಂದ್ರದಲ್ಲಿ 1 ವಲಸೆ ವಿದ್ಯಾರ್ಥಿ ಸೇರಿ ಒಟ್ಟು 257 ವಿದ್ಯಾರ್ಥಿಗಳಲ್ಲಿ 28 ಜನ ಗೈರಾಗಿದ್ದು, 229 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರು. ಫ್ರಂಟ್‌ ಲೈನ್‌ ಪ್ರೌಢಶಾಲಾ ಕೇಂದ್ರದಲ್ಲಿ 285 ವಿದ್ಯಾರ್ಥಿಗಳಲ್ಲಿ 22 ಜನ ಗೈರಾಗಿ, 263 ಜನ ಪರೀಕ್ಷೆ ಬರೆದರು.

ಗಾಜರಕೋಟ ಗ್ರಾಮದ ಪರೀಕ್ಷಾ ಕೇಂದ್ರದಲ್ಲಿ ಇಬ್ಬರು ವಲಸೆ ವಿದ್ಯಾರ್ಥಿ ಸೇರಿ ಒಟ್ಟು 268 ವಿದ್ಯಾರ್ಥಿಗಳಲ್ಲಿ 30 ಜನ ಗೈರಾಗಿದ್ದು, 238 ಜನ ಹಾಜರಿದ್ದರು. ಮಾಧ್ವಾರ ಗ್ರಾಮದ ಕೇಂದ್ರದಲ್ಲಿ ಇಬ್ಬರು ವಲಸೆ ವಿದ್ಯಾರ್ಥಿ ಸೇರಿ ಒಟ್ಟು 240 ಜನರಲ್ಲಿ 220 ಜನ ಹಾಜರಿದ್ದರು. 20 ವಿದ್ಯಾರ್ಥಿಗಳು ಗೈರಾಗಿದ್ದರು. ಕಂದಕೂರ ಗ್ರಾಮದ ಕೇಂದ್ರದಲ್ಲಿ ಒಟ್ಟು 388ರಲ್ಲಿ 34 ಜನ ಗೈರಾಗಿದ್ದು,254 ವಿದ್ಯಾರ್ಥಿಗಳು ಹಾಜರಿದ್ದರು. ಯಲ್ಹೇರಿ ಪ್ರೌಢಶಾಲೆ ಉಪ ಕೇಂದ್ರದಲ್ಲಿ 123 ರಲ್ಲಿ 115 ಜನ ಹಾಜರಿದ್ದರು. 8 ಜನ ಗೈರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next